fbpx
ಮನೋರಂಜನೆ

ಬಿಗ್ ಬಾಸ್ ಕಾರ್ಯಕ್ರಮದ ವಿರುದ್ಧ ಬ್ರಾಹ್ಮಣರ ಆಕ್ರೋಶ..! ಕಾರಣವೇನು ಗೊತ್ತಾ?

ಬಿಗ್ ಬಾಸ್ ಕಾರ್ಯಕ್ರಮದ ವಿರುದ್ಧ ಬ್ರಾಹ್ಮಣರ ಆಕ್ರೋಶ..! ಕಾರಣವೇನು ಗೊತ್ತಾ?

 

 

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಾರಥ್ಯದಲ್ಲಿ ಮೂಡಿಬರುವ ಕನ್ನಡ ಕಿರುತೆರೆಯ ಅತಿದೊಡ್ಡ ಮತ್ತು ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ಸೀಸನ್ 5 ಕಾರ್ಯಕ್ರಮ ದಿನಗಳು ಕಳೆಯುತ್ತಿದ್ದಂತೆ ಭಾರಿ ಕುತೂಹಲ ಕೆರಳಿಸುತ್ತಿದೆ..ಈಗ ಎಲ್ಲರ ಮೆಚ್ಚಿನ ಬಿಗ್ ಬಾಸ್ ಕಾರ್ಯಕ್ರಮದ ಮೇಲೆ ಬ್ರಾಹ್ಮಣ ಸಮುದಾಯದವರು ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸುತ್ತಿದ್ದಾರೆ..

 

 

ಅಷ್ಟಕ್ಕೂ ಬಿಗ್ ಬಾಸ್ ಕಾರ್ಯಕ್ರಮದ ಮೇಲೆ ಬ್ರಾಹ್ಮಣ ಸಮುದಾಯದವರು ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸಲು ಕಾರಣ ಏನು ಅಂತೀರಾ? ಮುಂದೆ ಓದಿ..ಇದಕ್ಕೆ ಕಾರಣ ಬಿಗ್ ಬಾಸ್ ಸೀಸನ್-5ನಲ್ಲಿ ಸಾಮಾನ್ಯ ವ್ಯಕ್ತಿಯ ಕೋಟಾದಲ್ಲಿ ಭಾಗವಹಿಸಿರುವ ಸಮೀರಾಚಾರ್ಯ..ವಾರದ ಹಿಂದೆ ಸಮೀರ್ ಆಚಾರ್ಯ ರವರು ಹಾಡಿರುವ ಒಂದು ಹಾಡು ಈಗ ಬ್ರಾಹ್ಮಣ ಸಮುದಾಯದ ಕೋಪಕ್ಕೆ ಕಾರಣವಾಗಿದೆ..

 

 

ಬಿಗ್ ಬಾಸ್ ಮನೆಯಲ್ಲಿ ಒಮ್ಮೆ ತಮ್ಮ ಸಹ ಸ್ಪರ್ಧಿಗಳ ಜೊತೆ ಗಾಯಿತ್ರಿ ಮಾತ್ರವನ್ನು ಪಾಶ್ಚಿಮಾತ್ಯ ಸಂಗೀತದ ದಾಟಿಯಲ್ಲಿ ಹಾಡಿದ್ದಾರೆ ಮತ್ತು ಅವರು ಹಾಡುವಾಗ ಇತರ ಸದಸ್ಯರು ಕಾಲಿಗೆ ಶೂಗಳನ್ನು ಹಾಕಿಕೊಂಡು ತಾಳ ಹಾಕಿದ್ದಾರೆ ಇದು ಸಂಸ್ಕೃತಿಗೆ ವಿರುದ್ಧವಾದುದು ಎನ್ನುವ ಮಾತುಗಳು ಕೇಳಿಬರುತ್ತಿವೆ… ಗಾಯಿತ್ರಿ ಮಂತ್ರವನ್ನು ಎಲ್ಲರೂ ಹಾಡುವಂತಿಲ್ಲ ಇಂಥದ್ದೇ ನೀತಿ-ನಿಯಮದಲ್ಲಿ ಹಾಡಬೇಕು ಎಂಬ ನಂಬಿಕೆಯಿದೆ ಆದರೆ ಸಮೀರ್ ಆಚಾರ್ಯ ಮದ್ಯಪಾನ,,ಮಾಂಸಾಹಾರ ಮಾಡುವರ ಬಾಯಿಂದಲೂ ಗಾಯಿತ್ರಿ ಮಂತ್ರವನ್ನು ಹಾಡಿಸಿದ್ದಾರೆ,, ಅಲ್ಲದೆ ಗಾಯಿತ್ರಿ ಮಂತ್ರದ ಜೊತೆ ಜೊತೆಯಲ್ಲೇ ಇಸ್ಲಾಂ ಧರ್ಮದಲ್ಲಿ ಬರುವ “ಯಾ ಇಲಾಹಿ ಇಲ್ಲಲ್ಲಾ “ಎಂಬ ಸಾಲನ್ನು ಸೇರಿಸಿಕೊಂಡು ಶ್ಲೋಕವನ್ನು ರಿಮಿಕ್ಸ್ ಮಾಡಿರುವುದು ಈಗ ಬ್ರಾಹ್ಮಣರ ಕೋಪಕ್ಕೆ ತುತ್ತಾಗಿದೆ.

 

 

ಸಮೀರ್ ಆಚಾರ್ಯರ ಈ ವರ್ತನೆಗೆ ಸಿಡುಕುಗೊಂಡಿರುವ ರಾಯಚೂರಿನ ಬ್ರಾಹ್ಮಣ ಸಮುದಾಯದ ವ್ಯಕ್ತಿಯೊಬ್ಬರು ವ್ಯಕ್ತಿಯೊಬ್ಬರು
“ಗೌಪ್ಯವಾದ ಗಾಯತ್ರಿ ಮಂತ್ರಕ್ಕೆ ಸಮೀರ್ ಮಣ್ಣೂರ ಮಾಡಿದ ಅವಮಾನ!
ಸುರಾಪನ ಮಾಡೋವರ ನಡುವೆ ಗಾಯತ್ರಿ ಮಂತ್ರದ remix ಬೇಕಿತ್ತೆ?
ಸಮೀರ್ ನ ಸಪೋರ್ಟ್ ಮಾಡುವಾ ಹಿಂದೂಗಳು ಉತ್ತರ ಕೊಡಿ..ಇದು ಸರಿ ನಾ” ಎಂದು ಫೇಸ್ಬುಕ್ ನಲ್ಲಿ ವಿಡಿಯೋ ಹಾಕಿ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ..

 

ಬ್ರಾಹ್ಮಣರ ಕೋಪಕ್ಕೆ ತುತ್ತಾಗಿರೋ ಸಮೀರ್ ಅವರ ವಿಡಿಯೋಗಳನ್ನು ಇಲ್ಲಿ ನೋಡಿ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

1 Comment
ರವಿ says:

ಈ ಬ್ರಾಹ್ಮಣನಿಗೆ ಏಕೆ ಬೇಕಿತ್ತು ಈ ಸಾಬರಿ? ವಚನ ಹಾಡಿದಾಗಲೇ ಬೇಸರ ವಾಗಿತ್ತು

To Top