ಮನೋರಂಜನೆ

ಮಿತಿ ಮೀರುತ್ತಿದೆ ಬಿಗ್’ಬಾಸ್ ಮನೆಯ ಸೆಲೆಬ್ರಿಟಿಗಳಿಂದ ಜನಸಾಮಾನ್ಯ ಸ್ಪರ್ಧಿಗಳ ಮೇಲಿನ ದಬ್ಬಾಳಿಕೆ..!

ಮಿತಿ ಮೀರುತ್ತಿದೆ ಬಿಗ್’ಬಾಸ್ ಮನೆಯ ಸೆಲೆಬ್ರಿಟಿಗಳಿಂದ ಜನಸಾಮಾನ್ಯ ಸ್ಪರ್ಧಿಗಳ ಮೇಲಿನ ದಬ್ಬಾಳಿಕೆ..!

 

 

ಕನ್ನಡದ ಅತಿದೊಡ್ಡ ಮತ್ತು ಜನಪ್ರಿಯ ರಿಯಾಲಿಟಿ ಷೋ ಬಿಗ್’ಬಾಸ್ 5ನೇ ಸೀಸನ್ ನಲ್ಲಿ 17 ಮಂದಿ ಸ್ಪರ್ಧಿಗಳು ಬಿಗ್ ಬಾಸ್ ಮನೆ ಪ್ರವೇಶಿಸಿದ್ದರು.. ವಿಶೇಷವೆಂದರೆ ಈ ಭಾರಿ 17 ಮಂದಿ ಪೈಕಿ 11 ಮಂದಿ ಸೆಲೆಬ್ರೆಟಿಗಳು ಹಾಗೂ 6 ಜನಸಾಮಾನ್ಯರು ಸ್ಪರ್ಧಿಗಳಾಗಿ ಮನೆಯೊಳಕ್ಕೆ ಎಂಟ್ರಿ ಪಡೆದಿದ್ದರು.. ಈಗಾಗಲೇ ಅಧಿಕೃತವಾಗಿ ಮನೆಯ ಮೊದಲ ಎಲಿಮಿನೇಷನ್ ಕೂಡ ಆಗಿದ್ದು ಸುಮಾ ರಾಜಕುಮಾರ್ ಎಲಿಮಿನೇಷನ್ ಆಗಿದ್ದಾರೆ..

 

 

ಕಾರ್ಯಕ್ರಮ ಪ್ರಾರಂಭವಾದಾಗಿನಿಂದಲೂ ಸೆಲೆಬ್ರೆಟಿಗಳು ಸಾಮಾನ್ಯರ ಕೋಟಾ ದಲ್ಲಿ ಬಿಗ್ ಬಾಸ್ ಮನೆಗೆ ಎಂಟ್ರಿ ಪಡೆದಿದ್ದ ಸ್ಪರ್ಧಿಗಳಗಳನ್ನೇ ಟಾರ್ಗೆಟ್ ಮಾಡಲಾಗುತ್ತಿದೆ. ಅವರೊಂದಿಗೆ ಕೇವಲವಾಗಿ ನಡೆದುಕೊಳ್ಳುವುದು,, ಅವರ ಜೊತೆ ಬೇರೆ ದಾಟಿಯಲ್ಲಿ ಮಾತನಾಡುವುದು ಕಂಡು ಬಂದಿದ್ದು ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವಿರೋಧ ವ್ಯಕ್ತವಾಗುತ್ತಿದೆ…

 

 

ಇದಕ್ಕೆ ಪುಷ್ಟಿ ನೀಡುವತೆ ಮೊದಲ ವಾರವೇ ‘ಬಿಗ್ ಬಾಸ್’ ಮನೆಯಿಂದ ಹೊರ ಹೋಗಲು ನಾಮಿನೇಷನ್ ಪ್ರಕ್ರಿಯೆಯಲ್ಲಿ, ನಾಮಿನೇಟ್ ಆದ ಏಳು ಸ್ಪರ್ಧಿಗಳ ಪೈಕಿ ನಾಲ್ವರು ‘ಜನಸಾಮಾನ್ಯ ಸ್ಪರ್ಧಿಗಳೇ ಆಗಿದ್ದರು..!ಈ ವಾರದ ನಾಮಿನೇಷನ್ ನಲ್ಲೂ ಕೂಡ ನಾಮಿನೇಟ್ ಆಗಿರುವ ಎಂಟು ಜನ ಸ್ಪರ್ಧಿಗಳ ಪೈಕಿ ನಾಲ್ಕು ಜನ ಜನ ಸಾಮಾನ್ಯರೇ ನಾಮಿನೇಟ್ ಆಗಿದ್ದಾರೆ..

 

 

ಅಲ್ಲದೆ ಬಿಗ್ ಬಾಸ್ ಮನೆಯಲ್ಲಿನ ಸೆಲೆಬ್ರೆಟಿ ಸ್ಪರ್ಧಿಗಳು ಜನ ಸಾಮಾನ್ಯ ಸ್ಪರ್ಧಿಗಳನ್ನು ಕಡೆಗಣಿಸುತ್ತಿದ್ದು ದಯಾಳ್, ಅನುಪಮಾ,ಜಗನ್ ,ತೇಜಸ್ವಿನಿ ಮತ್ತು ಉಳಿದ ಕೆಲವು ಸೆಲೆಬ್ರೆಟಿಗಳು ಕ್ಯಾಮರಾ ಮುಂದೆಯೇ ಸಾಮಾನ್ಯ ವ್ಯಕ್ತಿಗಳಿಗೆ ನಿಂದಿಸಿದ್ದಾರೆ..ಇದರ ಬಗ್ಗೆ ಸ್ವತಃ ಸಾಮಾನ್ಯ ಸ್ಪರ್ಧಿಗಳೇ ನಮ್ಮನ್ನ ಬೇರೆ ತರ ಕಾಣ್ತಾರೆ ಎಂದು ಕ್ಯಾಮರಾ ಮುಂದೆ ಹೇಳಿಕೊಳ್ಳುತ್ತಿದ್ದಾರೆ..

 

 

ಸದ್ಯ ಬಿಗ್ ಬಾಸ್ ಮನೆ ಸೆಲೆಬ್ರೆಟಿಗಳ ಒಂದು ಗುಂಪು ಮತ್ತು ಜನಸಾಮಾನ್ಯರೇ ಒಂದು ಗುಂಪುಗಳಾಗಿ ಒಡೆದುಕೊಂಡಿದೆ ಆದರೆ ಜಯ ಶ್ರೀನಿವಾಸನ್ ಮತ್ತು ಚಂದನ್ ಶೆಟ್ಟಿ ಮಾತ್ರ ಸಾಮಾನ್ಯ ವ್ಯಕ್ತಿಗಳ ಮತ್ತು ಸೆಲೆಬ್ರಿಟಿಗಳ ಜೊತೆ ಒಂದೇ ರೀತಿಯಲ್ಲಿ ವರ್ತಿಸುತ್ತಾರೆ ಎಂಬುದು ಪ್ರೇಕ್ಷಕರ ಮಾತು.. ಮುಂದಿನ ದಿನಗಳಲ್ಲಿ ಸಾಮಾನ್ಯ ವ್ಯಕ್ತಿಗಳ ಮತ್ತು ಸೆಲೆಬ್ರೆಟಿಗಳ ನಡುವಿನ ಸಮರ ಯಾವ ರೀತಿ ನಡೆಯಲಿದೆ ಎಂಬುದೇ ಸದ್ಯದ ಪರಿಸ್ಥಿತಿ..

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top