ಮನೋರಂಜನೆ

ಮತ್ತೊಂದು ರಿಯಾಲಿಟಿ ಶೋಗೆ ಆಯ್ಕೆಯಾದ ಸರಿಗಮಪ ಗಾಯಕ ಸಂಜಿತ್ ಹೆಗ್ಡೆ..! ಯಾವುದು ಆ ರಿಯಾಲಿಟಿ ಷೋ.

ಮತ್ತೊಂದು ರಿಯಾಲಿಟಿ ಶೋಗೆ ಆಯ್ಕೆಯಾದ ಸರಿಗಮಪ ಗಾಯಕ ಸಂಜಿತ್ ಹೆಗ್ಡೆ..! ಯಾವುದು ಆ ರಿಯಾಲಿಟಿ ಷೋ.

 

 

‘ಜೀ ಕನ್ನಡ’ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಸರಿಗಮಪ ಸೀಸನ್-13’ ಸಿಂಗಿಂಗ್ ಕಾರ್ಯಕ್ರಮದಲ್ಲಿ ತನ್ನ ವಿಭಿನ್ನ ಸಿಂಗಿಂಗ್ ಸ್ಟೈಲ್ ಮತ್ತು ಮ್ಯಾನರಿಸಂ ಮೂಲಕ ಮೂಲಕ ಎಲ್ಲರ ಮನಸ್ಸು ಗೆದ್ದು ಮೈಕ್ ಟೈಸನ್ ಎಂದೇ ಫೇಮಸ್ ಆಗಿದ್ದ ಸಂಜಿತ್ ಹೆಗ್ಡೆ ಈಗ ಮತ್ತೊಂದು ರಿಯಾಲಿಟಿ ಶೋಗೆ ಆಯ್ಕೆಯಾಗಿದ್ದಾರೆ.. ಮುಂದೆ ಓದಿ.

 

 

ಕನ್ನಡದ ಸರಿಗಮಪ ಕಾರ್ಯಕ್ರಮದ ನಂತರ ದೊಡ್ಡ ಜನಪ್ರಿಯತೆ ಗಳಿಸಿದ ಸಂಜಿತ್ ಹೆಗ್ಡೆ ಕನ್ನಡದ ಕೆಲವು ಚಿತ್ರಗಳಿಗೆ ಗಾಯಕನಾಗುವ ಅವಕಾಶವನ್ನು ಪಡೆದರು. ನಟ ಗಣೇಶ್ ಅವರ ‘ಚಮಕ್’ ಮತ್ತು “ಕಾಲೇಜ್ ಕುಮಾರ್” ಚಿತ್ರದಲ್ಲಿ ಹಾಡುವ ಅವಕಾಶ ಪಡೆದಿದ್ದರು.. ಇದೀಗ ಸಿನಿಮಾಗಳಲ್ಲಿ ಹಾಡುವುದರ ಜೊತೆಗೆ ಮತ್ತೊಂದು ಸಿಂಗಿಂಗ್ ಶೋನಲ್ಲಿ ಭಾಗವಹಿಸಲು ಸಂಜಿತ್ ಹೆಗ್ಗಡೆ ಆಯ್ಕೆಯಾಗಿದ್ದಾರೆ..ಮುಂದೆ ಓದಿ

 

 

ಜೀ ತಮಿಳು ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಮಪ ಕಾರ್ಯಕ್ರಮದಲ್ಲಿ ಸ್ಪರ್ಧಿಗಳನ್ನು ಆಯ್ಕೆ ಮಾಡಿಕೊಳ್ಳಲು ನಡೆಸಿದ ಆಡಿಷನ್ ನಲ್ಲಿ ಸಂಜಿತ್ ಆಯ್ಕೆ ಯಾಗಿದ್ದಾರೆ.. ಈ ಕಾರ್ಯಕ್ರಮದ ವಿಶೇಷವೇನೆಂದರೆ ತಮಿಳು ಸರಿಗಮಪ ಕಾರ್ಯಕ್ರಮದ ತೀರ್ಪುಗಾರರ ಪೈಕಿ ಕನ್ನಡ ಸರಿಗಮಪ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿದ್ದ ವಿಜಯ್ ಪ್ರಕಾಶ್ ಅವರೂ ಕೂಡ ಒಬ್ಬರು.. ಕಾರ್ಯಕ್ರಮದ ಉಳಿದ ತೀರ್ಪುಗಾರರಾದ ಕಾರ್ತಿಕ್ ಮತ್ತು ಉದಿತ್ ನಾರಾಯಣ್ ರವರೂ ಕೂಡ ಸಂಜಿತ್ ಹಾಡಿಗೆ ಫಿದಾ ಆಗಿದ್ದಾರೆ.

 

 

ಒಟ್ಟಿನಲ್ಲಿ ಒಬ್ಬ ಕರ್ನಾಟಕದ ಪ್ರತಿಭೆ ಹೊರ ರಾಜ್ಯಗಳ ಸ್ಪರ್ಧೆಗಳಲ್ಲಿ ಭಾಗವಹಿಸಿ, ಗೆದ್ದು ತನ್ನ ಗಾಯನದ ಮೂಲಕ ನಾಡಿಗೆ ಕೀರ್ತಿ ತಂದುಕೊಡಲಿ ಎಂಬುದೇ ಎಲ್ಲಾ ಕನ್ನಡಿಗರ ಆಶಯ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top