fbpx
ಮನೋರಂಜನೆ

ಉಗ್ರಂ,ಕರ್ವ ನಂತರ ನಟ ತಿಲಕ್’ಗೆ ಬ್ರೇಕ್ ಕೊಡಲಿದೆಯಾ ಈ ಹೊಸ ಚಿತ್ರ “ಸರ್ವಸ್ವ”

ಉಗ್ರಂ,ಕರ್ವ ನಂತರ ನಟ ತಿಲಕ್’ಗೆ ಬ್ರೇಕ್ ಕೊಡಲಿದೆಯಾ ಈ ಹೊಸ ಚಿತ್ರ “ಸರ್ವಸ್ವ”

 

 

ನಟ ತಿಲಕ್ ಅಭಿನಯದ ಹೊಸ ಕನ್ನಡ ಚಿತ್ರ ಇದೇ ವಾರ ಅಂದರೆ ಅಕ್ಟೋಬರ್ 27 ರಂದು ತೆರೆಕಾಣುತ್ತಿದೆ..ಗಂಡ ಹೆಂಡತಿ ಚಿತ್ರದ ಮೂಲಕ ಕನ್ನಡ ಚಿತ್ರರಂಗವನ್ನು ಪ್ರವೇಶಿಸಿದ ತಿಲಕ್ ಅವರಿಗೆ ಚಿತ್ರಗಳಳ್ಳಿ ತಮ್ಮ ಅಭಿನಯಕ್ಕೆ ಒಳ್ಳೆ ಹೆಸರು ಸಿಕ್ಕಿದರೂ ಹೇಳಿಕೊಳ್ಳುವಷ್ಟು ದೊಡ್ಡ ಮಟ್ಟದಲ್ಲಿಬ್ರೇಕ್ ಗಾಗಿ ಹಾತೊರೆಯುತ್ತಿದ್ದಾರೆ.. ಈ ನಡುವೆ ಉಗ್ರಂ ಕರ್ವ ಚಿತ್ರಗಳು ಯಶಸ್ವಿಯಾಗಿದ್ದರೂ ಆ ಚಿತ್ರಗಳಲ್ಲಿ ನಾಯಕ ನಾಗಿ ತಿಲಕ್ ನಟಿಸಿರಲಿಲ್ಲ ಆ ನಿಟ್ಟಿನಲ್ಲಿ ಅಕ್ಟೋಬರ್ 27 ರಂದು ತೆರೆ ಕಾಣುತ್ತಿರುವ ಸರ್ವಸ್ವ ಚಿತ್ರವೂ ತಿಲಕ್ ಚಿತ್ರ ಬದುಕಿಗೆ ಬ್ರೇಕ್ ಆಗಿ ಆಗಿ ಪರಿಣಮಿಸಲಿದೆಯೇ ಎಂಬ ಪ್ರಶ್ನೆ ಮೂಡಿ ಬರುತ್ತಿದೆ.

 

 

ತನ್ನ ಟ್ರೇಲರ್ ನಿಂದಲೇ ಭಾರಿ ನಿರೀಕ್ಷೆಯನ್ನು ಹುಟ್ಟುಹಾಕಿರುವ ಸರ್ವಸ್ವ ಚಿತ್ರದಲ್ಲಿ ಇದೇ ಮೊದಲ ಬಾರಿಗೆ ತಿಲಕ್ ಅವರು ಡೈರೆಕ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.ಶ್ರೇಯಸ್‌ ಕಬಾಡಿ ಎಂಬ ಯುವ ಭರವಸೆಯ ನಿರ್ದೇಶಕ ನಿರ್ದೇಶನ ಮಾಡಿದ್ದಾರೆ.. ಇಂಜಿನಿಯರಿಂಗ್‌ ಮುಗಿಸಿ ಚಿತ್ರರಂಗಕ್ಕೆ ಬಂದಿರುವ ನಿರ್ದೇಶಕ ಶ್ರೇಯಸ್‌ ಅವರು ತಮ್ಮ ಅನುಭವಗಳನ್ನೇ ಕತೆಯನ್ನಾಗಿ ತಯಾರು ಮಾಡಿಕೊಂಡು ಚಿತ್ರವಾಗಿ ಮಾಡುತ್ತಿದ್ದಾರೆ.

 

 

ಹೊಸಬರೇ ಸೇರಿಕೊಂಡು ಮಾಡಿರುವ ಈ ಚಿತ್ರದಲ್ಲಿ ಮ್ಯೂಸಿಕ್‌, ಲವ್‌ ರೊಮ್ಯಾನ್ಸ್‌ ಸೇರಿದಂತೆ ಉತ್ತಮ ಚಿತ್ರಕ್ಕೆ ಬೇಕಿರುವ ಎಲ್ಲಾ ಅಂಶಗಳಿವೆ..ಕೇರಳ, ಸಕಲೇಶಪುರ ಹಾಗೂ ಕೊಡಗಿನಲ್ಲಿ ಚಿತ್ರೀಕರಣ ಮಾಡಲಾಗಿರುವ ಈ ಚಿತ್ರದಲ್ಲಿ ಕೇವಲ ಮನರಂಜನೆಯಷ್ಟೆ ಅಲ್ಲದೆ ಸಮಾಜಕ್ಕೆ ಒಳ್ಳೆಯ ಸಂದೇಶವೂ ಇದೆ’..ಎಂದು ನಿರ್ದೇಶಕರು ಹೇಳುತ್ತಾರೆ..

 

 

ಶ್ರೇಯಸ್‌ ಕಬಾಡಿ ರವರು ತಾವು ಸಿನಿಮಾ ಕ್ಷೇತ್ರದಲ್ಲಿ ಎದುರಿಸಿದ ಸವಾಲು ಮತ್ತು ಸಮಸ್ಯೆಗಳನ್ನು ಒಟ್ಟುಗೂಡಿಸಿ ಒಂದೊಳ್ಳೆ ಕತೆಯನ್ನು ರೆಡಿಮಾಡಿ ತಿಲಕ್ ಅವರ ಪಾತ್ರದ ಮೂಲಕ ಪ್ರೇಕ್ಷಕರಿಗೆ ತಿಳಿಸಲು ಮುಂದಾಗಿದ್ದಾರೆ.ಈಗಾಗಲೇ ಆಡಿಯೋ ಮತ್ತು ಟ್ರೈಲರ್ ಗಳು ಬಿಡುಗಡೆಯಾಗಿದ್ದು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ.ಚಿತ್ರದಲ್ಲಿ ಎಮ್ರಾನ್ ಮಲ್ಲಿಕ್ ಹಾಡಿರುವ ಒಂದು ಹಾಡು ಈಗ ತುಂಬಾ ವೈರಲ್ ಆಗಿದೆ…

 

 

 

ಚಿತ್ರದಲ್ಲಿ ತಿಲಕ್‌ಗೆ ನಾಯಕಿಯಯರಾಗಿ ರನೂಷಾ ಕಾಶ್ವಿ‌ ಮತ್ತು ಮೇಘನಾ ಅಪ್ಪಯ್ಯ ನಟಿಸಿದ್ದಾರೆ. ಶ್ರೀಧರ್‌ ಸಂಭ್ರಮ್‌ ಅವರ ಸಂಗೀತ ಮತ್ತು ಭುಪಿಂದರ್‌ ಸಿಂಗ್‌ ರಾಣಾ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ..ವಿಮಲ್ ಮತ್ತು ವಾಮ್ದೇವ್ ಅವರು ಚಿತ್ರಕ್ಕೆ ಬಂಡವಾಳವನ್ನು ಹಾಕಿದ್ದಾರೆ.¨ ಚಿತ್ರಕ್ಕೆ ಅವಶ್ಯವಾಗಿರುವ ಉಳಿದ ಕಲಾವಿದರಲ್ಲಿ ಸಾಕಷ್ಟು ಹೊಸ ಮುಖಗಳು ಸರ್ವಸ್ವ ಮೂಲಕ ಬೆಳ್ಳಿತೆರೆ ಪ್ರವೇಶ ಮಾಡುತ್ತಿವೆ.

 

 

ಚಿತ್ರದ ಟ್ರೈಲರ್ ಮತ್ತು ಹಾಡುಗಳನ್ನು ಇಲ್ಲಿ ನೋಡಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top