fbpx
ಮನೋರಂಜನೆ

ಸುದೀಪ್ ಇಂಟ್ರಡಕ್ಷನ್ ಹಾಡಿಗೆ 2 ಕೋಟಿ ರೂ. ಖರ್ಚು,ಇದು ಸ್ಯಾಂಡಲ್’ವುಡ್’ನ ಅತಿ ದುಬಾರಿ ಸಾಂಗ್: ಈ ಹಾಡಿನ ವಿಶೇಷತೆಗಳೇನು ಗೊತ್ತಾ..?

ಸುದೀಪ್ ಇಂಟ್ರಡಕ್ಷನ್ ಹಾಡಿಗೆ 2 ಕೋಟಿ ರೂ. ಖರ್ಚು,ಇದು ಸ್ಯಾಂಡಲ್’ವುಡ್’ನ ಅತಿ ದುಬಾರಿ ಸಾಂಗ್: ಈ ಹಾಡಿನ ವಿಶೇಷತೆಗಳೇನು ಗೊತ್ತಾ..?

 

 

ಸದ್ಯಕ್ಕೆ ಸ್ಯಾಂಡಲ್ ವುಡ್ ನಲ್ಲಿ ಭಾರಿ ಮಟ್ಟದ ನಿರೀಕ್ಷೆಯನ್ನು ಹುಟ್ಟುಹಾಕಿರುವ ಕಿಚ್ಚ ಸುದೀಪ್ ಮತ್ತು ಶಿವರಾಜ್ ಕುಮಾರ್ ನಟನೆಯಲ್ಲಿ ಮತ್ತು ಜೋಗಿ ಪ್ರೇಮ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ದಿ ವಿಲನ್’ ಚಿತ್ರ ದಿನೇ ದಿನೇ ತನ್ನ ಕ್ರೆಜ್ ಅನ್ನು ಹೆಚ್ಚಿಸಿಕೊಳ್ಳುತ್ತಿದೆ.ಇದೀಗ ದಿ ವಿಲನ್ ಚಿತ್ರ ತಂಡದಿಂದ ಸುದ್ದಿಯೊಂದು ಹೊರಬಿದ್ದಿದ್ದು ಈ ಸುದ್ದಿ ಗಾಂಧಿನಗರದ ಮಂದಿಯು ಬಾಯಿ ಮೇಲೆ ಬೆರಳಿಟ್ಟುಕೊಳ್ಳುವಂತೆ ಮಾಡಿದೆ. ಮುಂದೆ ಓದಿ.

 

 

ಚಿತ್ರದಲ್ಲಿ ಸುದೀಪ್ ಅವರ ಇಂಟ್ರೊಡಕ್ಷನ್ ಹಾಡಿಗೆ ಬರೋಬ್ಬರಿ 2 ಕೋಟಿ ರೂಗಳನ್ನೂ ಖರ್ಚು ಮಾಡುತ್ತಿದ್ದು ಕನ್ನಡ ಚಿತ್ರ ರಂಗಕ್ಕೆ ಇದು ಅತಿ ದುಬಾರಿ ಹಾಡಾಗಿ ಪರಿಣಮಿಸಲಿದೆ..ಹಾಡನ್ನು ಅರ್ಜುನ್ಯ ಜನ್ಯ ಸಂಯೋಜಿಸಿದ್ದು ಎಂದಿನಂತೆ ತಮ್ಮ ಡಿಫರೆಂಟ್ ಗೆಟಪ್ ಗಳಲ್ಲಿ ಕಿಚ್ಚ ಮಿಂಚಲಿದ್ದಾರಂತೆ..

 

 

ಈ ಹಾಡನ್ನು ಸ್ವತಃ ಪ್ರೇಮ್ ಅವರೇ ಹಾಡಿದ್ದು ನಾಗೇಶ್ ಈ ಹಾಡಿಗೆ ನೃತ್ಯ ಸಂಯೋಜನೆ ಮಾಡಲಿದ್ದಾರೆ.ಅದ್ದೂರಿ ಸೆಟ್ ಹಾಕಿ ಈ ಹಾಡನ್ನು ಚಿತ್ರೀಕರಣ ಮಾಡಲಾಗುತ್ತದೆ. ಅಷ್ಟೇ ಅಲ್ಲದೆ ಈ ಹಾಡಿನಲ್ಲಿ ಕಿಚ್ಚ ಸುದೀಪ್ ಜೊತೆ ಸುಮಾರು 100 ಮಂದಿ ವಿದೇಶಿ ಕಲಾವಿದರೂ ಕೂಡ ಪಾಲ್ಗೊಂಡಿದ್ದು ಇನ್ನಷ್ಟು ಕುತೂಹಲ ಕೆರಳಿಸಿದೆ. ಮುಂದೆ ಓದಿ

 

 

ಸುದೀಪ್ ರಂತೆ ಶಿವರಾಜಕುಮಾರ್ ರವರಿಗೂ ಒಂದು ಇಂಟ್ರೊಡಕ್ಷನ್ ಸಾಂಗ್ ಇದ್ದು ಆ ಹಾಡನ್ನು ಕೂಡ ದೊಡ್ಡ ಮಟ್ಟದಲ್ಲಿ ಚಿತ್ರೀಕರಿಸಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ..ಸದ್ಯ ಶಿವರಾಜ್ ಕುಮಾರ್ ಅವರ ಸಾಹಸ ದೃಶ್ಯಗಳ ಚಿತ್ರೀಕರಣ ನಡೆಯುತ್ತಿದ್ದು ಅದು ಮುಗಿದ ನಂತರ ಸುದೀಪ್ ಮತ್ತು ಶಿವರಾಜ್ ಕುಮಾರ್ ಇಂಟ್ರೊಡಕ್ಷನ್ ಸಾಂಗ್ ಗಳನ್ನೂ ಶೂಟ್ ಮಾಡಲಾಗುತ್ತದೆ.

 

 

ಈ ಚಿತ್ರದಲ್ಲಿ ಹಿಂದಿಯ ಖ್ಯಾತ ನಟ ಮಿಥುನ್‌ ಚಕ್ರವರ್ತಿ ಸೇರಿದಂತೆ ಕನ್ನಡದ ಶೋಭರಾಜ್‌, ಧರ್ಮ,ಕುರಿ ಪ್ರತಾಪ್ ಮತ್ತಿತರರು ಇದ್ದಾರೆ…ಚಿತ್ರಕ್ಕೆ ಅರ್ಜುನ್ಯ ಜನ್ಯರವರ ಸಂಗೀತ ಮತ್ತು ಗಿರೀಶ್ ಗೌಡ ರವರ ಛಾಯಾಗ್ರಹಣವಿದೆ. ಸಿ ಆರ್ ಮನೋಹರ್ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ಎಮಿ ಜಾಕ್ಸನ್ ಮತ್ತು ಶ್ರುತಿ ಹರಿಹರನ್ ಇಬ್ಬರು ನಾಯಕಿಯಾರಿದ್ದಾರೆ. ಚಿತ್ರ ಮುಂದಿನ ವರ್ಷ ಫೆಬ್ರವರಿಯಲ್ಲಿ ತೆರೆಗೆ ಬರುವ ನಿರೀಕ್ಷೆಯಲ್ಲಿದೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top