fbpx
ಜಾಗೃತಿ

ಸಕತ್ ವೈರಲ್ ಆಗಿದೆ ಫೇಸ್ಬುಕ್ ಪೋಸ್ಟ್’ನಲ್ಲಿರುವ 61 ಲೈಂಗಿಕ ಕಿರುಕುಳ ಕೊಡುವ ಉಪನ್ಯಾಸಕರ ಪಟ್ಟಿ..!

ಸಕತ್ ವೈರಲ್ ಆಗಿದೆ ಫೇಸ್ಬುಕ್ ಪೋಸ್ಟ್’ನಲ್ಲಿರುವ 61 ಲೈಂಗಿಕ ಕಿರುಕುಳ ಕೊಡುವ ಉಪನ್ಯಾಸಕರ ಪಟ್ಟಿ..!

 

 

ಸೋಷಿಯಲ್ ಮೀಡಿಯಾಗಳಲ್ಲಿ ಸಕತ್ ವೈರಲ್ ಆಗಿರುವ ಫೇಸ್‌’ಬುಕ್‌ ಪೋಸ್ಟ್‌ ಒಂದರಲ್ಲಿ ಸುಮಾರು 61 ಪ್ರೊಫೆಸರ್‌ ಗಳು ಮತ್ತು ಶಿಕ್ಷಣ ತಜ್ಞರನ್ನು ಲೈಂಗಿಕ ಕಿರುಕುಳ ಕೊಡುವ ಕಾಮುಕರು ಎಂದು ಕರೆಯಲಾಗಿದೆ.ಕ್ಯಾಲಿಪೋರ್ನಿಯ ವಿವಿಯ ಡೇವಿಸ್‌ ಸ್ಕೂಲ್‌ ಆಫ್ ಲಾನಲ್ಲಿ ಸ್ನಾತಕೋತ್ತರ ಕಾನೂನು ವಿದ್ಯಾರ್ಥಿಯಾಗಿರುವ ರಯಾ ಸರ್ಕಾರ್‌ ಎಂಬ 24ವರ್ಷದ ಕಾನೂನು ವಿದ್ಯಾರ್ಥಿ ಈ ಪೋಸ್ಟ್‌ ಹಾಕಿದ್ದಾರೆ.. ಮುಂದೆ ಓದಿ

 

 

ನೆನ್ನೆ ತನ್ನ ಫೇಸ್ಬುಕ್ ಅಕೌಂಟ್ ನಲ್ಲಿ ಪೋಸ್ಟ್ ವೊಂದನ್ನ ಮಾಡಿದ್ದೂ ಅದರಲ್ಲಿ ರಾಯ ಸರ್ಕಾರ್ ಗೆ ದೊರೆತ ಮಾಹಿತಿಯ ಪ್ರಕಾರ ದೇಶದಲ್ಲಿರುವ ಕಾಮುಕ ಪ್ರೊಫೆಸರ್‌ಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ..ಅವರ ಪ್ರಕಾರ ಲೈಂಗಿಕ ಕಿರುಕುಳ ಕೊಡುವ ಪ್ರೊಫೆಸರ್‌ಗಳು ಸುಮಾರು 30 ವಿವಿಗಳು, ಕಾಲೇಜುಗಳು ಹಾಗೂ ವಿದ್ಯಾಲಯಗಳಿಗೆ ಸೇರಿದವರಾಗಿದ್ದಾರೆ.

 

 

ತಾನು ಈ ಲೈಂಗಿಕ ಕಿರುಕುಳ ಕೊಡುವ ಕಾಮುಕ ಉಪನ್ಯಾಸಕರ ಪಟ್ಟಿಯನ್ನು ಅವರಿಗೆ ತಕ್ಕ ಶಿಕ್ಷೆಯಾಗಬೇಕು ಎಂಬ ಕಾರಣಕ್ಕೆ ಫೇಸ್ಬುಕ್ ನಲ್ಲಿ ಹಾಕಿಲ್ಲ ಬದಲಾಗಿ ಅಮಾಯಕ ವಿದ್ಯಾರ್ಥಿನಿಯರು ಇವರ ಬಗ್ಗೆ ಎಚ್ಚರಿಕೆಯಿಂದಿರಬೇಕು ಎಂಬ ಕಾರಣಕ್ಕೆ’ಎಂದು ರಯಾ ಸರ್ಕಾರ್‌ ಹೇಳಿಕೊಂಡಿದ್ದಾರೆ..”ಇದೇ ರೀತಿ ಇತರ ವಿವಿಗಳಲ್ಲಿ ಇರಬಹುದಾದ ಲೈಂಗಿಕ ಕಿರುಕುಳ ಕೊಡುವ ಉಪನ್ಯಾಸಕರ ಬಗ್ಗೆ ಮಾಹಿತಿ ಇದ್ದಾರೆ ದಯವಿಟ್ಟು ನನಗೆ ಅಂತಹವರ ಬಗ್ಗೆ ಮಾಹಿತಿ ಕೊಡಿ, ನಾನು ಈ ಪಟ್ಟಿಗೆ ಅವರ ಹೆಸರನ್ನು ಸೇರಿಸುತ್ತೇನೆ” ಎಂದು ಸರ್ಕಾರ್‌ ಹೇಳಿದ್ದಾರೆ..

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top