ಮನೋರಂಜನೆ

ಬಯಲಾಯ್ತು ರಾಜ್ಯದ ಮತ್ತೊಂದು ಪ್ರತಿಷ್ಠಿತ ಮಠದ ಕಾಮ ಪುರಾಣ, ಸ್ವಾಮೀಜಿ ರಾಸಲೀಲೆ ಪ್ರಕರಣ ಆ ಕನ್ನಡ ಚಿತ್ರನಟಿ ಯಾರು ಗೊತ್ತೇ ?

ಸದ್ಯ ಮತ್ತೋರ್ವ ಕಾಮಿ ಸ್ವಾಮಿಯ ಪಲ್ಲಂಗ ಪುರಾಣ ಹೊರ ಬಿದ್ದಿದೆ. ಅಖಂಡ ಐನೂರಕ್ಕೂ ಹೆಚ್ಚು ವರ್ಷಗಳ ಸಂಪನ್ನವಾದ ಇತಿಹಾಸವಿರುವ ಯಲಹಂಕದ ಹುಣಸಮಾರನಹಳ್ಳಿ ಜಂಗಮ ಮಠದ ಪೀಠಾಧ್ಯಕ್ಷ ದಯಾನಂದ ಸ್ವಾಮಿ ಹೆಣ್ಣೊಬ್ಬಳ ಜೊತೆ ಕಾಮೋನ್ಮತ್ತ ಕಾಳಗ ನಡೆಸುತ್ತಿರೋ ವಿಡಿಯೋವೊಂದು ದೃಷ್ಯ ಮಾಧ್ಯಮಗಳ ಮೂಲಕ ಜಾಹೀರಾಗಿದೆ!

 

 

ಹೀಗೆ ಪರಂಪರಾಗತವಾಗಿ ಬಂದ, ಲಕ್ಷಾಂತರ ಭಕ್ತರ ಶ್ರದ್ಧಾ ಭಕ್ತಿಯ ಕೇಂದ್ರವಾದ ಸದರಿ ಮಠದ ಗದ್ದುಗೆಯನ್ನೇ ಮಂಚವಾಗಿಸಿಕೊಂಡಿರೋ ಈ ದುಷ್ಟ ಸ್ವಾಮಿಯ ಜೊತೆ ಉರುಳು ಸೇವೆ ಮಾಡಿದ `ಭಕ್ತೆ ಓರ್ವ ನಟಿ ಎಂಬ ಬಗ್ಗೆ ಗುಲ್ಲೆದ್ದಿತ್ತು. ಅದರ ಬೆನ್ನಿಗೇ ಆ ನಟಿ ಯಾರೆಂಬುದು ಬಿಸಿ ಬಿಸಿ ಚರ್ಚೆಗಳಿಗೆ ಕಾರಣವಾಗಿದೆ.

ಯಾವಾಗ ದಯಾನಂದ ಸ್ವಾಮಿಯ ಪಲ್ಲಂಗ ಕಾಳಗ ಜಾಹೀರಾಗಿ ಆತನೊಂದಿಗೆ ಕಾಮ ಕೂಟದಲ್ಲಿ ಭಾಗಿಯಾದಾಕೆ ನಟಿ ಎಂಬ ವಿಚಾರ ಬಯಲಾಯಿತೋ ಆಗಿನಿಂದಲೇ ಗಾಂಧಿನಗರದ ಗುಂಟ ನಾನಾ ರೀತಿಯ ಸುದ್ದಿಗಳು ಸದ್ದು ಮಾಡುತ್ತಿವೆ. ಅನುಮಾನ ಎಂಬುದು ಹಲವಾರು ನಟಿಯರ ಸುತ್ತ ಗಿರಕಿ ಹೊಡೆದು ಕಡೇಯದಾಗಿ ನಟಿ ಕಾವ್ಯ ಆಚಾರ್ಯ ಎಂಬಾಕೆಯ ಬಳಿ ಲ್ಯಾಂಡ್ ಆಗಿದೆ!

 

ಯಾರು ಈ ಕಾವ್ಯ ಆಚಾರ್ಯ? ಈಕೆ ಯಾವ ಚಿತ್ರದಲ್ಲಿ ನಟಿಸಿದ್ದಾಳೆಂದು ಹುಡುಕ ಹೋದರೆ ಸಿಕ್ಕಿರುವುದು ಬಾವಾಜಿ ಎಂಬ ನಿರ್ದೇಶಕರ 141 ಲವ್’ ಎನ್ನುವ ಚಿತ್ರವೊಂದರಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದ ತೀರ್ಥಹಳ್ಳಿ ಮೂಲದ ಕಾವ್ಯ ಆಚಾರ್ಯ. ಸಲಿಂಗಿ ಹುಡುಗಿಯರ ಕಥೆ ಹೊಂದಿದ್ದ ಆ ಚಿತ್ರದ ಜೊತೆಗೆ ಸರವಣದಾಸ್ ಎಂಬಾತ ನಿರ್ದೇಶನ ಮಾಡಿದ್ದ ಸಂತೋಷಕ್ಕೆ ಎನ್ನುವ ಸಿನಿಮಾದಲ್ಲೂ ನಟಿಸಿದ್ದಳು.

 

 

ಇದರ ಹೊರತಾಗಿ ಬೇರೆಯಾವ ಚಿತ್ರದಲ್ಲಿಯೂ ಸದ್ದು ಮಾಡದ ಈಕೆ ಯಲಹಂಕದ ಮಠ ಸೇರಿಕೊಂಡು ದಯಾನಂದ ಸ್ವಾಮಿಯ ಜೊತೆ ಪಲ್ಲಂಗ ಸೇವೆ ಆರಂಭಿಸಿದ್ದಳಾ ಅಂತೊಂದು ಗುಮಾನಿ ಎಲ್ಲರನ್ನೂ ಕಾಡಲಾರಂಭಿಸಿದೆ. ಶುಭಾ ಪೂಂಜಾ ಮತ್ತು ರಮ್ಯಾ ಬಾರ್ನಾ ನಟಿಸಿದ್ದ ‘ಅದೃಷ್ಟ’ ಎನ್ನುವ ಚಿತ್ರದಲ್ಲಿ ಪೂಂಜಾ ಫ್ರೆಂಡ್ ಕ್ಯಾರೆಕ್ಟರ್ ನಲ್ಲಿ ಈಕೆ ನಟಿಸಿದ್ದಳು.

 

 

ಈ ಪ್ರಕರಣದ ಮೂಲಕವೇ ಚಿತ್ರರಂಗ ಮತ್ತು ಕಿರುತೆರೆ ನಟಿಯರ ಕರಾಳಗಾಥೆಯೂ ಮತ್ತೊಮ್ಮೆ ಅನಾವರಣಗೊಂಡಿದೆ. ಧಾರಾವಾಹಿ ಮತ್ತು ಚಲನ ಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ನಟಿಯರೂ ಕೂಡಾ ಇಂಥಾ ಸಂಪರ್ಕಗಳನ್ನು ಪಡೆದುಕೊಂಡು ಯಾರ್‍ಯಾರದ್ದೋ ಪಲ್ಲಂಗದಲ್ಲಿ ಪಾರ್ಟ್‌ನರಳಾಗಿ ಕಾಣಿಸಿಕೊಳ್ಳುತ್ತಾರೆ. ಇಂಥಾ ನಟಿಯರನೇಕರು ಇಂಥಾ ಕಳ್ಳ ಸ್ವಾಮಿಗಳಿಗೆ ಆಹಾರವಾಗೋದೂ ಕೂಡಾ ಮಾಮೂಲು!

ಮಾಹಿತಿ ಕೃಪೆ : ಅರುಣ್ ಕುಮಾರ್ .ಜಿ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top