fbpx
ರಾಜಕೀಯ

ನಟಿ ಪೂಜಾ ಗಾಂಧಿಗೆ ಶಿಕ್ಷೆ ವಿಧಿಸಿದ ನ್ಯಾಯಾಲಯ,ಬಂಧನದ ಭೀತಿಯಲ್ಲಿರುವ ಪೂಜಾ ಮಾಡಿದ ತಪ್ಪೇನು ಗೊತ್ತಾ?

ನಟಿ ಪೂಜಾ ಗಾಂಧಿಗೆ ಶಿಕ್ಷೆ ವಿಧಿಸಿದ ನ್ಯಾಯಾಲಯ,ಬಂಧನದ ಭೀತಿಯಲ್ಲಿರುವ ಪೂಜಾ ಮಾಡಿದ ತಪ್ಪೇನು ಗೊತ್ತಾ?

 

 

ಕನ್ನಡ ಚಿತ್ರನಟಿ ಪೂಜಾ ಗಾಂಧಿಗೆ ಬಂಧನದ ಭೀತಿ ಎದುರಾಗಿದೆ.. ಅಷ್ಟಕ್ಕೂ ಪೂಜಾ ಗಾಂಧಿಯವರಿಗೆ ಬಂಧನದ ಭೀತಿ ಉಂಟಾಗಲು ಕಾರಣ ಏನು ಅಂತೀರಾ.. ಮುಂದೆ ಓದಿ.. 2013ರ ವಿಧಾನಸಭಾ ಚುನಾವಣೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಪ್ರಕರಣದ ಹಿನ್ನೆಲೆಯಲ್ಲಿ ನಟಿ ಪೂಜಾ ಗಾಂಧಿಗೆ ನ್ಯಾಯಾಂಗ ಬಂಧನ ಭೀತಿ ಎದುರಾಗಿದೆ..

 

 

2013ರ ವಿಧಾನಸಭಾ ಚುನಾವಣೆಯ ಶ್ರೀರಾಮುಲು ರವರ ಬಿಎಸ್‍ಆರ್ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿದ್ದ ಪೂಜಾ ಗಾಂಧಿ ಸರ್ಕಾರದ ಅನುಮತಿ ಇಲ್ಲದೆ ಕೆಲವು ವಾಹನಗಳನ್ನ ಚುನಾವಣಾ ಪ್ರಚಾರಕ್ಕೆ ಬಳಸಿ ಚುನಾವಣಾ ನೀತಿ ಸಂಹಿತೆಯನ್ನ ಉಲ್ಲಂಘನೆ ಮಾಡಿದ್ದರು. ಈ ಕುರಿತು ಸದರಬಜಾರ್ ಪೊಲೀಸ್ ಸ್ಟೇಷನ್ ನಲ್ಲಿ ಪ್ರಕರಣ ದಾಖಲಾಗಿತ್ತು.. ಈ ಹಿಂದೆ 5 ಬಾರಿ ವಿಚಾರಣೆಗೆ ಗೈರಾಗಿದ್ದ ಪೂಜಾ ಗಾಂಧಿಗೆ ವಾರೆಂಟ್ ಜಾರಿ ಮಾಡಲಾಗಿತ್ತು ಮತ್ತು ಪೂಜಾ ಮೇಲಿನ ಜಾಮೀನನನ್ನು ರದ್ದುಗೊಳಿಸಿತ್ತು..

 

 

5 ಬಾರಿ ವಿಚಾರಣೆಗೆ ಗೈರಾಗಿದ್ದ ಪೂಜಾ ಗಾಂಧಿ ಇಂದು ರಾಯಚೂರಿನ ಜೆಎಂಎಫ್‍ಸಿ 2ನೇ ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗಿದ್ದಾರೆ,, ಈ ವೇಳೆ ವಿಚಾರಣೆಗೆ ಐದು ಭಾರಿ ಗೈರಾಗಿದ್ದರಿಂದ ಕೋಪಗೊಂಡ ನ್ಯಾಯಮೂರ್ತಿ ಪೂರ್ಣಿಮಾ ಪೂಜಾ ಗಾಂಧಿಗೆ ಸಂಜೆ ಐದು ಗಂಟೆವರೆಗೆ ನ್ಯಾಯಾಲಯದಲ್ಲೇ ಕುಳಿತುಕೊಳ್ಳುವಂತೆ ಶಿಕ್ಷೆ ನೀಡಿದ್ದಾರೆ.. ಒಂದು ಪಕ್ಷ ಕುಳಿತುಕೊಳ್ಳದಿದ್ದರೆ ತಕ್ಷಣ ನ್ಯಾಯಾಂಗ ಬಂಧನಕ್ಕೆ ಒಪ್ಪಿಸುವುದಾಗಿ ಸೂಚಿಸಿದ್ದಾರೆ..

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top