fbpx
ಮನೋರಂಜನೆ

ಸಾಮಾನ್ಯ ವ್ಯಕ್ತಿಗಳ ಮೇಲೆ ರೌಡಿಸಂ ಮಾಡ್ತಿರೋ ತಮಿಳಿಗ ದಯಾಳ್ ಅನ್ನು ಬಿಗ್’ಬಾಸ್ ನಿಂದ ತೆಗೆದುಹಾಕಿ: ವೀಕ್ಷಕರ ಒತ್ತಾಯ..!

ಸಾಮಾನ್ಯ ವ್ಯಕ್ತಿಗಳ ಮೇಲೆ ರೌಡಿಸಂ ಮಾಡ್ತಿರೋ ತಮಿಳಿಗ ದಯಾಳ್ ಅನ್ನು ಬಿಗ್’ಬಾಸ್ ನಿಂದ ತೆಗೆದುಹಾಕಿ: ವೀಕ್ಷಕರ ಒತ್ತಾಯ..!

ಕನ್ನಡದ ಅತಿದೊಡ್ಡ ಮತ್ತು ಜನಪ್ರಿಯ ರಿಯಾಲಿಟಿ ಷೋ ಬಿಗ್’ಬಾಸ್ 5ನೇ ಸೀಸನ್ ನಲ್ಲಿ ಈ ಭಾರಿ ವಿಶೇಷ ಎಂಬಂತೆ ಸೆಲೆಬ್ರೆಟಿಗಳ ಜೊತೆ ಸಾಮಾನ್ಯವ್ಯಕ್ತಿಗಳನ್ನು ಕಳುಹಿಸಲಾಗಿತ್ತು..17 ಮಂದಿ ಸ್ಪರ್ಧಿಗಳ ಪೈಕಿ 11 ಮಂದಿ ಸೆಲೆಬ್ರೆಟಿಗಳು ಹಾಗೂ 6 ಜನಸಾಮಾನ್ಯರು ಸ್ಪರ್ಧಿಗಳಾಗಿ ಮನೆಯೊಳಕ್ಕೆ ಎಂಟ್ರಿ ಪಡೆದಿದ್ದರು.. ಆದರೆ ಕಾರ್ಯಕ್ರಮ ಪ್ರಾರಂಭವಾಗಿ ಎರಡು ವಾರಗಳು ಕಳೆದರೂ ಸೆಲೆಬ್ರೆಟಿಗಳು ಎಂದು ಕರೆಸಿಕೊಳ್ಳುವ ವ್ಯಕ್ತಿಗಳು ಮನೆಯ ಸಾಮಾನ್ಯ ವ್ಯಕ್ತಿಗಳ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ..

 

 

ಕಾಲು ಕೆರೆದುಕೊಂಡು ಜನಸಾಮಾನ್ಯರ ಜೊತೆ ಜಗಳಕ್ಕೆ ಇಳಿಯುತ್ತಿರುವ ಸೋ ಕಾಲ್ಡ್ ಸೆಲೆಬ್ರಿಟಿಗಳ ವಿರುದ್ಧ ‘ಬಿಗ್ ಬಾಸ್’ ವೀಕ್ಷಕರು ಕೋಪಿಸಿಕೊಂಡಿದ್ದಾರೆ..ಅದರಲ್ಲೂ ತಾನೇ ಬಿಗ್ ಬಾಸ್ ಮನೆಯ ಯಜಮಾನ ಎಂದು ತಿಳಿದುಕೊಂಡಿರುವ ನಿರ್ದೇಶಕ ದಯಾಳ್ ಕಾಮನ್ ಮ್ಯಾನ್ ಗಳ ಜೊತೆ ರೌಡಿಸಂ ಮಾಡಿದ್ದಾರೆ..ಸಾಮಾನ್ಯರ ಮೇಲೆ ಅವಾಚ್ಯ ಶಬ್ದಗಳಿಂದ ನಿಂಧಿಸಿ ಧಮ್ಕಿ ಹಾಕುತ್ತಿದ್ದಾರೆ ಎಂದು ಬಿಗ್ ಬಾಸ್ ಪ್ರೇಕ್ಷಕರು ಆರೋಪಿಸಿದ್ದಾರೆ.

 


ಮನೆಯ ಸೋ ಕಾಲ್ಡ್ ಸೆಲೆಬ್ರೆಟಿಗಳ ಜೊತೆ ನಗು ನಗುತ್ತಾ ಮಾತನಾಡುವ ದಯಾಳ್ ಗೆ ಕಾಮನ್ ಮ್ಯಾನ್ ರನ್ನು ಕಂಡರೆ ಅದು ಎಲ್ಲೆಂದ ಉರಿ ಸ್ಟಾರ್ಟ್ ಆಗುತ್ತೋ ಗೊತ್ತಿಲ್ಲ ಅವರ ಮೇಲೆ ಎಗರಿ ಎಗರಿ ಬೀಳ್ತಾರೆ. ದಯಾಳ್ ಯಾವ ಸೀಮೆ ಸೆಲೆಬ್ರಿಟಿ ಅವನು ತಗ್ದಿರೋ ಒಂದು ಫಿಲ್ಮ್ ಹಿಟ್ ಆಗಿಲ್ಲ..! ಅಲ್ಲಿರುವ ಸಾಮಾನ್ಯ ಜನರಿಗೆ ಹೇಗೆ ಮರ್ಯಾದೆ ಕೊಡ್ಬೇಕು ಅಂಥ ಗೊತ್ತಿಲ್ಲ ಇವರೆಂತಾ ಮನುಷ್ಯ ಜನಸಾಮಾನ್ಯರಿಂದಲೆ ತಾನು ಸೆಲಿಬ್ರಿಟಿ ಆಗಿರೋದು ಎಂದು ತಿಳಿದುಕೊಂಡರೆ ಒಳಿತು.

 

 

ಕೇವಲ ದಯಾಳ್ ಮಾತ್ರವಲ್ಲ ಸಿಹಿ ಕಹಿ ಚಂದ್ರು,ಜಗನ್,ಜೆಕೆ, ತೇಜಸ್ವಾನಿ ಸೇರಿದಂತೆ(ಚಂದನ್ ಶೆಟ್ಟಿ ಹೊರತುಪಡಿಸಿ) ಎಲ್ಲಾ ಸೋ ಕಾಲ್ಡ್ ಸೆಲೆಬ್ರೆಟಿಗಳು ಸಾಮಾನ್ಯ ವ್ಯಕ್ತಿಗಳ ಮೇಲೆ ಧಮ್ಕಿ ಹಾಕಿ ಜಗಳ ಮಾಡಿದ್ದಾರೆ.. ಆಶಿತಾ ಮತ್ತು ಅನುಪಮಾ ಅಂತೂ ಬಿಗ್ ಬಾಸ್ ಮನೆಯನ್ನು ತಮ್ಮ ಸ್ವಂತ ಮನೆಯಂತೆ ತಿಳಿದುಕೊಂಡು ಸಾಮಾನ್ಯ ವ್ಯಕ್ತಿಗಳನ್ನು ಕೆಲಸದವರಿಗಿಂತಲೂ ಕೀಳಾಗಿ ನೋಡುತ್ತಿದ್ದಾರೆ..

 

 

 

 

ಬಿಗ್ ಬಾಸ್ ಮನೆಯ ಕಾಮನ್ ಮ್ಯಾನ್ ಗಳನ್ನೂ ಮನೆಯ ಕೆಲಸದವರಂತೆ ಏಯ್..ತು.. ಎಂದು ಅಸಭ್ಯವಾಗಿ ಧಮ್ಕಿ ಹಾಕುವ ಈ ತಮಿಳು ರೌಡಿ ದಯಾಳ್ ವರ್ತನೆ ತುಂಬಾ ಕೆಟ್ಟದ್ದಾಗಿದ್ದು ಅವರ ವರ್ತನೆಯಿಂದ ಸ್ಪಷ್ಟವಾಗಿದ್ದೆನೆಂದರೆ ಬಿಗ್ ಬಾಸ್ ಮನೆಲಿ ಸಾಮಾನ್ಯ‌ ಜನರ ಮೇಲೆ ದಬ್ಬಾಳಿಕೆ‌ ನಡೆಯುತ್ತಿದ್ದು ಈ ವಿಷಯದ ಬಗ್ಗೆ ಖಂಡಿತವಾಗಿ ಈ ವಾರ ಚರ್ಚೆಯಾಗಲೆ ಬೇಕು ಎನಂತಿರ..

 

 

ಸೆಲೆಬ್ರಿಟಿಗಳು ಎನ್ನುವ ಅಹಂಕಾರ ಅವರ ತಲೆಯಲ್ಲಿ ಇದೆ… ಅದೇ ಕಾರಣದಿಂದ ಸಾಮಾನ್ಯ ಜನರ ಮೇಲೆ ದಬ್ಬಾಳಿಕೆ ಮಾಡ್ತಾ ಇದ್ದಾರೆ… ಇವರಿಗೆ ಉತ್ತರ ವೀಕ್ಷಿಸುತಿರುವ ಸಾಮಾನ್ಯ ಜನರೇ ಕೊಡಬಹುದು… ಸ್ಪರ್ದಿಗಳಿಗೆ ಸಾಮಾನ್ಯ ಜನರು ಹಾಕುವ ನಿಜವಾದ ವೋಟ್ ಸಾಕ್ಷಿಯಾಗುತ್ತದೆನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನ ಕಾಮೆಂಟ್ ಮಾಡಿ..

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top