fbpx
ಸಮಾಚಾರ

ಕನ್ನಡದಲ್ಲಿ ಮೊದಲ ಸ್ಪೋರ್ಟ್ಸ್ ಚಾನಲ್ “ಸ್ಟಾರ್ ಸ್ಪೋರ್ಟ್ಸ್ ಕನ್ನಡ” ಆನ್‌ಲೈನ್‌ ನಲ್ಲೂ ಲಭ್ಯ..!

ಕನ್ನಡದಲ್ಲಿ ಮೊದಲ ಸ್ಪೋರ್ಟ್ಸ್ ಚಾನಲ್ “ಸ್ಟಾರ್ ಸ್ಪೋರ್ಟ್ಸ್ ಕನ್ನಡ” ಆನ್‌ಲೈನ್‌ ನಲ್ಲೂ ಲಭ್ಯ..!

 

 

ಕ್ರೀಡಾ ಕ್ಷೇತ್ರದಲ್ಲಿ ತನ್ನದೆ ಆದ ಛಾಪನ್ನು ಮೂಡಿಸಿರುವ ಕ್ರೀಡಾ ವಾಹಿನಿ ಸ್ಟಾರ್ ನೆಟ್ ವರ್ಕ್ ಅತಿ ಶೀಘ್ರದಲ್ಲೇ “ಸ್ಟಾರ್ ಸ್ಫೋರ್ಟ್ಸ್ ಕನ್ನಡ” ಚಾನೆಲ್ ಅನ್ನು ಆರಂಭಿಸಲು ತಯಾರಿ ನಡೆಸುತ್ತಿದೆ.. ಈಗಾಗಲೇ ಸ್ಟಾರ್ ಸ್ಪೋರ್ಟ್ಸ್ ತಮಿಳಿನಲ್ಲಿ ಪ್ರಸಾರವಾಗುತ್ತಿದ್ದು, ಮುಂದಿನ ತಿಂಗಳ ಎರಡನೇ ವಾರದಿಂದ ಕನ್ನಡದಲ್ಲೂ ತನ್ನ ಪ್ರಸಾರವನ್ನು ಆರಂಭಿಸಲಾಗುತ್ತಿದೆ ಎನ್ನಲಾಗಿದೆ..

 

 

ಮೂಲಗಳ ಪ್ರಕಾರ ನವೆಂಬರ್ 16ರಂದು ಸ್ಟಾರ್ ಸ್ಫೋರ್ಟ್ಸ್ ಕನ್ನಡ ಚಾನೆಲ್ ಆರಂಭಿಸಲು ಸ್ಟಾರ್ ನೆಟ್ ವರ್ಕ್ ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.. ವೀಕ್ಷಕ ವಿವರಣೆಯನ್ನು ಇಷ್ಟು ದಿನ ಇಂಗ್ಲಿಷ್ ನಲ್ಲಿ ಕೇಳುತ್ತಿದ್ದ ವೀಕ್ಷಕರು ಇನ್ನು ಮುಂದೆ ಕನ್ನಡ ಭಾಷೆಯಲ್ಲೂ ಕೇಳಿ ನೋಡಿ ಎಂಜಾಯ್ ಮಾಡಬಹುದು. ವಿಶೇಷ ಎಂದರೆ “ಸ್ಟಾರ್ ಸ್ಪೋರ್ಟ್ಸ್ ಕನ್ನಡ” ಚಾನೆಲ್ ಆನ್‌ಲೈನ್‌ ನಲ್ಲೂ ಲಭ್ಯವಾಗಿರುತ್ತದೆ.

 

 

 

ಈಗಾಗಲೇ ಪ್ರೊ ಲೀಗ್ ಕ್ರೀಡಾಕೂಟಗಳಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವ ಸ್ಥಳೀಯ ತಂಡಗಳು ಇರುವುದರಿಂದ ಚಾನೆಲ್ ವರ್ಷವಿಡೀ ಕಾರ್ಯಕ್ರಮಗಳ ಆಯೋಜನೆಗೆ ಯಾವುದೇ ಅಡ್ಡಿಯಾಗುವುದಿಲ್ಲ ಎಂಬುದು ಸ್ಟಾರ್ ನೆಟ್ ವರ್ಕ್ ತಿಳಿಸಿದೆ. ಪ್ರೊ ಕಬಡ್ಡಿಯಲ್ಲಿ ಬೆಂಗಳೂರು, ಐಪಿಎಲ್ ನಲ್ಲಿ ಆರ್ಸಿಬಿ, ಐಎಸ್ಎಲ್ ನಲ್ಲಿ ಬೆಂಗಳೂರು ಎಫ್ ಸಿ, ಕೆಪಿಎಲ್ ಸೇರಿದಂತೆ ಮುಂತಾದ ಕ್ರೀಡಾಕೂಟಗಳಲ್ಲಿ ಕರ್ನಾಟಕದ ಹೆಸರು ಪ್ರಸ್ತಾಪವಾಗಿರುವುದರಿಂದ ಚಾನೆಲ್ ತೆರೆಯಲು ಸ್ಟಾರ್ ನೆಟ್ ವರ್ಕ್ ಮುಂದಾಗಿದೆ ಎಂದು ತಿಳಿದುಬಂದಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top