fbpx
ಮನೋರಂಜನೆ

ನಾಡಿದ್ದು ಉಪೇಂದ್ರ ರವರ ಪಕ್ಷದ ಹೆಸರು, ಗುರುತು ಮತ್ತು ಚುನಾವಣಾ ಪ್ರಣಾಳಿಕೆ ಘೋಷಣೆ..!

ನಾಡಿದ್ದು ಉಪೇಂದ್ರ ರವರ ಪಕ್ಷದ ಹೆಸರು, ಗುರುತು ಮತ್ತು ಚುನಾವಣಾ ಪ್ರಣಾಳಿಕೆ ಘೋಷಣೆ..!

 

 

ಕೆಲವು ದಿನಗಳಹಿಂದೆ ಸುದ್ದಿಗೋಷ್ಟಿ ಮಾಡಿ ಮಾತನಾಡಿದ ಉಪೇಂದ್ರ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು. ಜನ ಸಾಮಾನ್ಯರಲ್ಲ, ಜನರು ಅಸಾಮಾನ್ಯರು. ಜಾತಿ ಹಾಗೂ ಹಣ ಬಲದಿಂದ ರಾಜಕೀಯ ಮಾಡಬಾರದು. ಇದನ್ನು ಹೊರತುಪಡಿಸಿ ಒಂದು ಪ್ರಯೋಗಕ್ಕೆ ಕೈ ಹಾಕಲು ಹೊರಟಿದ್ದೇನೆ ಎಂದು ಹೇಳಿ ಪ್ರಕಾಕೀಯ ಎಂಬ ಪರಿಕಲ್ಪನೆಯಲ್ಲಿ ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸುವುದಾಗಿ ಘೋಷಿಸಿದ್ದರು.. ಮುಂದೆ ಓದಿ

 

 

ಕಳೆದ ಎರಡು ತಿಂಗಳಿನಲ್ಲಿ ವಿವಿಧ ಕ್ಷೇತ್ರಗಳ ಸಾಧಕರು, ಹಿರಿಯಗಣ್ಯರೊಂದಿಗೆ ಚರ್ಚೆ ನಡಿಸಿರುವ ರಿಯಲ್ ಸ್ಟಾರ್ ಉಪೇಂದ್ರ ಅವರು ತಮ್ಮ ರಾಜಕೀಯ ರೂಪುರೇಷೆ ಸಿದ್ಧಪಡಿಸಿಕೊಂಡಿದ್ದಾರೆ.ಇದೇ ಅಕ್ಟೋಬರ್ 31ರಂದು ಶಿವಾನಂದ ಸರ್ಕಲ್ ಬಳಿ ಇರುವ ಗಾಂಧಿಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ತಮ್ಮ ಪಕ್ಷದ ಹೆಸರು,ಗುರುತು, ಚುನಾವಣಾ ಪ್ರಣಾಳಿಕೆಗಳ ಬಗ್ಗೆ ಮಾಹಿತಿಯನ್ನು ನೀಡಲಿದ್ದಾರೆ.

 

 

ಕಳೆದ ಆಗಸ್ಟ್ 14 ನೇ ತಾರೀಕಿನಂದು ಸುದ್ದಿಗೋಷ್ಠಿ ಕರೆದಿದ್ದ ಉಪೇಂದ್ರ ಸುದ್ದಿಗೋಷ್ಠಿಗೆ ಖಾಕಿ ಡ್ರೆಸ್’ನಲ್ಲೆ ಬಂದಿದ್ದರು.. ಉಪ್ಪಿ ಖಾಕಿ ಕಾರ್ಮಿಕರ ಸಂಕೇತ ನಾನು ರಾಜಕೀಯದಲ್ಲಿ ಸೇವೆ ಮಾಡುವುದಿಲ್ಲ ಬದಲಾಗಿ ಸಂಬಳಕ್ಕಾಗಿ ಪ್ರಾಮಾಣಿಕವಾಗಿ ಕೆಲಸ ಮಾಡ್ತೀನಿ ಎಂದಿದ್ದರು…ತಮ್ಮ ವಿಶೇಷ ಪರಿಕಲ್ಪನೆಯಿಂದ ಮುಂದೆ ಬಂದಿರುವ ಉಪೇಂದ್ರ ಪಕ್ಷದ ಹೆಸರು, ಚಿಹ್ನೆಗಳನ್ನೂ ತಿಳಿದುಕೊಳ್ಳಲು ಜನರು ಕುತೂಹಲದಲ್ಲಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top