fbpx
ಕಿರುತೆರೆ

ಸಿಹಿಕಹಿ ಚಂದ್ರುರವರಿಂದ ಜಾತಿನಿಂದನೆ, ಬಿಗ್ ಬಾಸ್ ಮನೆಮೇಲೆ ಆ ಸಮುದಾಯದ ಜನರಿಂದ ಮುತ್ತಿಗೆ..!

ಸಿಹಿಕಹಿ ಚಂದ್ರುರವರಿಂದ ಜಾತಿನಿಂದನೆ, ಬಿಗ್ ಬಾಸ್ ಮನೆಮೇಲೆ ಆ ಸಮುದಾಯದ ಜನರಿಂದ ಮುತ್ತಿಗೆ..!

 

 

ಬಿಗ್ ಬಾಸ್ ಕಾರ್ಯಕ್ರಮದ ಮೇಲೆ ಬೋವಿ ಜನಾಂಗ ಜನರು ಕೋಪಿಸಿಕೊಂಡು ಬಿಗ್ ಬಾಸ್ ಮನೆಮೇಲೆ ಮುತ್ತಿಗೆ ಹಾಕಿದ್ದಾರೆ..ಸಿಹಿಕಹಿ ಚಂದ್ರು ಭೋವಿ ಜಾತಿಯ ಬಗ್ಗೆ ಕೀಳು ಮಟ್ಟದಲ್ಲಿ ಮಾತನಾಡಿದ್ದಾರೆ ಎಂದು ಭೋವಿ ಸಮುದಾಯದ ಜನ ಬಿಗ್ ಬಾಸ್ ಕಾರ್ಯಕ್ರಮದ ಮೇಲೆ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಮುಂದೆ ಓದಿ.

 

 

ಪ್ರತಿಕಾಗೋಷ್ಟಿಯಲ್ಲಿ ಮಾತನಾಡಿದ ಬೋವಿ ಯುವ ವೇದಿಕೆ ಅಧ್ಯಕ್ಷ ಬಿ.ಜಯಕುಮಾರ್ “ಅ.28ರಂದು ನಡೆದ ಬಿಗ್‍ಬಾಸ್ ಕಾರ್ಯಕ್ರಮದಲ್ಲಿ ಸಿಹಿ ಕಹಿ ಚಂದ್ರುರವರು ಮತ್ತೊಬ್ಬ ಸ್ಪರ್ಧಿ ದಿವಾಕರ್ ಅವರನ್ನು ‘ವಡ್ಡ’ ಎಂದು ಮೂದಲಿಸಿದ್ದಾರೆ.. ಅಲ್ಲದೆ ‘ನಿರ್ಲಕ್ಷ್ಯತನಕ್ಕೆ’ ‘ವಡ್ಡ’ ಎಂದು ವ್ಯಾಖ್ಯಾನವನ್ನೂ ಉಪಾಯ್ಪ್ಗಿಸಲಾಗಿದೆ. ಎಂದು ಆರೋಪಿಸಿದ್ದಾರೆ.

 

 

“ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಇಂತಹ ಜಾತಿನಿಂದನೆಗೆ ಅವಕಾಶ ಕೊಡಬಾರದಿತ್ತು. ಬೋವಿ ಜಾತಿಯನ್ನು ನಿಂದಿಸಿದ ಸಿಹಿಕಹಿ ಚಂದ್ರು ಅವರನ್ನು ತಕ್ಷಣ ಬಿಗ್’ಬಾಸ್ ಮನೆಯಿಂದ ಹೊರ ಹಾಕಬೇಕು.. ಇಲ್ಲವಾದಲ್ಲಿ ಇನೊವೇಟಿವ್ ಫಿಲ್ಮ್ ಸಿಟಿಗೆ ಬಂದು ಬಿಗ್ ಬಾಸ್ ಮನೆಗೆ ಮುತ್ತಿಗೆ ಹಾಕುತ್ತೇವೆ ಮತ್ತು ನಾಳೆಯಿಂದ ರಾಜ್ಯಾದ್ಯಂತ ಇದರ ವಿರುದ್ಧ ಉಗ್ರವಾದ ಹೋರಾಟ ಮಾಡುತ್ತೇವೆ ” ಎಂದು ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

1 Comment
venkateshrao says:

ವಡ್ಡರು ಎನ್ನುವುದು ಜಾತಿ, ಆದರೆ ವಡ್ಡ ಎನ್ನುವುದು ವಿಶಘಷಣ. ಜಾತಿ ನಿಂದನೆ ಅಲ್ಲ.

To Top