fbpx
ಮನೋರಂಜನೆ

ಪಕ್ಷ ಘೋಷಿಸಿದ 24 ಗಂಟೆಯೊಳಗೆ ಉಪೇಂದ್ರ ಮೇಲೆ ಆರೋಪಗಳ ಸುರಿಮಳೆ..ಯಾವುದು ಸರಿ ಯಾವುದು ತಪ್ಪು..?

ಪಕ್ಷ ಘೋಷಿಸಿದ 24 ಗಂಟೆಯೊಳಗೆ ಉಪೇಂದ್ರ ಮೇಲೆ ಆರೋಪಗಳ ಸುರಿಮಳೆ..ಯಾವುದು ಸರಿ ಯಾವುದು ತಪ್ಪು..?

 

 

ಕಳೆದ ಎರಡು ತಿಂಗಳಿನಲ್ಲಿ ವಿವಿಧ ಕ್ಷೇತ್ರಗಳ ಸಾಧಕರು, ಹಿರಿಯಗಣ್ಯರೊಂದಿಗೆ ಚರ್ಚೆ ನಡಿಸಿರುವ ರಿಯಲ್ ಸ್ಟಾರ್ ಉಪೇಂದ್ರ ಅವರು ತಮ್ಮ ರಾಜಕೀಯ ರೂಪುರೇಷೆ ಸಿದ್ಧಪಡಿಸಿಕೊಂಡಿದ್ದ ಉಪೇಂದ್ರ ಇಂದು ಶಿವಾನಂದ ಸರ್ಕಲ್ ಬಳಿ ಇರುವ ಗಾಂಧಿಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ತಮ್ಮ ಪಕ್ಷದ ಹೆಸರನ್ನು ಘೋಷಿಸಿದ್ದು ಪಕ್ಷಕ್ಕೆ ‘ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿ’ (KPJP) ಎಂಬ ಹೆಸರನ್ನು ಇಟ್ಟಿದ್ದಾರೆ. ಆದರೆ ತಮ್ಮ ರಾಜಕೀಯ ಪಕ್ಷವನ್ನು ಘೋಸಿದ 24 ಗಂಟೆಯೊಳಗೆ ಉಪೇಂದ್ರ ಮೇಲೆ ಆರೋಪಗಳ ಸುರಿಮಳೆಯಾಗಿದೆ. ಮುಂದೆ ಓದಿ

 

 

“ಆರಂಭದಿಂದಲೂ ಉಪ್ಪಿ ಗಿಮಿಕ್ಕುಗಳಲ್ಲಿ ಎತ್ತಿದ ಕೈ. ಆದರೆ ಭಿನ್ನ ಆಲೋಚನೆಯ ದೆಸೆಯಿಂದ ೨೦೦೦ನೇ ಇಸವಿಯ ಹೊತ್ತಿಗೆಲ್ಲ ನಟನಾಗಿಯೂ ಅವರು ಹವಾ ಸೃಷ್ಟಿಸಿದ್ದರು. ಉಪೇಂದ್ರ, ಎ ಮುಂತಾದ ಚಿತ್ರಗಳು ಸೂಪರ್ ಹಿಟ್ ಆಗಿ ಉಪ್ಪಿ ಬಹು ಬೇಡಿಕೆಯ ನಟನಾಗಿ ಹೊರ ಹೊಮ್ಮಿದ್ದರು. ಇವರ ಮಾರ್ಕೆಟ್ ವ್ಯಾಲ್ಯೂ ಕೂಡಾ ಒಮ್ಮಿಂದೊಮ್ಮೆಗೇ ಏರಿಕೆ ಕಂಡಿತ್ತು. ಹೀಗೆ ಯಶಸ್ಸಿನದ ಉತ್ತುಂಗದಲ್ಲಿರೋವಾಗಲೇ ಉಪೇಂದ್ರ ತೆಲುಗಿನಲ್ಲಿ ‘ರಾ’ ಅಂತೊಂದು ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದರು. ಈ ಚಿತ್ರವನ್ನು ನಿರ್ದೇಶನ ಮಾಡಿದ್ದವರು ಕೆ.ಎಸ್ ನಾಗೇಶ್ವರ ರಾವ್. ನಲ್ಲಪಲುಪು ಬುಜ್ಜಿ ನಿರ್ಮಾಣ ಮಾಡಿದ್ದ ಈ ಚಿತ್ರದಲ್ಲಿ ಪ್ರಿಯಾಂಕಾ ಉಪೇಂದ್ರ, ದಾಮನಿ, ಸಾಧು ಕೋಕಿಲಾ ಮುಂತಾದ ಕನ್ನಡದವರೇ ಹೆಚ್ಚಾಗಿ ನಟಿಸಿದ್ದರು. ಈ ಚಿತ್ರ ಆ ಕಾಲಕ್ಕೆ ಆಂಧ್ರ ಪ್ರದೇಶದಲ್ಲಿ ಸೂಪರ್ ಹಿಟ್ ಆಗಿ ದಾಖಲಾಗಿತ್ತು., ಈ ವಿಚಾರ ಆಂಧ್ರ ಪ್ರದೇಶದ ಇನ್‌ಕಂ ಟ್ಯಾಕ್ಸ್ ಅಧಿಕಾರಿಗಳು ರಾ ಚಿತ್ರದ ನಿರ್ಮಾಪಕರ ಮನೆಗೆ ರೇಡು ಬಿದ್ದಾಗ ಉಪ್ಪಿಯ ಐಟಿ ದೋಖಾ ಪುರಾಣ ಜಾಹೀರಾಗಿತ್ತು. ಆ ನಿರ್ಮಾಪಕರ ಕಚೇರಿ ಜಾಲಾಡಿದಾಗ ಒಂದು ಲೆಟರಿನಲ್ಲಿ ರಾ ಚಿತ್ರದ ನಾಯಕ ಉಪೇಂದ್ರ ಅವರಿಗೆ ಇಪ್ಪತೈದು ಲಕ್ಷ ಕೊಟ್ಟಿರೋದಾಗಿ ಬರೆದುಕೊಂಡಿದ್ದರು. ಈ ವಿಚಾರವನ್ನು ಆಂಧ್ರ ಐಟಿ ಅಧಿಕಾರಿಗಳು ಕರ್ನಾಟಕ ಐಟಿ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಆ ನಂತರ ಕರ್ನಾಟಕ ಐಟಿ ಅಧಿಕಾರಿಗಳು ಈ ಬಗ್ಗೆ ತಲಾಶು ನಡೆಸಿದಾಗ ಈ ಬಗ್ಗೆ ಉಪೇಂದ್ರ ಅಲಿಯಾಸ್ ಬಿ ಎಂ ಉಪೇಂದ್ರ ಕುಮಾರ್ ಆ ವರ್ಷದ ತೆರಿಗೆ ಸಲ್ಲಿಸೋವಾಗ ರಾ ಚಿತ್ರದ ೨೫ ಲಕ್ಷ ಸಂಭಾವನೆಯನ್ನು ಉಲ್ಲೇಖಿಸದಿರೋದು ಪಕ್ಕಾ ಆಗಿತ್ತು. ಈ ಬಗ್ಗೆ ಕೂಲಂಕಷ ತನಿಖೆ ನಡೆಸಿದ ಕರ್ನಾಟಕ ಐಟಿ ಅಧಿಕಾರಿಗಳು ಉಪ್ಪಿ ವಿರುದ್ಧ ವಂಚನೆ ಕೇಸು ದಾಖಲಿಸಿದ್ದರು.ಹಾಗೆ ಯಾವಾಗ ತನಗೆ ಐಟಿ ಗುನ್ನ ಕೊಟ್ಟಿತೋ ಆವಾಗಿನಿಂದಲೇ ಬುದ್ಧಿವಂತ ಉಪ್ಪಿಯ ಅಸಲೀ ವರಸೆ ಶುರುವಾಗಿ ಹೋಗಿತ್ತು ಉಪ್ಪಿ ರಾ ಚಿತ್ರದಿಂದ ತಾನು ಪಡೆದದ್ದು ಇಪ್ಪತೈದು ಲಕ್ಷವಲ್ಲ, ಐದು ಲಕ್ಷ ಮಾತ್ರ ಎಂಬ ವರಸೆ ಆರಂಭಿಸಿದ್ದರು. ಆದರೆ ಇದೇ ರಾ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದ ಗುರುಕಿರಣ್ ಅವರಿಗೆ ನಾಲಕ್ಕೂವರೆ ಲಕ್ಷ ಕೊಟ್ಟಿರೋದಾಗಿ ನಿರ್ಮಾಪಕರ ಬಳಿ ದಾಖಲೆ ಸಿಕ್ಕಿದ್ದವು. ಈ ಹಂತದಲ್ಲಿ ತಗುಲಿಕೊಂಡ ಉಪೇಂದ್ರ ಅಲ್ಲಿಯೂ ನಾಜೂಕಾಗಿಯೇ ಬಚಾವಾಗಿದ್ದರು. ಈ ಚಿತ್ರಕ್ಕಾಗಿ ತಾನು ಪಡೆದದ್ದು ಐದು ಲಕ್ಷ ಮಾತ್ರ. ಒಂದು ವೇಳೆ ಗೆದ್ದರೆ ಇಪ್ಪತೈದು ಲಕ್ಷ ಕೊಡೋದಾಗಿ ನಿರ್ಮಾಪಕರು ಮತ್ತು ತಮ್ಮ ನಡುವೆ ಒಪ್ಪಂದವಾಗಿತ್ತು. ಆದರೆ ಆ ಚಿತ್ರ ಸೋತಿದ್ದರಿಂದ ಕೇವಲ ಐದು ಲಕ್ಷ ಮಾತ್ರ ತನಗೆ ಸಿಕ್ಕಿರೋದಾಗಿ ಉಪೇಂದ್ರ ಹೇಳಿದ್ದರು. ರಾ ಚಿತ್ರದ ಟೈಮಲ್ಲಿ ಉಪ್ಪಿ ಸಂಭಾವನೆ ಕೋಟಿ ದಾಟಿತ್ತು. ಆ ಟೈಮಲ್ಲಿ ೫ ಲಕ್ಷಕ್ಕೆ ತೆಲುಗು ಚಿತ್ರದಲ್ಲಿ ನಟಿಸಿ, ಕಥೆ ಬರೆದು ಕೊಡೋಕೆ ಉಪ್ಪಿಗೇನು ತಲೆ ಕೆಟ್ಟಿತ್ತಾ.. ” ಎಂಬ ಆರೋಪ ಉಪ್ಪಿಯ ಮೇಲೆ ಕೇಳಿಬರುತ್ತಿದೆ.

 

 

ಅಲ್ಲದೆ ಈ ಆರೋಪಗಳ ಜೊತೆಗೆ ಇತ್ತೀಚೆಗೆ ರಿಯಲ್ ಎಸ್ಟೇಟ್ ಮಾಫಿಯಾದಲ್ಲಿಯೂ ಉಪ್ಪಿ ಹೆಸರು ಕೇಳಿ ಬಂದಿದೆ. ಆದರೆ ಉಪ್ಪಿ ತಾನು ಪ್ರಜಕೀಯ ಹೆಸರಿನಲ್ಲಿ ಸಮಾಜ ಸುಧಾರಣೆಗೆ ಇಳಿಯುವ ಸೂಚನೆ ಸಿಕ್ಕಾಕ್ಷಣ ಯಾರೋ ಇಂಥಾ ಆರೋಪ ಮಾಡಲ್ಲ ಅಂತ ತಿಳ್ಕೊಂಡಿದ್ದಾರೆ ಇಂಥಾ ನಾಜೂಕು ಆಸಾಮಿಗಳಿಂದ ಇನ್ನೆಂಥಾ ಸಮಾಜ ಸುಧಾರಣೆಯಾಗಲು ಸಾಧ್ಯ” ಎಂಬ ಮಾತುಗಳನ್ನಾಡಲು ಆರಂಭಿಸಿದ್ದಾರೆ. ಆದರೆ ಈ ಎಲ್ಲಾ ಪ್ರಶ್ನೆಗೆ ಕೇವಲ ಉಪೇಂದ್ರ ಅವರ ಬಳಿ ಮಾತ್ರ ಉತ್ತರವಿದೆ. ರಾಜಕೀಯಕ್ಕೆ ಬರೋದೇ ಮಾಫಿಯಾಗಳನ್ನ ನಡೆಸೋದಕ್ಕಾ ಅಥವಾ ಯಾರಾದರೂ ಸಮಾಜ ಸುಧಾರಣೆಗೆ ಬಂದಾಗ ಅವರ ಮೇಲೆ ಬೇಕು ಎಂತಲೇ ಇಂತಹ ಆರೋಪಗಳು ಕೇಳಿಬರುತ್ತವೆಯೇ ಗೊತ್ತಿಲ್ಲಾ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top