fbpx
ಮನೋರಂಜನೆ

ಸಂಯುಕ್ತ-2 ಚಿತ್ರದ ಗ್ರಾಫಿಕ್ಸ್ ಗೆ 50ಲಕ್ಷ ಖರ್ಚು.

ಸಂಯುಕ್ತ-2 ಚಿತ್ರದ ಗ್ರಾಫಿಕ್ಸ್ ಗೆ 50ಲಕ್ಷ ಖರ್ಚು.

 

 

ಮುಂದಿನ ವಾರ ಅಂದರೆ ನವೆಂಬರ್ 10 ರಂದು ತೆರೆ ಕಾಣುತ್ತಿರುವ ಸಂಯುಕ್ತ-೨ ಚಿತ್ರವನ್ನು ಎಲ್ಲಾ ಸಿನಿರಸಿಕರು ನೋಡಲೇಬೇಕು..ಎಂಬತ್ತರ ದಶಕದ ಕೊನೆಯಲ್ಲಿ ತೆರೆಗೆ ಬಂದು ಸೂಪರ್ ಡೂಪರ್ ಹಿಟ್ ಆಗಿದ್ದ ಶಿವಣ್ಣ ಅಭಿನಯದ ‘ಸಂಯುಕ್ತ’ ಸಿನಿಮಾ ಎಲ್ಲರಿಗೂ ಗೊತ್ತಿರುತ್ತದೆ. ಈಗ ಇದೇ ಹೆಸರನ್ನು ಹೊಂದಿರುವ ಮತ್ತೊಂದು ಅಪ್ಪಟ ಕನ್ನಡ ಚಿತ್ರ ತಯಾರಾಗಿದ್ದು ಬಿಡುಗಡೆಗೆ ರೆಡಿಯಾಗಿದೆ. ಈ ಚಿತ್ರದ ಪೂರ್ಣ ಶೀರ್ಷಿಕೆ ‘ಸಂಯುಕ್ತ 2’. ಇದು ಅದ್ದೂರಿ ವೆಚ್ಚದ ಸೈನ್ಸ್ ಫಿಕ್ಷನ್ ಹಾಗೂ ಸಸ್ಪೆನ್ಸ್ ಸಿನಿಮಾವಾಗಿದ್ದು ಸಿನಿರಸಿಕರಲ್ಲಿ ಬಾರಿ ನಿರೀಕ್ಷೆ ಹುಟ್ಟುಹಾಕಿದೆ. ನಟ ಚೇತನ್ ಚಂದ್ರ ಈ ಚಿತ್ರದ ನಾಯಕ. ಮುಂದೆ ಓದಿ

 

 

ಸಿನಿಮಾದ ಮುಖ್ಯ ಅಂಶಗಳಲ್ಲಿ ಒಂದಾದ ಗ್ರಾಫಿಕ್ಸ್ ಮೇಲೆ ಚಿತ್ರತಂಡ ತುಂಬಾ ಕೆಲಸ ಮಾಡಿದ್ದು ಈ ಸಿನಿಮಾದ ಕ್ಲೈಮ್ಯಾಕ್ಸ್‌ ಭಾಗಕ್ಕಾಗಿಯೇ ಬರೋಬ್ಬರಿ ₹50 ಲಕ್ಷ ಖರ್ಚು ಮಾಡಲಾಗಿದೆ.. ಇಂಗ್ಲಿಷ್ ಸಿನಿಮಾಗಳಲ್ಲಿ ಗ್ರಾಫಿಕ್ಸ್ ಯಾವ ರೀತಿ ಫರ್ಫೆಕ್ಷನ್ ಆಗಿ ಮೂಡಿಬಂದಿರುತ್ತದೆಯೋ ಅದೇ ರೀತಿ ಆ ಮಟ್ಟದಲ್ಲಿ ಸಂಯುಕ್ತ ಚಿತ್ರಕ್ಕೆ ಗ್ರಾಫಿಕ್ ಕೆಲಸ ನಡೆದಿದೆ ಎಂದು ಚಿತ್ರತಂಡ ಹೇಳಿದೆ. ಅಲ್ಲದೆ ಸಂಯುಕ್ತ-2 ಚಿತ್ರದ ಕೊನೆಯ ಹದಿನೈದು ನಿಮಿಷಗಳ ಭಾಗವನ್ನು ಸಿನಿಮಾರಂಗದ ಇತಿಹಾಸದಲ್ಲೇ ಯಾರೂ ಕೂಡ ಊಹೆ ಮಾಡಿರದಷ್ಟು ವಿಭಿನ್ನವಾಗಿ ಚಿತ್ರಿಸಲಾಗಿದೆ ಎಂದು ಚಿತ್ರತಂಡ ಹೇಳಿದೆ.

 

 

“ನಾನು ಈವರೆಗೂ ಕಾಣಿಸಿಕೊಂಡಿರದ ಪಾತ್ರವನ್ನು ಈ ಚಿತ್ರದಲ್ಲಿ ನಿರ್ವಹಿಸಿದ್ದೇನೆ.ಚಿತ್ರ ಪರಿಪೂರ್ಣವಾಗಿ ಮೂಡಿಬರಬೇಕು ಎಂಬ ಉದ್ದೇಶದಿಂದ ಅನೇಕ ದೃಶ್ಯಗಳನ್ನು ರಿರೆಕಾರ್ಡಿಂಗ್ ಆದ ನಂತರವೂ ರೀಶೂಟ್ ಮಾಡಿದ್ದೇವೆ. ಟೆಕ್ನಿಕಲಿ ಈ ಚಿತ್ರ ಬಹಳ ಚೆನ್ನಾಗಿ ಮೂಡಿಬಂದಿದೆ. ಪ್ರತಿಯೊಬ್ಬರೂ ಈ ಚಿತ್ರವನ್ನು ಇಷ್ಟಪಡುತ್ತಾರೆ” ಎಂದು ಚೇತನ್ ಚಂದ್ರ ಹೇಳುತ್ತಾರೆ. ಚೇತನ್ ಅವರು ಈ ಚಿತ್ರದ ಒಂದು ಪಾತ್ರಕ್ಕೋಸ್ಕರ ಬರೋಬ್ಬರಿ 30 ಕೆ.ಜಿ. ತೂಕ ಹೆಚ್ಚಿಸಿಕೊಂಡು ಪುನಃ ಇಳಿಸಿಕೊಂಡಿದ್ದರಂತೆ..

 

 

ಅಂದಹಾಗೆ ಚಿತ್ರದಲ್ಲಿ ಚೇತನ್ ಗೆ ನಾಯಕಿಯರಾಗಿ ನೇಹಾ ಪಾಟೀಲ ಹಾಗೂ ಐಶ್ವರ್ಯ ಕಾಣಿಸಿಕೊಂಡಿದ್ದು ಮುಖ್ಯ ಪಾತ್ರಗಳಲ್ಲಿ ಪ್ರಭು ಸೂರ್ಯ ಹಾಗೂ ಸಂಜಯ್ ನಟಿಸಿದ್ದಾರೆ. ನಿರ್ದೇಶಕ ಅಭಿರಾಮ್ ಆಕ್ಷನ್ ಕಟ್ ಹೇಳಿರುವ ಈ ಚಿತ್ರಕ್ಕೆ ಕೆ.ವಿ. ರವಿಚಂದ್ರ ಸಂಗೀತ ಸಂಯೋಜನೆ ಮಾಡಿದ್ದಾರೆ. ಡಾ.ಮಂಜುನಾಥ ಡಿ.ಎಸ್ ರವರು ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ..ಸಂಯುಕ್ತದ ಚಿತ್ರದ ಟೀಸರ್’ಗಳು ಸದ್ಯ ಸೋಷಿಯಲ್ ಮೀಡಿಯಾಗಳಲ್ಲಿ ಸಕತ್ ಸದ್ದು ಮಾಡುತ್ತಿದ್ದು ಚಿತ್ರದ ಮೇಲೆ ತುಂಬಾ ನಿರೀಕ್ಷೆಯಿದೆ. ಚಿತ್ರವನ್ನು ನವೆಂಬರ್ 10ಕ್ಕೆ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ..

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top