fbpx
ಕಿರುತೆರೆ

ಚಂದನ್,ಸಮೀರ್ ಆಚಾರ್ಯ ಮಾಡಿದ್ದು ತಪ್ಪು ಎಂದು ಬೊಬ್ಬೆ ಹಾಕಿದ್ದ ಸೊಕಾಲ್ಡ್ ಸೆಲೆಬ್ರೆಟಿಗಳು ಈಗ ಅವರು ಮಾಡ್ತಿರೋದು ಸರೀನಾ ಸ್ವಾಮಿ..?

ಚಂದನ್,ಸಮೀರ್ ಆಚಾರ್ಯ ಮಾಡಿದ್ದು ತಪ್ಪು ಎಂದು ಬೊಬ್ಬೆ ಹಾಕಿದ್ದ ಸೊಕಾಲ್ಡ್ ಸೆಲೆಬ್ರೆಟಿಗಳು ಈಗ ಅವರು ಮಾಡ್ತಿರೋದು ಸರೀನಾ ಸ್ವಾಮಿ..?

 

ಕಳೆದ ವಾರ ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಆಗಿದ್ದ ರಿಯಾಜ್ ಅಡುಗೆ ಮನೆಯ ಡಿಪಾರ್ಟ್ಮೆಂಟ್ ಅನ್ನು ಚಂದನ್ ಶೆಟ್ಟಿ ಮತ್ತು ಸಮೀರಾಚಾರ್ಯರವರಿಗೆ ವಹಿಸಿದ್ದರು. ರಿಯಾಝ್ ಮನೆಯ ಕ್ಯಾಪ್ಟನ್ ಆಗಿದ್ದೇ ಕೆಲವು ಸೋಕಾಲ್ಡ್ ಸೆಲೆಬ್ರೆಟಿಗಳಿಗೆ ಇಷ್ಟ ಇರಲಿಲ್ಲ ಹೀಗಾಗಿ ರಿಯಾಝ್ ತೆಗೆದುಕೊಳ್ಳುವ ಪ್ರತಿ ನಿರ್ಧಾರಗಳನ್ನೂ ಆಕ್ಷೇಪಪಡಿಸುತ್ತಿದ್ದರು.. ಮುಖ್ಯವಾಗಿ ಅನುಪಮಾ ಕ್ಯಾಪ್ಟನ್ ರಿಯಾಜ್ ಮತ್ತು ಚಂದನ್ ವಿರುದ್ಧ ಇಲ್ಲ ಸಲ್ಲದ ಆರೋಪಗಳನ್ನ ಮಾಡಿ ಗಾಸಿಪ್ ಮಾಡಿದ್ದರು.

 

ಹೀಗಿರುವಾಗ ಈ ನಡುವೆ ಒಂದು ದೂರು ಬಂದಿತ್ತು “‘ಅಡುಗೆ ಮನೆಯ ಡಿಪಾರ್ಟ್ಮೆಂಟ್’ನಲ್ಲಿ ಇರುವವರು ಚೆನ್ನಾಗಿ ಅಡುಗೆ ಮಾಡುತ್ತಿಲ್ಲ. ತುಂಬಾ ಕೊಳಕು,ಗಲೀಜು. ರಾತ್ರಿಯ ಪಾತ್ರೆಗಳನ್ನು ಬೆಳೆಗ್ಗೆ ತೊಳೀತಾರೆ, ರಾತ್ರಿಯ ಪಾತ್ರೆಗಳನ್ನ ರಾತ್ರಿಯೇ ತೊಳೆದು ಬಿಡಬೇಕು ಎಂದು ಅನುಪಮಾ, ಆಶಿತಾ, ಜಗನ್ ಮಾತನಾಡಿ ದೊಡ್ಡ ದೊಡ್ಡ ಭಾಷಣ ಬಿಗಿದಿದ್ದರು. ಇದನ್ನೇ ದೊಡ್ಡ ರಾದ್ದಾಂತ ಮಾಡಿ ಜಗಳ ಹುಟ್ಟುಹಾಕಿದ್ದರು..

 

 

ಈವಾರ ಮನೆಯ ಕ್ಯಾಪ್ಟನ್ ಆಗಿರುವ ಚಂದನ್ ಶೆಟ್ಟಿ ಅಡುಗೆ ಚನ್ನಾಗಿ ಮಾಡುತ್ತಿಲ್ಲ,ತುಂಬಾ ಕೊಳಕು,ಗಲೀಜು ಅಂತೆಲ್ಲಾ ಆರೋಪ ಮಾಡಿದ್ದ ಸೋಕಾಲ್ಡ್ ಸೆಲೆಬ್ರೆಟಿಗಳಿಗೆ ಅಡುಗೆಮನೆಯ ಜವಾಬ್ದಾರಿಯನ್ನು ಕೊಟ್ಟರು. ಕಳೆದ ವಾರ ಅಡುಗೆ ಮನೆಯ ಡಿಪಾರ್ಟ್ ಮೆಂಟ್ ನಲ್ಲಿ ಕೇವಲ ನಾಲ್ಕುಜನ ಇದ್ದರು ಆದರೆ ಈ ಬಾರಿ ಬರೋಬ್ಬರಿ ಆರು ಜನ ಇದ್ದಾರೆ. ಆದರೂ ಕಳೆದ ವಾರಕ್ಕಿಂತ ಈ ವಾರ ಅಡುಗೆ ಮನೆ ತುಂಬಾ ಕೊಳಕಾಗಿದೆ ಹಾಗಂತ ಚಂದನ್ ಶೆಟ್ಟಿ ಕ್ಯಾಮರಾ ಮುಂದೆ ತಮ್ಮ ನೋವನ್ನು ಹೇಳಿಕೊಂಡಿದ್ದಾರೆ.

 

 

ಚಂದನ್ ಮತ್ತು ದಿವಾಕರ್ ಕ್ಯಾಮರಾ ಬಳಿಬಂದು “ರಾತ್ರಿಯ ಪಾತ್ರೆಗಳನ್ನು ರಾತ್ರಿಯೇ ತೊಳೆಯೋದಿಲ್ಲ ಅನ್ನೋ ವಿಷಯಕ್ಕೆ ಕಳೆದ ವಾರ ದೊಡ್ಡ ರಾದ್ದಾಂತ ಮಾಡಿದ್ದರು, ಅವಾಗ ಇಷ್ಟೊಂದು ಪಾತ್ರೆಗಳು ಇರಲಿಲ್ಲ ಒಂದೆರಡು ಪಾತ್ರೆಗಳು ಮಾತ್ರ ಇದ್ದವು ಆದರೆ ಇಲ್ಲಿ ನೋಡಿ ಪಾತ್ರೆಯ ಒಂದು ರಾಶಿಯೇ ಇದೆ. ಆದರೂ ನಾವೇನು ಇದರ ಬಗ್ಗೆ ಮಾತನಾಡೋಲ್ಲ, ಇದರ ಬಗ್ಗೆ ಮಾತಡುದ್ರೆ ನಾವೇ ಚೀಪ್ ಆಗ್ತೀವಿ, ಇದರ ಬಗ್ಗೆ ನಾವು ದೊಡ್ಡ ಜಗಳ ಮಾಡಬಹುದು ಆದರೆ ನಾವು ಮಾಡಲ್ಲ, ಈ ಬಗ್ಗೆ ಅವರ ಹತ್ರ ನಾವೇನೂ ಕೇಳೋದಿಲ್ಲ. .”

 

 

“ಕಳೆದವಾರ ತುಂಬಾ ಕಷ್ಟದ ಟಾಸ್ಕ್ ಇದ್ದರೂ, ಕೈ ಕಾಲುಗಳಿಗೆ ಏಟು ಬಿದ್ದಿದ್ದರೂ ನಾವೂ ಅಡುಗೆ ಮಾಡಿ ಪಾತ್ರೆಗಳನ್ನ ತೊಳೆದು ಮಲಗುತ್ತಿದ್ದೆವು, ಈ ವಾರ ಕಷ್ಟದ ಟಾಸ್ಕ್ ಇಲ್ಲದಿದ್ದರೂ ಪಾತ್ರೆಗಳನ್ನ ತೊಳಿಯದೆಯೇ ಹಾಗೆ ಬಿಟ್ಟಿದ್ದಾರೆ. ಅವ್ರು ತಪ್ಪು ಮಾಡುದ್ರೆ ಅದು ತಪ್ಪಲ್ಲ ನಾವು ಮಾಡುದ್ರೆ ಮಾತ್ರ ತಪ್ಪು ಅಂತ ತಿಳ್ಕೊಂಡಿದ್ದಾರೆ. ಅವರು ಮಾಡಿದರೆ ಸರಿ ಅದೇ ಕೆಲಸವನ್ನ ನಾವು ಮಾಡಿದರೆ ತಪ್ಪು ಎಂದು ನಮಗೆ ಅವಮಾನ ಮಾಡಿದ್ದಾರೆ. ನಮಗೆ ಆಗಿರುವ ಈ ಅವಮಾನವನ್ನ ಮತ್ತು ನಮ್ಮ ಕಷ್ಟವನ್ನ ನಿಮ್ಮತ್ರ ಹೇಳ್ಕೊಂಡಿದ್ದೇವೆ. ನಮ್ಮ ಮನಸಿಗೆ ನೋವಾಗಿರೋ ಕಾರಣ ಈ ಮನೆಯ ಬಾಸ್ ಆಗಿರುವ ನಿಮ್ಮತ್ರ ಹೇಳೋಕೊಟ್ಟಿದ್ದಿವೆ” ಎಂದು ಚಂದನ್ ಮತ್ತು ದಿವಾಕರ್ ಕ್ಯಾಮರಾ ಬಳಿ ತಮ್ಮ ನೋವನ್ನ ಹೇಳಿಕೊಂಡರು.

 

 

ಒಟ್ಟಾರೆಯಾಗಿ ತಾವು ಮಾಡುದ್ರೆ ಸರಿ ಇನ್ನೊಬ್ಬರು ಮಾಡುದ್ರೆ ತಪ್ಪು ಅನ್ನೋ ಕಲ್ಪನೆಯನ್ನು ಸೆಲೆಬ್ರೆಟಿಗಳು ಮಾಡುತ್ತಿರುವುದು ಒಂದು ಸ್ವಲ್ಪವೂ ಸರಿಯಾಗಿ ಕಾಣುತ್ತಿಲ್ಲ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

1 Comment
Sachin says:

Chandan rockzz.. Jagan flop.. But I love Shruti…

To Top