fbpx
ಕಿರುತೆರೆ

ವೀಣೆಯಲ್ಲಿ ಮೂಡಿಬಂತು ಬಿಗ್’ಬಾಸ್ ನಲ್ಲಿ ಚಂದನ್ ಶೆಟ್ಟಿ ಹಾಡಿದ ‘ಗೊಂಬೆ’ ಹಾಡು: ‘ಗೊಂಬೆ’ ಯಾವ ರೀತಿ ಕ್ರೇಜ್ ಹುಟ್ಟಿಸಿದೆ ನೋಡಿ.

ವೀಣೆಯಲ್ಲಿ ಮೂಡಿಬಂತು ಚಂದನ್ ಶೆಟ್ಟಿ ಹಾಡಿದ ‘ಗೊಂಬೆ’ ಹಾಡು: ‘ಗೊಂಬೆ’ ಯಾವ ರೀತಿ ಕ್ರೇಜ್ ಹುಟ್ಟಿಸಿದೆ ನೋಡಿ..!

 

 

ಈ ಭಾರಿಯ ಬಿಗ್ ಬಾಸ್ ಕಾರ್ಯಕ್ರಮದ ಬಲಿಷ್ಠ ಸ್ಪರ್ದಿಗಳಲ್ಲಿ ಒಬ್ಬರಾದ ಚಂದನ್ ಶೆಟ್ಟಿ ಬಿಗ್ ಬಾಸ್ ಒಳಗೆ ಮತ್ತು ಹೊರಗೆ ಎಲ್ಲರಿಗೂ ಇಷ್ಟವಾಗಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ನನ್ನ ಮ್ಯೂಸಿಕ್’ಅನ್ನು ಮಿಸ್ ಮಾಡ್ಕೋತಿದ್ದೀನಿ ಎಂದು ಅವಾಗವಾಗ ಹೇಳಿಕೊಳ್ಳುತ್ತಿರುತ್ತಾರೆ ಆದರೂ ಅಲ್ಲಿರುವ ವಸ್ತುಗಳ ಸಹಾಯದಿಂದಲೇ ಅವಕಾಶ ಸಿಕ್ಕಾಗೆಲ್ಲಾ ತಮ್ಮ ಗಾಯನದ ಮೂಲಕ ಎಲ್ಲರೂ ಕುಣಿಯುವಂತೆ ಮಾಡುತ್ತಿದ್ದಾರೆ..!

 

 

ಕೈಗೆ ಸಿಕ್ಕ ವಸ್ತುಗಳನ್ನೇ ಸಂಗೀತ ಸಂಯೋಜನೆಗೆ ಉಪಕರಣಗಳನ್ನಾಗಿ ಉಪಯೋಗಿಸಿಕೊಂಡು, ಸ್ಥಳದಲ್ಲೇ ರ‍್ಯಾಪ್‌ ಸಾಂಗ್‌ ಮಾಡುವ ಚಂದನ್‌ ಟ್ಯಾಲೆಂಟ್‌ಗೆ ಎಲ್ಲರೂ ಫಿದಾ ಆಗಿದ್ದಾರೆ. ಕನ್ನಡ ರಾಜ್ಯೋತ್ಸವದಂದು ಚಂದನ್‌ ಮಾಡಿದ ರ‍್ಯಾಪ್‌ ಸಾಂಗ್‌ ಸೋಷಿಯಲ್ ಮೀಡಿಯಾಗಳಲ್ಲಿ ಸಖತ್‌ ವೈರಲ್‌ ಆಗಿತ್ತು ಈ ಹಾಡನ್ನು ಸ್ವತಃ ಕಿಚ್ಚ ಸುದೀಪ್ ಅವರೇ ಮೆಚ್ಚಿಕೊಂಡಿದ್ದರು ಇದೀಗ ನಿವೇದಿತಾ ಗೌಡ ಮೇಲೆ ಎರಡನೇ ಬಾರಿ ರ‍್ಯಾಪ್‌ ಸಾಂಗ್‌ ಮಾಡಿ ಸಿಕ್ಕಾಪಟ್ಟೆ ಸುದ್ದಿ ಆಗಿದ್ದಾರೆ.

 

ಬಿಗ್’ಬಾಸ್ ಮನೆಯ ಗೊಂಬೆ ಎಂದು ಖ್ಯಾತಿಗಳಿಸಿರುವ ನಿವೇದಿತಾ ಗೌಡ ಕುರಿತು ಒಂದು ಹಾಡನ್ನು ಹಾಡಿದ್ದಾರೆ. ವಿಶೇಷ ಎಂಬಂತೆ ತಮ್ಮ ರ್ಯಾಪ್ ಶೈಲಿಯಲ್ಲಿ ಹಾಡನ್ನು ಕುಳಿತಲ್ಲಿಯೇ ಸಾಹಿತ್ಯ ಮತ್ತು ಟ್ಯೂನ್ ಮಾಡಿ ಹಾಡು ಎರಡು ಭಾರಿ ಹಾಡಿದ್ದಾರೆ..ನಿವೇದಿತಾಳ ಸೌಂದರ್ಯವನ್ನು ವ್ಯಂಗ್ಯವಾಗಿ ರ್ಯಾಪ್ ಮಾಡಿ ಹಾಡಿದ್ದಾರೆ..’ಗೊಂಬೆ…ಗೊಂಬೆ’ ಎಂದು ಹಾಡಿ ನಿವೇದಿತಾ ಗೌಡ ಅವರನ್ನ ಸಿಕ್ಕಾಪಟ್ಟೆ ಗುಣಗಾನ ಮಾಡಿದ್ದಾರೆ. ಈ ಹಾಡು ಸೋಷಿಯಲ್ ಮೀಡಿಯಾಗಳಲ್ಲಿ ಸಕತ್ ವೈರಲ್ ಆಗಿದ್ದು ಈ ಹಾಡನ್ನು ಮೆಚ್ಚಿಕೊಂಡಿರುವ ವೀಣೆ ನುಡಿಸುವ ಕಲಾವಿದರೊಬ್ಬರು ಗೊಂಬೆ ಹಾಡನ್ನು ವೀಣೆಯಲ್ಲಿ ನುಡಿಸಿ ಸದ್ದು ಮಾಡುತ್ತಿದ್ದಾರೆ.

 ಗೊಂಬೆ ಹಾಡಿನ ವೀಣೆ ಮ್ಯೂಸಿಕ್ ಕೇಳಲು ಕೆಳಗಿನ ವಿಡಿಯೋ ಕ್ಲಿಕ್ ಮಾಡಿ.👇👇👇

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top