fbpx
ಕಿರುತೆರೆ

ಅಂದು ಹಾಲು ಕದ್ದು ಬಚ್ಚಿಟ್ಟರು, ಮೊನ್ನೆ ಚಾಕೆಲೆಟ್ ಕದ್ದು ತಿಂದರು: ಅನುಪಮಾ ‘ಚೀಪ್’ ಅಂದ್ರೆ ಇದೆ ಅಲ್ವಾ?

ಅಂದು ಹಾಲು ಕದ್ದು ಬಚ್ಚಿಟ್ಟರು, ಮೊನ್ನೆ ಚಾಕೆಲೆಟ್ ಕದ್ದು ತಿಂದರು.: ಅನುಪಮಾ ‘ಚೀಪ್’ ಅಂದ್ರೆ ಇದೆ ಅಲ್ವಾ?

 

 

ಬಿಗ್ ಬಾಸ್ ಮನೆಯಲಿ ಸದ್ಯ ಊಟದ ಕಳ್ಳರ ಹಾವಳಿ ಜಾರಾಗೋಗಿದೆ. ಕಳೆದ ವಾರ ಹಾಲು ಕದ್ದು ವೀಕ್ಷಕರ ಕೈನಲ್ಲಿ ಚೀಮಾರಿ ಹಾಕಿಸಿಕೊಂಡಿದ್ದ ಸೆಲೆಬ್ರೆಟಿ ಮಹಾನುಭಾವರುಗಳು ಮೊನ್ನೆ ಚಾಕಲೇಟ್ ಕದ್ದು ತಿಂದು ಬಿಗ್ ಬಾಸ್ ಕೊಟ್ಟ ಶಿಕ್ಷೆಗೆ ಗುರಿಯಾಗಿದ್ದಾರೆ.

 

 

ಕಳೆದ ವಾರ ರಿಯಾಜ್ ಕ್ಯಾಪ್ಟನ್ ಆಗಿದ್ದಾಗ ಹಣ್ಣುಗಳು ಎಷ್ಟಿವೆ ಎಂದು ಎಣಿಸಿದ್ದಕ್ಕೆ “ತೂ ಎಂತಾ ಚೀಪ್ ಮನುಷ್ಯರಪ್ಪ, ತಿನ್ನೋ ಪದಾರ್ಥನ ಎಣಿಕೆ ಮಾಡ್ತಾರೆ ಎಂದು ದೊಡ್ಡದಾಗಿ ಕಾಮೆಂಟ್ ಮಾಡಿದ್ದ ಅನುಪಮಾ ಅದೇ ತಿನ್ನೋ ಪದಾರ್ಥಗಳನ್ನುಂ ಎರೆಡೆರಡು ಬಾರಿ ಕದ್ದಿದ್ದಾರೆ.” ತಿನ್ನೋ ಪದಾರ್ಥಗಳನ್ನ ಕದ್ದು ತಿಂದಿರುವ ಅನುಪಮಾ ಎಷ್ಟು ಚೀಪ್ ಇರಬಹುದು..ಕುಡಿಯ ಹಾಲನ್ನು ಕದ್ದು ಮುಚ್ಚಿಡುವಾಗ ಇದು ಸರಿಯೋ ತಪ್ಪೋ ಅಂತ ಯೋಚನೆ ಮಾಡದೇ ಬಚ್ಚಿಟ್ಟು ಅದನ್ನು ಸಮರ್ಥಿಸಿಕೊಂಡ ಅನುಪಮಾ ಈಗ ಅಡುಗೆ ಮನೆಯ ವಿಚಾರಕ್ಕೆ ಉರ್ಕೊಳ್ತಿದ್ದಾರೆ.

 

 

“ಅಡುಗೆ ಮನೆಯ ಸಾಮಾನು, ರೇಷನ್ ನ ರಿಯಾಝ್ ಚೆಕ್ ಮಾಡೋಕೆ.. ಅವನ್ನೆಲ್ಲಾ ಏನು ಅವರ ಮನೆಯಿಂದ ತಂದಿದ್ದಾ ಅಂತ ಅನುಪಮಾ ಕೇಳ್ತಾರೆ.” ಅದೇ ಪ್ರಶ್ನೆಯನ್ನ ಅವರಿಗೆ ಕೇಳಬೇಕು ಅಂದ್ರೆ ಕಳೆದ ವಾರ ಹಾಲನ್ನ ಬಚ್ಚಿಟ್ಟಿದ್ದ ಆ ಹಾಲನ್ನ ಅವರ ಮನೆಯಿಂದ ತಂದಿದ್ದರಾ.? ಸಮೀರಾಚಾರ್ಯ ಅವರಿಗೆ ಒಂದು ಲೋಟ ಹಾಲು ಕೊಡದೆ ದೊಡ್ಡ ರಾದ್ಧಾಂತಕ್ಕೆ ಕಾರಣವಾಗಿದ್ದ ಅನುಪಮಾ ಗೌಡ ಇದು ಮಾಡಿದ್ದು ಸರಿನಾ ಎಂದು ವೀಕ್ಷಕರು ಪ್ರಶ್ನಿಸುತ್ತಿದ್ದಾರೆ.

 

 

ಮೊನ್ನೆ ನಾಮಿನೇಷನ್ ಪ್ರಕ್ರಿಯೆ ಮುಗಿದ ಬಳಿಕ ಹಣ್ಣನ್ನು ಕೌಂಟ್ ಮಾಡಿದ್ದನ್ನು ಲೆಕ್ಕ ತಗೋತಾರೆ ಎಂತ ಚೀಪ್ ಮನುಷ್ಯರಪ್ಪ ಅಂತ ಅನುಪಮಾ ಹೇಳಿದ್ದರು. ಇದೆ ಪ್ರಶ್ನೆಯನ್ನು ಅವರಿಗೆ ಕೇಳಿದರೆ ತಿನ್ನೋ ಪದಾರ್ಥಗಳನ್ನ ಕದ್ದು ತಿನ್ತಾರಲ್ಲ ಇವರೆಷ್ಟು ಚೀಪ್. ಇದೇ ಕೆಲಸವನ್ನ ಜನಸಾಮಾನ್ಯ ಸ್ಪರ್ಧಿಗಳು ಮಾಡಿದ್ರೆ, ಸೆಲೆಬ್ರಿಟಿ ಸ್ಪರ್ಧಿಗಳು ಸುಮ್ಮನೆ ಬಿಡ್ತಿದ್ರಾ ಆಕಾಶ ಭೂಮಿನ ಒಂದು ಮಾಡಿಬಿಡುತ್ತಿದ್ದರು.

 

 

ನಾವು ಸೆಲೆಬ್ರಿಟಿ, ಕಾಮನ್ ಮ್ಯಾನ್ ಅಂತ ಭೇದ ಭಾವ ಮಾಡಲ್ಲ. ನಾವೆಲ್ಲಾ ಒಂದೇ ಇಲ್ಲಿ, ಎಲ್ಲವನ್ನು ಹಂಚಿಕೊಂಡು ತಿನ್ನುತ್ತಿದ್ದೇವೆ ಎಂದು ಪ್ರತಿ ಬಾರಿ ಭಾಷಣ ಬಿಗಿಯುವ ಸೆಲೆಬ್ರಿಟಿಗಳು(ಅನುಪಮಾ, ಆಶಿತಾ, ಚಂದ್ರು) ಚಾಕಲೇಟ್ ಕದ್ದು ತಿನ್ನುತ್ತಿದ್ದಾಗ ಎದುರಿಗೆ ನಿಂತಿದ್ದ ಸಮೀರಾಚಾರ್ಯ ಅವರಿಗೆ ಬಾಯಿ ಮಾತಿಗಾದರೂ ‘ಬೇಕಾ’ ಅಂತ ಕೇಳಲಿಲ್ಲ.. ಹೇಗೆ ಆಶಿತಾಗೆ ಗುಟ್ಟಾಗಿ ಚಾಕಲೇಟ್ ತಂದು ಕೊಟ್ಟರೋ ಹಾಗೆ ಸಮೀರ್ ಆಚಾರ್ಯ ಅವರಿಗೂ ಕೊಟ್ಟಿದ್ದಾರೆ ಆಗ ಇವರು ನಿಜವಾಗಲೂ ಭೇದ ಮಾಡುತ್ತಿಲ್ಲ ಎಂದು ನಂಬಬಹುದಿತ್ತು. ಆದರೆ ಇದೇ ಇವರ ನಿಜವಾದ ಯೋಗ್ಯತೆ ಅಷ್ಟೇ.

 

 

ಹಾಲು,ಚಾಕಲೇಟ್ ಕದ್ದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top