fbpx
ಸಮಾಚಾರ

ರಿಯಾಝ್ ಮಾಡಿದ್ದು ತಪ್ಪಂತೆ, ಅದೇ ಕೆಲ್ಸ ಅನುಪಮಾ ಮಾಡುದ್ರೆ ಸರಿಯಂತೆ: ಯಾವ್ ಸೀಮೆ ನ್ಯಾಯ ಸ್ವಾಮಿ ಈ ಅನುಪಮಾ & ಅಶಿತಾದು..?

ರಿಯಾಝ್ ಮಾಡಿದ್ದು ತಪ್ಪಂತೆ, ಅದೇ ಕೆಲ್ಸ ಅನುಪಮಾ ಮಾಡುದ್ರೆ ಸರಿಯಂತೆ: ಯಾವ್ ಸೀಮೆ ನ್ಯಾಯ ಸ್ವಾಮಿ ಈ ಅನುಪಮಾ & ಅಶಿತಾದು..?

 

 

ಬಿಗ್ ಬಾಸ್ ನಲ್ಲಿ ಈಗ ಒಬ್ಬರಿಗೆ ಒಂದು ನ್ಯಾಯ ಮತ್ತೊಬ್ಬರಿಗೊಂದು ನ್ಯಾಯ ನಡಿತಾ ಇದೇ.. ಈ ನಿಯಮವನ್ನು ಬಿಗ್ ಬಾಸ್ ತಂದಿರುವುದಲ್ಲ ಬದಲಾಗಿ ಅಲ್ಲಿರುವ ಕೆಲವು ಸೋಕಾಲ್ಡ್ ಸೆಲೆಬ್ರೆಟಿಗಳು ಮಾಡಿಕೊಂಡಿರುವುದು. ಕಳೆದ ವಾರ ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಆಗಿದ್ದ ರಿಯಾಜ್ ಅಡುಗೆ ಮನೆಯ ಡಿಪಾರ್ಟ್ಮೆಂಟ್ ಅನ್ನು ಚಂದನ್ ಶೆಟ್ಟಿ ಮತ್ತು ಸಮೀರಾಚಾರ್ಯರವರಿಗೆ ವಹಿಸಿದ್ದರು.. ಹಾಲನ್ನು ಕದ್ದು ಬಚ್ಚಿಟ್ಟು ದೊಡ್ಡ ರಾದ್ದಂತ ಮಾಡಿದ್ದರಿಂದ ರಿಯಾಝ್ ಅವರು ಕಳುಹಿಸಲಾಗಿದ್ದ ಹಣ್ಣನ್ನು ಎಷ್ಟಿವೆ ಎಂದು ಎಣಿಸಿಟ್ಟಿದ್ದರು.

 

 

ಹಣ್ಣನ್ನು ಎಣಿಸಿ ಸಮನಾಗಿ ಹಂಚಿಕೆ ಮಾಡಿದ್ದಕ್ಕೆ ಆಶಿತಾ ‘ಚೀಪ್’ ಎಂದಿದ್ದರು. ತಿನ್ನೋ ಪದಾರ್ಥನ ಎಣಿಕೆ ಮಾಡ್ತಾರಲ್ಲ ಇದು ‘ಚೀಪ್ ಥಿಂಕಿಂಗ್’ ಎಂದು ಆಶಿತಾ ಹೇಳಿದರು..ಹಾಲನ್ನ ಎತ್ತಿಟ್ವಿ ನಿಜ, ಆದ್ರೆ ಅದರಿಂದ ಏನನ್ನೂ ಮಾಡಿಕೊಂಡು ತಿಂದಿಲ್ಲ. ತಿನ್ನೋ ಬಾಳೆಹಣ್ಣು,ಸೇಬಿನ ಬಗ್ಗೆ ಮಾತಾಡ್ತಾರೆ “ತೂ ಎಂತಾ ಜನ” ಅಂತ ಅನುಪಮಾ ಹೇಳಿದ್ದರು.

 

 

ಹಣ್ಣನ್ನ ರಿಯಾಝ್ ಹಂಚಿದರೆ ಅದು ಆಶಿತಾ ಮತ್ತು ಅನುಗೆ ‘ಚೀಪ್ ಥಿಂಕಿಂಗ್’ ಅಂತೇ ಅದೇ ಸೆಲೆಬ್ರಿಟಿಗಳು ಚಾಕಲೇಟ್ ಕದ್ದು ತಿಂದರೆ ಅದು ‘ನೋ ಪ್ರಾಬ್ಲೆಮ್ ದಟ್ಸ್ ಕ್ಯೂಟ್’ ಅಂತೇ, ಏನ್ ಸ್ವಾಮಿ ಇವರ ನ್ಯಾಯ. ಮೊನ್ನೆ ಮನೆಯ ಸದಾಯರುಗಳಿಗೆಲ್ಲ ಕೇಕ್ ಮತ್ತು ಬಿಸ್ಕೆಟ್’ಗಳನ್ನು ಕಳುಹಿಸಲಾಗಿತ್ತು. ಆಗ ಆ ಬಿಸ್ಕೆಟ್ ಗಳನ್ನ ಸ್ವತಃ ಅನುಪಮಾ ಅವರೇ ಲೆಕ್ಕ ಹಾಕಿ ಎಲ್ಲರಿಗೂ ಎರೆಡೆರೆಡು ಬರುತ್ತೆ ಎಂದು ಇದು ನನಗೆ, ಇದು ಜಗನ್’ಗೆ, ಇದು ಕೃಷಿಗೆ, ಇದು ಆಶಿತಾಗೆ” ಎನ್ನುತ್ತಾ ಅಷ್ಟೂ ಜನರ ಪಾಲನ್ನ ಅನುಪಮಾ ಗೌಡ ಎತ್ತಿಕೊಂಡು ಹೋದರು.. ಇದು ಲೆಕ್ಕ ಹಾಕಿದ ಹಾಗೆ ಆಗಲಿಲ್ಲವಾ? ಆಶಿತಾಗೆ ಇದು ಕಾಣಿಸಲಿಲ್ಲವಾ?

 

 

ಹಣ್ಣುಗಳನ್ನು ರಿಯಾಸ್ ಸಮನಾಗಿ ಹಂಚಿದ್ದಕ್ಕೆ ಚೀಪ್ ಅಂದಿದ್ದ ಅನುಪಮಾ ಮತ್ತು ಆಶಿತಾ ಇದಕ್ಕೆ ಏನೆಂದು ಹೇಳುತ್ತಾರೆ.. ರಿಯಾಸ್ ಮಾಡಿದರೆ ತಪ್ಪು ಅದೇ ಕೆಲಸವನ್ನ ಅನುಪಮಾ ಮಾಡುದ್ರೆ ಸರೀನಾ..?ಇದು ಚೀಪ್ ಥಿಂಕಿಂಗ್ ಅಲ್ವಾ? ಮೂರು ಜನ ಸೆಲೆಬ್ರಿಟಿಗಳು ಚಾಕಲೇಟ್ ಅನ್ನು ಕಾಡು ತಿನ್ನುತ್ತಿರುವಾಗ, ಅಲ್ಲೇ ಇದ್ದ ಸಮೀರಾಚಾರ್ಯರಿಗೆ ಕೊಡಲಿಲ್ಲ. ಕೊಡುವುದಿರಲಿ ಬಾಯಿ ಮಾತಿಗಾದರೂ “ಬೇಕಾ’ ಎಂದೂ ಕೇಳಲಿಲ್ಲ .. ಇದು ಚೀಪ್ ಅಲ್ವಾ.?

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top