fbpx
ಕಿರುತೆರೆ

ಬಿಗ್’ಬಾಸ್ ಕಾರ್ಯಕ್ರಮದಿಂದ ಅನ್ಯಾಯ: ಕಾನೂನು ಸಮರಕ್ಕೆ ಮುಂದಾದ ಟೈಲರ್.

ಬಿಗ್’ಬಾಸ್ ಕಾರ್ಯಕ್ರಮದಿಂದ ಅನ್ಯಾಯ: ಕಾನೂನು ಸಮರಕ್ಕೆ ಮುಂದಾದ ಟೈಲರ್.

 

 

ಪ್ರತೀ ಸಲವೂ ಚಿತ್ರವಿಚಿತ್ರ ಜನರ ಜೊತೆ ಭಯಂಕರ ವಿಚಿತ್ರ ಎಲಿಮೆಂಟುಗಳನ್ನೂ ಮನೆತುಂಬಿಸಿಕೊಳ್ಳೋದು ಬಿಗ್‌ಬಾಸ್ ಮಹಿಮೆ. ಕನ್ನಡ ಕಿರುತೆರೆಯ ಅತಿದೊಡ್ಡ ಮತ್ತು ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್’ ಸೀಸನ್ 5 ಕಾರ್ಯಕ್ರಮದ ಆಯೋಜಕರಿಂದ ಅನ್ಯಾಯವಾಗಿದೆ ಎಂದು ಮೈಸೂರಿನ ಟೈಲರ್ ಭಯಾನಕ ನಾಗರಾಜ ಎಂಬುವವರು ದೂರಿದ್ದಾರೆ..

 

 

ವಿಶೇಷವಾಗಿ ಈ ಬಾರಿ ಜನ ಸಾಮಾನ್ಯರಿಗೂ ಅವಕಾಶ ನೀಡಲಾಗಿದೆ..ಈ ಬಾರಿ 11 ಸೆಲೆಬ್ರಿಟಿಗಳು ಹಾಗೂ 6 ಮಂದಿ ಜನಸಾಮಾನ್ಯರು ಸೇರಿ ಒಟ್ಟು 17 ಜನರು ಬಿಗ್‌ಬಾಸ್‌ ಮನೆಯೊಳಗೆ ಪ್ರವೇಶ ಪಡೆದಿದ್ದರು. ಸಾಮಾನ್ಯ ಸ್ಪರ್ಧಿಗಳ ಆಯ್ಕೆಯಲ್ಲಿ 40 ಸಾವಿರಕ್ಕೂ ಹೆಚ್ಚು ಅರ್ಜಿಗಳನ್ನು ಆನ್ಲೈನ್ ಮೂಲಕ ಆಹ್ವಾನಿಸಲಾಗಿತ್ತು ಆ ಪೈಕಿ ನಾನು ಅರ್ಜಿ ಸಲ್ಲಿಸಿದ್ದೆ. ನಾನು ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದೇನೆ ಎಂದು ರಶೀದಿ ಬಂದಿತ್ತು.

 

 

ನಾನು ಕಾರ್ಯಕ್ರಮದಲ್ಲಿ ಭಾಗವಹಿಸಲು ಸಕಲ ಸಿದ್ದತೆಯನ್ನು ಮಾಡಿಕೊಂಡಿದ್ದೆ ಆದರೆ ಕೊನೆಯಲ್ಲಿ ಯಾವುದೇ ಸೂಚನೆ ನೀಡದಿದ್ದುದರಿಂದ ನನ್ನ ಸಮಯ ವ್ಯರ್ಥವಾಗಿದೆ. ನನ್ನ ಜೇವನ ಸಾಗಿಸಲು ಟೈಲರ್ ಆಗಿರುವ ನಾನು ಕೂಡ ಒಬ್ಬ ಸಾಮಾನ್ಯ ಮನುಷ್ಯ, ಬೇರೆಯವರಿಗಿಂತ ವಿಭಿನ್ನವಾದ ರೀತಿಯಲ್ಲಿ ನನ್ನ ವಿಡಿಯೋ ಮಾಡಿ ಅಪ್ ಲೋಡ್ ಮಾಡಿದ್ದೆ, ಮೊದಲು ಆಯ್ಕೆಮಾಡಿಕೊಂಡು ಕೊನೆಯಲ್ಲಿ ಯಾವುದೇ ಸೂಚನೆ ನೀಡಿಲ್ಲ. ಈಗ ಸ್ಪರ್ಧೆಯಲ್ಲಿ ಸಾಮಾನ್ಯ ವ್ಯಕ್ತಿಗಳ ಕೋಟಾದಲ್ಲಿ ಭಾಗಿಯಾಗಿರುವ ಸಾಮಾನ್ಯರು ನನಗಿಂತ ಹೇಗೆ ಭಿನ್ನವೆಂದು ಎಲ್ಲಿಯೂ ವಾಹಿನಿ ಸ್ಪಷ್ಟನೆ ನೀಡಿಲ್ಲ. ಹಾಗಾಗಿ ನನ್ನ ಸಮಯ ವ್ಯರ್ಥ ಮಾಡಿದ್ದಕ್ಕೆ ವಾಹಿನಿ ವಿರುದ್ಧ ನ್ಯಾಯಾಂಗ ಹೋರಾಟ ನಡೆಸುವುದಾಗಿ ನಾಗರಾಜ್ ಹೇಳಿದರು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top