fbpx
ಮನೋರಂಜನೆ

ಕನ್ನಡದಲ್ಲೂ ಮೂಡಿ ಬರುತ್ತಿದೆ ‘ಪ್ರೇಮಮ್’ ಚಿತ್ರ..! ಇದು ರಿಮೇಕಾ ಸ್ವಮೇಕಾ?

ಕನ್ನಡದಲ್ಲೂ ಮೂಡಿ ಬರುತ್ತಿದೆ ‘ಪ್ರೇಮಮ್’ ಚಿತ್ರ..! ಇದು ರಿಮೇಕಾ ಸ್ವಮೇಕಾ?

 

 

ಮಲಯಾಳಂನ ಸೂಪರ್‌ ಹಿಟ್‌ ಚಿತ್ರ ‘ಪ್ರೇಮಂ’ ಹೆಸರಿನಲ್ಲಿ ಕನ್ನಡದಲ್ಲೊಂದು ಹೊಸಬರ ಚಿತ್ರ ಸೆಟ್ಟೇರಲಿದೆ. ಆದರೆ ಅದು ಮಲೆಯಾಳಂ ಪ್ರೇಮಮ್ ನ ರೀಮೇಕೋ ಅಲ್ವೋ ಗೊತ್ತಿಲ್ಲ. ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ “ಪದ್ಮಾವತಿ’, “ಗಾಂಧಾರಿ’ ಧಾರಾವಾಹಿಗಳ ನಿರ್ದೇಶಕ ಅಶೋಕ್‌ ಕಶ್ಯಪ್‌ ಬಳಿ ಕೆಲಸ ಮಾಡಿರುವ ಹರೀಶ್‌ ಮಾಂಡವ್ಯ ಎಂಬುವವವರು ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ.

 

 

ರತ್ನಭುವನೇಶ್‌ ಎಂಬುವವರು ಈ ಚಿತ್ರಕ್ಕೆ ಬಂಡವಾಳವನ್ನು ಹೂಡುತ್ತಿದ್ದು ಈ ಹಿಂದೆ “ಹೊಂಬಣ್ಣ’ ಚಿತ್ರದಲ್ಲಿ ನಟಿಸಿದ್ದ ಧನುಗೌಡ ಮತ್ತು ಮಾಡಲಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಿರುವ ಮೋಕ್ಷ ನಾಯಕ, ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಚಿತ್ರಕ್ಕೆ ಇದೇ ತಿಂಗಳು(ನವೆಂಬರ್) 20ನೇ ತಾರೀಕಿನಂದು ಮುಹೂರ್ತ ನಡೆಯಲಿದೆ.

 

 

ಚಿತ್ರದಲ್ಲಿ ತಾರಾ, ಪದ್ಮಜಾರಾವ್‌, ಮೈಸೂರು ಗೋಪಿ, ಜ್ಯೋತಿರಾಯ್‌, ಹನುಮತೇಗೌಡ, ಮಯೂರಿ ನಟರಾಜ್‌, ಮಂಜು ಪಾಟೀಲ್‌ ಸೇರಿದಂತೆ ಅನೇಕರು ನಟಿಸಿದ್ದಾರೆ. ಚಿತ್ರಕ್ಕೆ ವಾಸುಕಿ ವೈಭವ್‌ ರವರ ಸಂಗೀತ ಸಂಯೋಜನೆ ಮತ್ತು ಪುಷ್ಪರಾಜ್‌ ಅವರ ಛಾಯಾಗ್ರಹಣ ವಿರುತ್ತದೆ. ಈ ಚಿತ್ರಕ್ಕೆ ಅನೀಶ್ ಎಂಬುವವರು ಕತೆ ಬರೆದಿದ್ದಾರೆ. ಉಳಿದಂತೆ ಹಾಡುಗಳಿಗೆ ಸಾಹಿತ್ಯವನ್ನು ಯೋಗರಾಜ್‌ಭಟ್‌, ಜಯಂತ್‌ ಕಾಯ್ಕಿಣಿಯವರು ಬರೆಯಲಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top