fbpx
ಮನೋರಂಜನೆ

ಸ್ಯಾಂಡಲ್’ವುಡ್ ನಟಿ ರಮ್ಯಾ ಬಾರ್ನಾ ಈಗ ರಮ್ಯಾ ಖಾನ್!

ಸ್ಯಾಂಡಲ್’ವುಡ್ ನಟಿ ರಮ್ಯಾ ಬಾರ್ನಾ ಈಗ ರಮ್ಯಾ ಖಾನ್!

 

 

ಫಹಾದ್ ಅಲಿ ಖಾನ್ ಎಂಬಾತನೊಂದಿಗೆ ರಿಜಿಸ್ಟರ್ ಮ್ತಾರೇಜ್ ಆಗಿ ಗ್ರ್ಯಾಂಡ್ ಆದೊಂದು ರಿಸೆಪ್ಷನ್ ಪ್ರೋಗ್ರಾಮ್ ಮಾಡೋದಾಗಿ ಹೇಳೋ ಮೂಲಕ ರೂಮರುಗಳಿಗೆ ಇತಿಶ್ರೀ ಹಾಡಿದ್ದವಳು ನಟಿ ರಮ್ಯಾ ಬಾರ್ನಾ. ಆದರೆ ಅದಾಗಿ ತಿಂಗಲುಗಳೇ ಕಳೆದರೂ ರಿಸೆಪ್ಷನ್ ನಡೆದ ಸುದ್ದಿ ಬಂದಿಲ್ಲ. ರಮ್ಯಾ ಬಾರ್ನಾಳ ಸದ್ದೂ ಇಲ್ಲ!

 

 

ಹಾಗಾದರೆ, ಏನಾಗಿದೆ ಅಂತ ಕೆಲ ಮಂದಿ ತಲಾಶು ನಡೆಸುತ್ತಲೇ ಕೆಲ ಅಚ್ಚರಿದಾಯಕ ಅಂಶಗಳು ಹೊರ ಬಿದ್ದಿವೆ. ಆ ನಿಟ್ಟಿನಲ್ಲಿ ಹೇಳೋದಾದರೆ ರಮ್ಯಾ ಬಾರ್ನಾ ಕೈ ಹಿಡಿದವನ ಜೊತೆ ಸಂಸಾರ ನಡೆಸುತ್ತಿದ್ದಾಳೆ. ಆಕೆ ತನ್ನ ಗಂಡ ಫಹಾದ್ ಅಲಿ ಖಾನ್ ಮನೆಯಲ್ಲೇ ಇದ್ದಾಳೆ. ಆದರೆ ರಮ್ಯಾ ಬಾರ್ನಾ ಈಗ ರಮ್ಯಾ ಖಾನ್ ಆಗಿದ್ದಾಳೆ!

 

 

ಮಡದಿ ಗಂಡನ ಸರ್‌ನೇಮ್ ಅನ್ನು ತನ್ನ ಹೆಸರಿನ ಮುಂದೆ ಪೋಣಿಸಿಕೊಳ್ಳೋದು ಮಾಮೂಲು. ಆದರೆ ರಮ್ಯಾ ಬಾರ್ನಾ ವಿಚಾರದಲ್ಲಿ ಆಕೆಯ ಹೆಸರ ಮುಂದೆ ಖಾನ್ ಸೇರಿಕೊಂಡಿರೋದು ಮತ್ತೊಂದು ಸುತ್ತಿನ ರೂಮರುಗಳಿಗೆ ಕಾರಣವಾಗಿದೆ. ಆಕೆ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದಾಳೆಂಬ ಮಾತುಗಳೂ ವ್ಯಾಪಕವಾಗಿ ಕೇಳಿ ಬರಲಾರಂಭಿಸಿವೆ!

 

 

ರಾಜಕಾರಣಿ ರಿಜ್ವಾನ್ ಅವರ ಸಂಬಂಧಿಕರ ಹುಡುಗ ಫಹಾದ್ ಅಲಿ ಖಾನ್ ಎಂಬಾತನೊಂದಿಗೆ ಮೇ ೨೯ರಂದೇ ರಮ್ಯಾ ಬಾರ್ನಾ ಮದುವೆಯಾಗಿದ್ದಳು. ಶಿವಾಜಿನಗರದ ನೋಂದಣಿ ಕಛೇರಿಯಲ್ಲಿ ಮದುವೆಯಾಗಿದ್ದ ಬಾರ್ನಾ ಅದ್ಧೂರಿ ಆರತಕ್ಷತೆಗೆ ಅಣಿಯಾಗುತ್ತಿರೋದಾಗಿ ಹೇಳಿಕೊಂಡಿದ್ದಳು. ಆದರೆ ಇದೀಗ ರಿಸೆಪ್ಷನ್ ಸುದ್ದಿಗೆ ಬದಲಾಗಿ ಆಕೆ ಮತಾಂತರಗೊಂಡಿದ್ದಾಳೆಂಬ ರೂಮರುಗಳು ಹರಡಿಕೊಂಡಿವೆ.

 

 

ಪ್ರಸ್ತುತದಲ್ಲಿ ಜಾತಿ ಧರ್ಮಗಳ ಗುರಾಣಿ ಹಿಡಿದು ಬಡಿದಾಡೋ ಮನಸ್ಥಿತಿ ಎಲ್ಲೆಡೆ ಪಸರಿಸುತ್ತಿದೆ. ಆದರೆ ಇಮಥಾ ಗೋಡೆಗಳನ್ನು ಒಡೆಯೋ ನಿಜವಾದ ತಾಕತ್ತಿರೋದು ಪ್ರೀತಿಗೆ ಮಾತ್ರ. ಧರ್ಮದಾಚೆಗೆ ಎರಡು ಜೀವಗಳ ನಡುವೆ ಪ್ರೀತಿ ಹಬ್ಬಿ ಸಂಬಂಧ ಬೆಳೆಯುತ್ತದೆ ಅಂದ ಮೇಲೆ ಉಳಿಕೆ ಹಾದಿಯನ್ನು ಕ್ರಮಿಸಲು ಧರ್ಮದ ಅನಿವಾರ್ಯತೆ ಇಲ್ಲ. ಆದರೆ ರಮ್ಯಾ ಬಾರ್ನಾಳ ಮತಾಂತರದ ಸುದ್ದಿ ಮನುಷ್ಯ ಪ್ರೇಮದ ನೈಜ ಪ್ರೆಮವೂ ಜಾತಿ ಧರ್ಮವನ್ನ ಮೀರಿಕೊಳ್ಳಲು ಸಾಧ್ಯವಿಲ್ಲವೇ ಎಂಬಂಥಾ ಕೊರಗಿನ ಪ್ರಶ್ನೆಯೊಂದನ್ನಷ್ಟೇ ಉಳಿಸಿದೆ. ರಮ್ಯಾ ಬಾರ್ನಾ ಉತ್ತರ ಕೊಡಬಹುದೇ?

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top