fbpx
ಮನೋರಂಜನೆ

ಸ್ಯಾಂಡಲ್’ವುಡ್ ಗೆ ಇಂದು(ನವೆಂಬರ್ 17) ದಾಖಲೆಯ ದಿನ..ಹೇಗೆ ಗೊತ್ತಾ?

ಸ್ಯಾಂಡಲ್’ವುಡ್ ಗೆ ಇಂದು(ನವೆಂಬರ್ 17) ದಾಖಲೆಯ ದಿನ..ಹೇಗೆ ಗೊತ್ತಾ?

 

 

ಕಳೆದ ವಾರ ಏಳು ಚಿತ್ರಗಳು ಬಿಡುಗಡೆಗೊಂಡಿದ್ದವು, ಈ ವಾರ ಬರೋಬ್ಬರಿ ಒಂಬತ್ತು ಕನ್ನಡ ಚಿತ್ರಗಳು ನಾಳೆ ತೆರೆ ಕಾಣುತ್ತಿವೆ. ಇದುವರೆಗೂ 7 ಅಥವಾ 8 ಚಿತ್ರಗಳು ಒಂದೇ ದಿನ ರೆಲೀಸ್ ಆದ ಉದಾಹರಣೆಗಳಿತ್ತು. ಆದರೆ ಬರೋಬ್ಬರಿ 9 ಸಿನಿಮಾಗಳು ತೆರೆಗೆ ಬರುತ್ತಿರುವುದು ಇದೇ ಮೊದಲು ಹಾಗಾಗಿ ಸ್ಯಾಂಡಲ್’ವುಡ್ ಗೆ ಇಂದು(ನವೆಂಬರ್ 17) ದಾಖಲೆಯ ದಿನವಾಗಿದೆ. ಇಂದು ಬಿಡುಗಡೆಗೊಳ್ಳುತ್ತಿರುವ ಯಾವ ಚಿತ್ರವನ್ನು ನೋಡೋದು ಅಂತ ಪ್ರೇಕ್ಷಕರಲ್ಲಿ ಗೊಂದಲ ಶುರುವಾಗಿದೆ.

 

 

ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ‘ಉಪೇಂದ್ರ ಮತ್ತೆ ಬಾ’, ಹಿರಿಯ ನಟ ದತ್ತಣ್ಣ ನಟಿಸಿರುವ ‘ಕೆಂಪಿರ್ವೆ’ ನಟ ಸಂಚಾರಿ ವಿಜಯ್ ಯವರ ‘ನನ್ ಮಗಳೇ ಹೀರೋಯಿನ್’, ಹಾಗೂ ಹೊಸಬರ ‘ಮಹಾನುಭಾವರು’, ‘ಪಾನಿಪುರಿ’, ‘ಅಸೂಚಭೂ’, ‘ನಂ 9 ಹಿಲ್ಟನ್ ಹೌಸ್’, ‘ಕಾವೇರಿ ತೀರದ ಚರಿತ್ರೆ’ ಮತ್ತು ‘ಮೂಕಹಕ್ಕಿ’ ಎಂಬ ಚಿತ್ರಗಳು ಇಂದು ಬಿಡುಗಡೆಯಾಗುತ್ತಿವೆ. ಈ ಪೈಕಿ ರಿಯಲ್ ಸ್ಟಾರ್ ಅಭಿನಯದ ‘ಉಪೇಂದ್ರ ಮತ್ತೆ ಬಾ’ ಕೊಂಚ ನಿರೀಕ್ಷೆಯನ್ನು ಹುಟ್ಟುಹಾಕಿದೆ.

 

 

ಹಯಗ್ರೀವ ಎಂಟರ್ ಪ್ರೈಸಸ್ ಲಾಂಛನದಲ್ಲಿ ಶ್ರೀಕಾಂತ್, ಶಶಿಕಾಂತ್ ಹಾಗೂ ನರೇಂದ್ರನಾಥ್ ಅವರು ನಿರ್ಮಿಸಿರುವ `ಉಪೇಂದ್ರ ಮತ್ತೆ ಬಾ’ ಚಿತ್ರ ಸಕತ್ ನಿರೀಕ್ಷೆ ಹುಟ್ಟುಹಾಕಿದೆ. ಉಪೇಂದ್ರ, ಪ್ರೇಮ, ಶೃತಿ ಹರಿಹರನ್, ಹರ್ಷಿಕ ಪೂಣಚ್ಛ, ವಸಿಷ್ಠ ಸಿಂಹ ಚಿತ್ರದ ಪ್ರಮುಖ ಆಕರ್ಷಣೆ..

 

 

ಈ ಚಿತ್ರದ ಜೊತೆ ಥ್ರಿಲ್ಲರ್, ಕಾಮಿಡಿ, ಡ್ರಾಮಾ ಸೇರಿದಂತೆ ಎಲ್ಲಾ ಶೈಲಿಯ ಚಿತ್ರಗಳು ಇಂದು ಬಿಡುಗಡೆಗೊಳ್ಳುತ್ತಿದ್ದು ಕನ್ನಡ ಚಿತ್ರಪ್ರೇಮಿಗಳು ತಮಗಿಷ್ಟವಾಗುವ ರೀತಿಯ ಚಿತ್ರವನ್ನು ಆಯ್ಕೆಮಾಡಿಕೊಳ್ಳಬಹುದು. ಇಂದು ತೆರೆಕಾಣುತ್ತಿರುವ ಚಿತ್ರಗಳ ಜೊತೆಗೆ ಡಾ.ರಾಜ್ ಅವರ ‘ದಾರಿ ತಪ್ಪದ ಮಗ’ ಚಿತ್ರ ರೀ ರಿಲೀಸ್ ಆಗುತ್ತಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top