fbpx
ಕನ್ನಡ

ಸ್ವಚ್ಚ ಮನಸ್ಸಿನ ಈ ಬಸ್ ಕಂಡಕ್ಟರ್ ಕನ್ನಡ ಪ್ರೇಮವನ್ನ ನೀವು ಮೆಚ್ಚಲೇಬೇಕು..!

ಸ್ವಚ್ಚ ಮನಸ್ಸಿನ ಈ ಬಸ್ ಕಂಡಕ್ಟರ್ ಕನ್ನಡ ಪ್ರೇಮವನ್ನ ನೀವು ಮೆಚ್ಚಲೇಬೇಕು..!

 

 

ಜಗತ್ತಿನಲ್ಲಿ ಅತ್ಯುತ್ತಮ ಸಾಹಿತ್ಯ ಸಂಪತ್ತನ್ನು ಹೊಂದಿರುವ ಕೆಲವೇ ಭಾಷೆಗಳಲ್ಲಿ ಕನ್ನಡವೂ ಒಂದು. ಇದಕ್ಕೆ ಎರಡು ಸಾವಿರ ವರ್ಷಗಳಿಗೂ ಹೆಚ್ಚಿನ ಇತಿಹಾಸವಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕನ್ನಡ ಭಾಷೆಯು ಬರ ಭಾಷಿಕರ ಹಾವಳಿಯ ಮದ್ಯೆ ಸಿಲುಕಿ ಒದ್ದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ವೃತ್ತಿಯಲ್ಲಿ ಸರ್ಕಾರಿ ಬಸ್ ಕಂಡಕ್ಟರ ಆಗಿ ಕಾರ್ಯನಿರ್ವಹಿಸುತ್ತಿರುವ ಸಿದ್ದಪ್ಪ ಎಂಬ ಈ ಕಂಡಕ್ಟರನ ಕನ್ನಡ ಪ್ರೇಮವನ್ನ ನೀವೆಲ್ಲರೂ ಮೆಚ್ಚಲೇಬೇಕು.

 

 

ಸಾಮಾನ್ಯವಾಗಿ ಬಸ್ ನಲ್ಲಿ ಟಿಕೆಟ್ ತಗೆದುಕೊಂಡಾಗ ನಮಗೆ ಚಿಲ್ಲರೆ ಕೊಡಲು ಕಂಡಕ್ಟರ ಬಳಿ ಚಿಲ್ಲರೆ ಇಲ್ಲದಿದ್ದರೆ ಟಿಕೆಟ್ ಹಿಂದೆ ಬರೆದು ಆಮೇಲೆ ಪಡೆಯಿರಿ ಎಂದು ಹೇಳುವುದು ರೂಡಿ. ಒಮ್ಮೆ ಬಸ್ಸಲ್ಲಿ ಪ್ರಯಾಣಿಕರೊಬ್ಬರು ಈ ಕಂಡಕ್ಟರ್ ಗೆ ‘ರೀ ಕಂಡಕ್ಟರಾ…ಇನ್ನು 7 ರೂಪಾಯಿ ಚಿಲ್ಲರೆ ಕೊಡಬೇಕು‌, ನೀವೇನ್ರಿ 2 (೭) ರೂಪಾಯಿ ಬರದೀರಿ..ಎಂದಾಗ, ಆ ಕಂಡಕ್ಟರ್ ‘ಅದು ಕನ್ನಡ ಅಂಕಿಯಾಗ 7 ರೂಪಾಯಿರೀ..ಭಯ ಪಡಬೇಡ್ರಿ..ಎಂದರು. ಪ್ರಯಾಣಿಕ ಎಂಥದೋ ಗಲಿಬಿಲಿಯಲ್ಲಿ ಒಟ್ಟು ಏಳು ರುಪಾಯಿ ಅಂದ್ರಲ್ಲ ಸಾಕು ಬಿಡು ಅಂದುಕೊಂಡು ಸುಮ್ಮನಾದರೂ.

 

 

ಹೊಸಪೇಟೆ ಡಿಪೋದ ಕಂಡಕ್ಟರ್…ಸಿದ್ದಪ್ಪ ಬಸ್ ನಲ್ಲಿ ದಾರಿ ಪತ್ರ (ವೇ ಬಿಲ್) ದಲ್ಲಿ ಕನ್ನಡ ಸಂಖ್ಯೆಗಳನ್ನು ಬಳಸಿ ಬರೆಯುತ್ತಾರೆ. ಚಿಲ್ಲರೆ ಕೊಡುವಾಗ ಟಿಕೆಟ್ ಹಿಂದೆ ಕನ್ನಡ ಸಂಖ್ಯೆಯಲ್ಲಿಯೇ ಗೀಚುತ್ತಾರೆ. ಆಗ ಪ್ರಯಾಣಿಕರು ತಕ್ಷಣ ತಬ್ಬಿಬ್ಬಾಗಿ ಇದು ಎಷ್ಟು ರೀ ಹಿಂಗ್ ಬರದೀರಲ್ಲ ಎನ್ನುತ್ತಾರೆ ಆಗ ಸಿದ್ದಪ್ಪ ಇದು ಕನ್ನಡ ಅಂಕಿ ಸಾರ್ ಎಂದು ಪ್ರಯಾಣಿಕರಿಗೆ ವಿವರಿಸಿ ಪರಿಚಯಿಸುತ್ತಾರೆ. ತಕ್ಷಣ ಕನ್ನಡ ಅಂಕೆಗಳನ್ನು ಬಳಸುವ ಈ ಕಂಡಕ್ಟರ್ಕನ್ನಡಾಭಿಮಾನವನ್ನು ಮೆರೆದಿದ್ದಾರೆ.

 

ಚೆಕಿಂಗ್ ಬಂದಾಗಲೂ ಕೆಲವು ಆಫಿಸರ್ ಗಳು ಇದೇನ್ರಿ ಹಿಂಗ್ ಬರದೀರಿ ಅರ್ಥ ಆಗಲ್ಲ ಎಂದಾಗ ಅವರಿಗೂ ಕೂಡ ಇದು ಕನ್ನಡ ಸಂಖ್ಯೆ ಸಾರ್ ಎಂದು ಸಮಜಾಯಿಸಿ ಕೊಡುತ್ತಾರೆ. ಡಿಪೋ ಮೆನೇಜರ್ ಒಬ್ಬರು ಹೀಗೆ ಅರ್ಥ ಆಗದ ರೀತಿಯಲ್ಲಿ ಕನ್ನಡ ಕನ್ನಡ ಬರಿಯೋಹಾಗಿದ್ರೆ ಕೆಲಸ ಬಿಟ್ಟು ಹೋಗ್ರಿ ಎಂದದ್ದೂ ಇದೆಯಂತೆ.ಆದರೂ ತನ್ನ ಕನ್ನಡ ಅಭಿಮಾನವನ್ನ ಹೀಗೆ ಕನ್ನಡ ಸಂಖ್ಯೆಯನ್ನು ಬಳಸುವ ಮೂಲಕ ಪ್ರಯಾಣಿಕರಿಗೂ, ಸಾರಿಗೆ ಅಧಿಕಾರಿಗಳಿಗೂ ಕನ್ನಡ ಅಂಕೆಗಳ ಲಿಪಿ ಪರಿಚಯಿಸುವ ಪ್ರಯತ್ನ ಪಡುತ್ತಿದ್ದಾರೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top