fbpx
ಮನೋರಂಜನೆ

ಮತ್ತೆ ಹುಟ್ಟಿ ಬರಲಿದೆಯಾ ಉಪ್ಪಿಯ ಹಳೇ ಖದರ್?

ಮತ್ತೆ ಹುಟ್ಟಿ ಬರಲಿದೆಯಾ ಉಪ್ಪಿಯ ಹಳೇ ಖದರ್..?

 

 

ಇದೀಗ ರಾಜಕೀಯ ಎಂಟ್ರಿಯ ಸಂಬಂಧವಾಗಿ ಬ್ಯುಸಿಯಾಗಿರೋ ಉಪೇಂದ್ರರ ಚಿತ್ರಜೀವನದ ಹಳೇ ಖದರ್ ಮತ್ತೆ ಮರುಕಳಿಸಲಿದೆಯಾ? ಇಂಥಾದ್ದೊಂದು ಪ್ರಶ್ನೆ, ನಿರೀಕ್ಷೆ ಹುಟ್ಟು ಹಾಕಿರೋ ಉಪೇಂದ್ರ ಮತ್ತೆ ಬಾ ಚಿತ್ರ ಈ ವಾರ ತೆರೆಕಾಣುತ್ತಿದೆ.

 

 

ಉಪೇಂದ್ರ ಎಂಬ ಚಿತ್ರದ ಮೂಲಕವೇ ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿಕೊಂಡಿದ್ದವರು ಉಪ್ಪಿ. ಕೊಂಚ ಅತಿರೇಕ ಅನ್ನಿಸೋವಂಥಾ ವಿಕ್ಷಿಪ್ತ ಹಾದಿಯ ಮೂಲಕ ನಮ್ಮ ನಡುವಿನ ಅಸಲೀಯತ್ತನ್ನು ಜಾಹೀರು ಮಾಡೋ ಉಪ್ಪಿ ಸ್ಟೈಲ್‌ಗೆ ಎಲ್ಲರೂ ಫಿದಾ ಆಗಿದ್ದದ್ದು ಸುಳ್ಳಲ್ಲ. ಇದೀಗ ಉಪೇಂದ್ರ ಮತ್ತೆ ಹುಟ್ಟಿ ಬಾ ಚಿತ್ರವೂ ಅಂಥಾದ್ದೇ ಕ್ರೇಜ್ ಸೃಷ್ಟಿಸೋ ಸ್ಪಷ್ಟ ಸೂಚನೆಗಳಿದ್ದಾವೆ.

 

 

ಈ ಚಿತ್ರದ ಟ್ರೈಲರ್ ಮತ್ತು ಹಾಡುಗಳು ಈಗಾಗಲೇ ಪ್ರಸಿದ್ಧಿ ಪಡೆದಿವೆ. ಡೈಲಾಗ್‌ಗಳಂತೂ ಉಪ್ಪಿ ಅಭಿಮಾನಿಗಳನ್ನು ಹುಚ್ಚೆಬ್ಬಿಸಿವೆ. ದಶಕಗಳ ನಂತರ ಪ್ರೇಮಾ ಉಪೇಂದ್ರ ಅವರಿಗೆ ಈ ಚಿತ್ರದಲ್ಲಿ ಜೋಡಿಯಾಗಿ ನಟಿಸಿದ್ದಾರೆ. ಈ ಹಿಂದೆಯೇ ಉಪ್ಪಿ ಈ ಚಿತ್ರ ಎಲ್ಲರನ್ನೂ ಸೆಳೆದುಕೊಳ್ಳೋದು ಗ್ಯಾರೆಂಟಿ ಎಂಬಂಥಾ ಮಾತುಗಳನ್ನಾಡಿದ್ದರು. ಅದು ನಿಜವಾಗೋ ಎಲ್ಲ ಲಕ್ಷಣಗಳೂ ಎದ್ದುಕಾಣುತ್ತಿವೆ.

 

 

ಎನ್. ಅರುಣ್ ಲೋಕನಾಥ್ ನಿರ್ದೇಶನದಲ್ಲಿ ಮೂಡಿಬಂದಿರುವ ಸಾಯಿಕುಮಾರ್, ಸಾಧು ಕೋಕಿಲಾ, ಟೆನ್ನಿಸ್ ಕೃಷ್ಣ ಮುಂತಾದವರ ಅದ್ದೂರಿ ತಾರಾಗಣ ಹೊಂದಿರೋ ಈ ಚಿತ್ರಕ್ಕಾಗಿ ಪ್ರೇಕ್ಷಕರು ಕುತೂಹಲದಿಂದ ಕಾದಿರೋದಂತೂ ನಿಜ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top