fbpx
ಮನೋರಂಜನೆ

ಯೂಟ್ಯೂಬ್ ನಲ್ಲಿ ಧೂಳೆಬ್ಬಿಸಿದ ‘ಅಂಜನಿಪುತ್ರ’

ಯೂಟ್ಯೂಬ್ ನಲ್ಲಿ ಧೂಳೆಬ್ಬಿಸಿದ ‘ಅಂಜನಿಪುತ್ರ.’

 

 

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯದ ಬಹುನಿರೀಕ್ಷಿತ ‘ಅಂಜನಿಪುತ್ರ’ ಚಿತ್ರದ ಆಡಿಯೋ ಮತ್ತು ಟ್ರೈಲರ್ ಬಿಡುಗಡೆಗೊಂಡಿದ್ದು ಸೋಷಿಯಲ್ ಮೀಡಿಯಾಗಳಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ. ವಿಶೇಷ ಏನೆಂದರೆ ಪುನೀತ್‌ ಅವರೇ ಹುಟ್ಟುಹಾಕಿರುವ ಪಿಆರ್‌ಕೆ ಆಡಿಯೋ ಬ್ಯಾನರ್‌ನಡಿಯಲ್ಲಿ ಹಾಡುಗಳು ಬಿಡುಗಡೆಯಾಗಿವೆ.

 

 

ನಗರದ ಸೆಂಟ್ರಲ್ ಕಾಲೇಜ್ ಜ್ಞಾನ ಜ್ಯೋತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಆಡಿಯೋ ಮತ್ತು ಚಿತ್ರದ ಟ್ರೈಲರ್ ಬಿಡುಗಡೆ ಮಾಡಿದ್ದಾರೆ.. ಟ್ರೈಲರ್ ನಲ್ಲಿ ಚಿತ್ರ ರಿಚ್ ಆಗಿ ಮೂಡಿಬಂದಿದ್ದು “ಜನಾ ಹರಸಿದ್ರೆ ಬೆಳವಣಿಗೆ, ಜನಾ ಮೆರೆಸಿದ್ರೆ ಮೆರವಣಿಗೆ” ಎಂಬ ಡೈಲಾಗ್ ವೈರಲ್ ಆಗುತ್ತಿದೆ. ಅಂಜನಿಪುತ್ರ ಟ್ರೈಲರ್ ಗೆ ಅಭೂತ ಪೂರ್ವ ಪ್ರತಿಕ್ರಿಯೆ ದೊರೆತಿದ್ದು ಬಿಡುಗಡೆಯಾದ ಒಂದು ದಿಂದ ಆಗುವುದರ ಮೊದಲೇ ಮೂರುವರೆ ಲಕ್ಷ ಹಿಟ್ಸ್ ದೊರೆತಿದೆ.


 

ಅಂಜನಿಪುತ್ರ ಚಿತ್ರದಲ್ಲಿ ಪುನೀತ್ ಗೆ ನಾಯಕಿಯಾಗಿ ಇದೇ ಮೊದಲ ಬಾರಿಗೆ ಕಿರಿಕ್ ಹುಡುಗಿ “ರಶ್ಮಿಕಾ ಮಂದಣ್ಣ” ಅಭಿನಯಿಸುತ್ತಿದ್ದಾರೆ.. ಅಲ್ಲದೆ ವಿಶೇಷ ಪಾತ್ರದಲ್ಲಿ ರಮ್ಯಾ ಕೃಷ್ಣಾ ಕೂಡ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಸಾಧು ಕೋಕಿಲ, ಚಿಕ್ಕಣ್ಣ, ಮುಕೇಶ್‌ ರಿಷಿ, ರವಿಶಂಕರ್‌ ಸೇರಿದಂತೆ ಹಲವರು ಅಂಜನಿಪುತ್ರ ಚಿತ್ರದಲ್ಲಿ ನಟಿಸಿದ್ದಾರೆ.. ನಟಿ ಹರಿಪ್ರಿಯಾ ರವರು ಕೂಡ ಪುನೀತ್ ಜೊತೆ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದಾರೆ..


 

ಭಜರಂಗಿ ಖ್ಯಾತಿಯ ಎ.ಹರ್ಷ ಈ ಚಿತ್ರವನ್ನ ನಿರ್ದೇಶನ ಮಾಡುತ್ತಿದ್ದು, ಎಂ.ಎನ್ ಕುಮಾರ್ ನಿರ್ಮಾಣ ಮಾಡುತ್ತಿದ್ದಾರೆ…ಚಿತ್ರಕ್ಕೆ ರವಿ ಬಸ್ರೂರು ಅವರ ಸಂಗೀತ ನಿರ್ದೇಶನ ಮತ್ತು ಸ್ವಾಮಿ ಅವರ ಛಾಯಾಗ್ರಹಣವಿದೆ.ಇದು ತಮಿಳಿನ ತಮಿಳಿನ “ಪೂಜೈ’ ಚಿತ್ರದ ರೀಮೇಕ್‌ ಆಗಿದ್ದು, ಕನ್ನಡದ ನೇಟಿವಿಟಿಗೆ ತಕ್ಕಂತೆ ಬದಲಾವಣೆ ಮಾಡಿಕೊಳ್ಳಲಾಗಿದೆ ಎಂದು ಚಿತ್ರತಂಡ ಹೇಳುತ್ತದೆ.

 

 

ಅಪ್ಪು ಅಭಿಮಾನಿಗಳು ಚಿತ್ರವನ್ನು ನೋಡಲು ಕಾತರದಿಂದ ಕಾದುಕುಳಿತಿದ್ದಾರೆ.ಚಿತ್ರವನ್ನು ಡಿಸೇಂಬರ್ ತಿಂಗಳಲ್ಲಿ ತೆರೆಗೆ ತರುವ ತಯಾರಿಯಲ್ಲಿದೆ ಚಿತ್ರತಂಡ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top