fbpx
ಕಿರುತೆರೆ

ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮದಲ್ಲಿ ತೀರ್ಪುರಾಗಿದ್ದ ಲಕ್ಷ್ಮಿ ಮತ್ತು ವಿಜಯ ರಾಘವೇಂದ್ರ ಕಡೆಯಿಂದ ಸರ್ಪ್ರೈಸ್.

ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮದಲ್ಲಿ ತೀರ್ಪುರಾಗಿದ್ದ ಲಕ್ಷ್ಮಿ ಮತ್ತು ವಿಜಯ ರಾಘವೇಂದ್ರ ಕಡೆಯಿಂದ ಸರ್ಪ್ರೈಸ್.

 

 

ಕನ್ನಡದ ಜನಪ್ರಿಯ ಕಾರ್ಯಕ್ರಮದಲ್ಲೊಂದು ಡ್ರಾಮಾ ಜೂನಿಯರ್ಸ್..ಕಾರ್ಯಕ್ರಮದಲ್ಲಿ ಇಷ್ಟು ದಿನ ಮಕ್ಕಳ ಪರ್ಫಾರ್ಮೆನ್ಸ್ ಗಳನ್ನೂ ನೋಡಿ ಅಂಕಗಳನ್ನು ನೀಡುತ್ತಿದ್ದ ಜಡ್ಜ್ ಗಳಾಗಿ ಕಾರ್ಯನಿರ್ವಹಿಸುತ್ತಿದ್ದ ಲಕ್ಷ್ಮಿ ಮತ್ತು ವಿಜಯ ರಾಘವೇಂದ್ರ ಈಗ ತಮ್ಮ ತಮ್ಮ ಕೆಲಸವನ್ನು ಬದಲಾಯಿಸಿಕೊಂಡಿದ್ದಾರೆ.

 

 

ಹೌದು ಲಕ್ಷ್ಮಿ ಮತ್ತು ವಿಜಯ ರಾಘವೇಂದ್ರ ವೇದಿಕೆಯ ಮೇಲೆ ಮಕ್ಕಳ ಜೊತೆ ಪ್ರದರ್ಶನ ನೀಡುತ್ತಿದ್ದಾರೆ. ಹಿರಿಯ ನಟಿ ಲಕ್ಷ್ಮಿರವರು ಕುಟುಂಬದ ಸಾಮಾಜಿಕ ಸಂದೇಶವನ್ನು ಸಾರುವ ಅಜ್ಜಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಚಿಕ್ಕ ಹುಡುಗಿಯ ಜೊತೆ ಜೊತೆಯಲ್ಲೇ ಅಭಿನಯಿಸಿದ್ದಾರೆ.

 

 

ಡಾ,ರಾಜಕುಮಾರ್ ಅವರು ಮಾಡಬೇಕು ಎಂದು ಆಸೆ ಇಟ್ಟುಕೊಂಡಿದ್ದ ಭಕ್ತ ಅಂಬರೀಷ ಪಾತ್ರವನ್ನು ವಿಜಯರಾಘವೇಂದ್ರ ಅವರು ಮಾಡುತ್ತಿದ್ದು ‘ಭಕ್ತ ಅಂಬರೀಷ’ನಾಗಿ ಅದ್ಭುತವಾಗಿ ನಟಿಸಿದ್ದಾರೆ. ಇನ್ನು ಈ ಎರಡು ಸಂಚಿಯ ಪ್ರೊಮೊ ಗಳು ಫೇಸ್ಬುಕ್ ನಲ್ಲಿ ವೈರಲ್ ಆಗಿದ್ದು ಇಂದು ಮತ್ತು ನಾಳೆ ರಾತ್ರಿ 9 ಗಂಟೆಗೆ ಪ್ರಸಾರವಾಗಲಿದೆ.

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top