fbpx
ಮನೋರಂಜನೆ

‘ಹೆಬ್ಬುಲಿ’ ನಾಯಕಿ ಅಮಲಾ ಪೌಲ್ ವಿರುದ್ಧ FIR ದಾಖಲಿಸಿದ ಪೊಲೀಸರು.

‘ಹೆಬ್ಬುಲಿ’ ನಾಯಕಿ ಅಮಲಾ ಪೌಲ್ ವಿರುದ್ಧ FIR ದಾಖಲಿಸಿದ ಪೊಲೀಸರು.

 

 

ಇದೇ ವರ್ಷ ತೆರೆಕಂಡು ಬಾಕ್ಸ್ ಆಫೀಸ್ ಚಿಂದಿ ಉಡಾಯಿಸಿದ್ದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ‘ಹೆಬ್ಬುಲಿ’ ಚಿತ್ರದ ಹೀರೋಯಿನ್ ಅಮಲಾ ಪೌಲ್ ವಿರುದ್ಧ ಪೊಲೀಸರು ಎಫ್.ಐ.ಆರ್ ದಾಖಲಿಸಿಕೊಂಡಿದ್ದಾರೆ. ಅಮಲಾ ಪೌಲ್ ಜೊತೆ ನಟ ಫಹಾದ ಫಾಸಿಲ್ ವಿರುದ್ಧವೂ ಕೂಡ ಎಫ್‍ಐಆರ್ ದಾಖಲಾಗಿದೆ..ಕೇರಳದಲ್ಲಿ ತೆರಿಗೆ ತಪ್ಪಿಸಲು ತಮ್ಮ ವಾಹನಗಳಿಗೆ ಪುದುಚೆರಿಯಲ್ಲಿ ನೋಂದಣಿ ಮಾಡಿಸಿರುವ ಆರೋಪದ ಹಿನ್ನೆಲೆಯಲ್ಲಿ FIR ದಾಖಲಾಗಿದೆ..

 

 

ಈ ಇಬರು ಕೇರಳದ ನಿವಾಸಿಗಳಾಗಿದ್ದು ತೆರಿಗೆ ತಪ್ಪಿಸುವ ಸಲುವಾಗಿ ಪುದುಚೇರಿಯಲ್ಲಿ ನಕಲಿ ದಾಖಲೆಗಳನ್ನು ನೀಡುವ ಮೂಲಕ ಕಾರು ಖರೀದಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.ಕೇರಳದಲ್ಲಿ 20 ಲಕ್ಷ ರೂಪಾಯಿಗಿಂತ ಜಾಸ್ತಿ ಬೆಳೆಯ ಕಾರುಗಳಿಗೆ ಶೇ.20 ರಷ್ಟು ತೆರಿಗೆಯನ್ನು ವಿಧಿಸಲಾಗುತ್ತದೆ. ಈ ತೆರಿಗೆಯಿಂದ ತಪ್ಪಿಸಿಕೊಳ್ಳಲು ಪುದುಚೇರಿಯಲ್ಲಿ ಕಾರು ಖರೀದಿಸಿದ್ದಾರೆ. ಪುದುಚೇರಿಯಲ್ಲಿ ವಾಹನ ನೋಂದಣಿಗಾಗಿ ವೈಯಕ್ತಿಕ ದಾಖಲೆಗಳನ್ನು ನಕಲು ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

 

 

“ನನ್ನ ವಿರುದ್ಧ ಮಾಡುತ್ತಿರುವ ಆರೋಪ ಸುಳ್ಳು, ನಾನು ಎಲ್ಲಾ ತೆರೆಗಿಗಳನ್ನು ಪಾವತಿಸಿದ್ದೇನೆ. ನನ್ನ ಎಲ್ಲಾ ಖರೀದಿಗಳು ಕಾನೂನಿನ ಚೌಕಟ್ಟಿನ ಒಳಗೆ ನಡೆದಿದೆ ನಾನು ಒಬ್ಬ ಭಾರತದ ಪ್ರಜೆಯಾಗಿದ್ದು, ದೇಶದ ಯಾವುದೇ ಭಾಗದಲ್ಲಿ ನನಗಿಷ್ಟವಾದ ವಸ್ತುಗಳನ್ನು ಖರೀದಿಸುವ ಹಕ್ಕು ನನಗಿದೆ ಎಂದು ನಂಬಿದ್ದೇನೆ” ಎಂದು ಅಮಲಾ ಪೌಲ್ ಸ್ಪಷ್ಟನೆ ನೀಡಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top