fbpx
ಕಿರುತೆರೆ

ಬಿಗ್’ಬಾಸ್ ಸ್ಪರ್ಧಿಗಳನ್ನು “ನವೆಂಬರ್ ಫೂಲ್” ಮಾಡಿದ ಕಿಚ್ಚ..!

ಬಿಗ್’ಬಾಸ್ ಸ್ಪರ್ಧಿಗಳನ್ನು “ನವೆಂಬರ್ ಫೂಲ್” ಮಾಡಿದ ಕಿಚ್ಚ..!

 

 

ಬಿಗ್ ಬಾಸ್-5 ಪ್ರಾರಂಭವಾಗಿ ಆರು ವಾರಗಳು ಕಳೆದಿದ್ದು ಐದು ಜನ ಸ್ಪರ್ಧಿಗಳು ಸ್ಪರ್ಧೆಯಿಂದ ಎಲಿಮಿನೇಟ್ ಆಗಿದ್ದರೆ. ಆದರೆ ಎಲ್ಲರಿಗೂ ತಿಳಿದಿರುವಂತೆ ಆರನೇವಾರ ಬಿಗ್ ಬಾಸ್ ಮನೆಯಿಂದ ಯಾರೂ ಕೂಡ ಎಲಿಮಿನೇಟ್ ಆಗುವುದಿಲ್ಲ. ಈ ವಾರ ಎಲಿಮಿನೇಷನ್ ಇಲ್ಲದಿರುವುದಿಲ್ಲ ಎಂದು ಈಗಾಗಲೇ ಕಾರ್ಯಕ್ರಮದ ಸಂಚಿಕೆಗಳಲ್ಲೇ ತಿಳಿಸಿದ್ದು ಯಾವುದೇ ವೋಟಿಂಗ್ ಲೈನ್ ಗಳು ತೆರೆದಿರುವುದಿಲ್ಲ ಎಂದು ಒಂದು ವಾರದಿಂದ ಸಂಚಿಕೆಯಲ್ಲಿ ಸ್ಪಷ್ಟಪಡಿಸಲಾಗಿದೆ.

 

 

ಆದರೆ ತಾವು ನಾಮಿನೇಟ್ ಆಗಿದ್ದೇವೆ ಎಂದು ತಿಳಿದುಕೊಂಡಿದ್ದ ಸ್ಪರ್ಧಿಗಳಿಗೆ ಸುದೀಪ್ ಶಾಕ್ ನೀಡಿದರು. ಎಂದಿನಂತೆ ಸುದೀಪ್ ಎಲಿಮಿನೇಶನ್‌ ಪ್ರಕ್ರಿಯೆ ಪ್ರಾರಂಭಿಸಿದ್ರು. ಚಂದನ್‌ ಶೆಟ್ಟಿ, ಶೃತಿ, ರಿಯಾಜ್‌, ಸಮೀರ್ ಆಚಾರ್ಯ, ಜಯ ಶ್ರೀನಿವಾಸನ್, ಅನುಪಮಾ ಹಾಗೂ ಜಗನ್ನಾಥ್‌ ಹಾಗೂ ಸಿಹಿ-ಕಹಿ ಚಂದ್ರು ಸೇರಿ ಒಟ್ಟು ಎಂಟು ಜನ ಈ ವಾರ ನಾಮಿನೇಟ್ ಮಾಡಲಾಗಿತ್ತು.

 

 

ಮಾತುಕತೆ ಆರಂಭಿಸಿದ ಪ್ರಾರಂಭದಲ್ಲೇ ಸ್ಪರ್ಧಿಗಳಿಗೆ ಶಾಕ್ ನೀಡಿದ ಸುದೀಪ್ “ಈ ವಾರ ಒಬ್ಬರು ಮಾತ್ರವಲ್ಲ ಇಬ್ಬರು ಎಲಿಮಿನೇಟ್ ಆಗ್ತಿದ್ದಾರೆ ಎಂದು ಸೂಚಿಸಿದ್ರು. ಯಾರಿಗೆ ಕಡಿಮೆ ವೋಟು ಬಿದ್ದಿರುತ್ತೋ ಅವರು ಮನೆಯಿಂದ ಹೊರ ಹೋಗಬೇಕು ಅವರ ಜೊತೆ ನಾಮಿನೇಟ್‌ ಆದವರ ಪೈಕಿ ಮತ್ತೊಬ್ಬ ಸದಸ್ಯರನ್ನು ಮನೆಯಿಂದ ಕರೆದುಕೊಂಡು ಹೋಗಬೇಕು ಎಂದು ಸುದೀಪ್ ಹೇಳಿದ್ದರು.

 

 

ಅದರಂತೆ ರಿಯಾಜ್‌ ಅವರನ್ನು ಎಲಿಮಿನೇಟ್ ಮಾಡಿದ ಸುದೀಪ್, ರಿಯಾಜ್ ಅವರಿಗೆ ಯಾರನ್ನ ನಿಮ್ಮ ಜೊತೆ ಕರೆದುಕೊಂಡು ಬರುತ್ತೀರಾ ಎಂದು ಕೇಳಿದಾಗ ರಿಯಾಜ್ ಅನುಪಮಾ ಅವರನ್ನು ತಮ್ಮ ಜತೆ ಕರೆದುಕೊಂಡು ಹೋಗಲು ಮುಂದಾದ್ರು. ಎಂದಿನಂತೆ ಎಲಿಮಿನೇಟ್ ಆದ ಸದಸ್ಯರನ್ನು ಬೀಳ್ಕೊಡಲು ಎಲ್ಲರು ಬಿಗ್‌ಬಾಸ್‌ ಮನೆಯ ಮೇನ್ ಡೋರ್ ಬಳಿಗೆ ಆಗಮಿಸಿದಾಗ ಸರ್ಪ್ರೈಸ್ ನೀಡಿದ ಬಿಗ್ ಬಾಸ್ ಕಳೆದ ವಾರ ಮನೆಯಿಂದ ಹೊರಹೋಗಿದ್ದ ಕೃಷಿಯವರು ಮತ್ತೆ ಮನೆಗೆ ವಾಪಸ್ ಬಂದರು.

 

 

ಇದಾದ ಬಳಿಕ ಮತ್ತೆ ಲಿವಿಂಗ್ ಏರಿಯಾಗೆ ಕರೆದ ಸುದೀಪ್‌, ಎಲಿಮಿನೇಟ್‌ ಆಗಿರುವ ರಿಯಾಜ್ ಹಾಗೂ ಅನುಪಮಾ ಸೇಫ್‌ ಆಗಿದ್ದಾರೆ ಎಂದು ತಿಳಿಸಿ ಈ ವಾರ ‘ನೋ ಎಲಿಮಿನೇಶೇನ್ ‘ ಈ ವಾರ ಯಾರು ಕೂಡ ಎಲಿಮಿನೇಟ್‌ ಆಗಿಲ್ಲ. ನೀವು ನವೆಂಬರ್ ಫೂಲ್ ಆಗಿದ್ದೀರಿ ಎಂದು ಸದಸ್ಯರೆಲ್ಲರನ್ನು ಫೂಲ್ ಮಾಡಿದರು.

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top