fbpx
ಮನೋರಂಜನೆ

ಅಂತು ಇಂತು ನಿಶ್ಚಿತಾರ್ಥ ಮಾಡಿಕೊಂಡು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ‘ರಾಜಕುಮಾರ’ ಚಿತ್ರದ ನಿರ್ದೇಶಕ ಸಂತೋಷ್..!

ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ‘ರಾಜಕುಮಾರ’ ಚಿತ್ರದ ನಿರ್ದೇಶಕ ಸಂತೋಷ್..!

 

 

ಇತ್ತೀಚಿಗೆ ಬಹಳ ಮದುವೆ ಕಾರ್ಯಕ್ರಮಗಳು ಕನ್ನಡ ಚಿತ್ರರಂಗದಲ್ಲಿ ನಡೆಯುತ್ತಿವೆ. ರಕ್ಷಿತ್- ರಶ್ಮಿಕಾ, ಚಿರು -ಮೇಘನಾ ಸೇರಿದಂತೆ ಕೆಲವು ಸ್ಟಾರ್ ಜೋಡಿಗಳು ಮದುವೆಯ ನಿಶ್ಚಿತಾರ್ಥವನ್ನು ಮಾಡಿಕೊಳ್ಳಲಿರುವ ವಿಷಯ ನಿಮಗೆಲ್ಲರಿಗೂ ಗೊತ್ತೇ ಇದೆ ಈಗ ಆ ಸಾಲಿಗೆ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಿರ್ದೇಶಕರೊಬ್ಬರು ಸೇರಿಕೊಳ್ಳುತ್ತಿದ್ದಾರೆ.. ಮುಂದೆ ಓದಿ

 

 

ಹೌದು ಮಿಸ್ಟರ್ ಅಂಡ್ ಮಿಸೆಸ್ ರಾಮಾಚಾರಿ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಪ್ರವೇಶಿಸಿದ ಸಂತೋಷ್ ಆನಂದರಾಮ್  ನವೆಂಬರ್ 26ರಂದು ತಮ್ಮ ಫ್ಯಾಮಿಲಿಗೆ ಕ್ಲೋಸ್ ಆಗಿರುವ ಶ್ರೀನಿವಾಸ್ ಹತ್ವಾರ್ ಎಂಬುವವರ ಮಗಳಾದ ಸುರಭಿ ಹತ್ವಾರ್ ಜೊತೆ ಮದುವೆ ಮಾಡಿಕೊಳ್ಳಲಿದ್ದಾರೆ , ಮದುವೆಯಾಗುತ್ತಿರುವ ವಿಷಯವನ್ನು ಸ್ವತಃ ಅವರೇ ತಮ್ಮ ಟ್ವಿಟರ್ ಅಕೌಂಟ್ ನಲ್ಲಿ ತಿಳಿಸಿದ್ದರು .

 

ನಿಶ್ಚಿತಾರ್ಥ ವಿಡಿಯೋ ನೋಡಿ

 

 

 

 

ಬಿ.ಇ ಮಾಡಿ ನಂತರ ಎಂ.ಟೆಕ್ ಪದವಿ ಪಡೆದಿರುವ ಸುರಭಿ, ಶ್ರೀನಿವಾಸ್ ಹತ್ವಾರ್ ಮತ್ತು ಭಾವನಾ ಹತ್ವಾರ್ ದಂಪತಿಯ ಏಕೈಕ ಪುತ್ರಿ.. ಸದ್ಯ ಬೆಂಗಳೂರಿನಲ್ಲಿ ವಾಸವಿರುವ ಬಳ್ಳಾರಿ ಮೂಲದ ಸುರಭಿ ಹತ್ವಾರ್ ಎಂಬುವವರನ್ನು ಸಂತೋಷ್ ಆನಂದರಾಮ್ ಕೈಯಿಡಿಯಲಿದ್ದಾರೆ. ಈಗಾಗಲೇ ಗುರು ಹಿರಿಯರು ನಿಶ್ಚಯ ಮಾಡಿರುವಂತೆ 26ರ ಭಾನುವಾರ ಸಂಜೆ ಸಾಂಪ್ರದಾಯಕವಾಗಿ ನಿಶ್ಚಿತಾರ್ಥ ನಡೆಡಿದ್ದು  . ನಿಶ್ಚಿತಾರ್ಥಕ್ಕೆ ಎರಡು ಕುಟುಂಬದ ಆಪ್ತರು ಮತ್ತು ಚಿತ್ರರಂಗದ ಕೆಲವು ಗಣ್ಯರು ಆಗಮಿಸಿದ್ದರು.

 

 

 

ಸುರಭಿ ಮತ್ತು ಸಂತೋಷ್ ಅವರ ಮದುವೆ ಮುಂದಿನ ವರ್ಷ ಪ್ರಾರಂಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಫೆಬ್ರವರಿ 20 ಹಾಗೂ 21 ರಂದು ಬೆಂಗಳೂರಿನಲ್ಲಿ ಮದುವೆ ಸಮಾರಂಭದಲ್ಲಿ ಸಪ್ತಪದಿ ತುಳಿಯಲಿದ್ದಾರೆ.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top