fbpx
ಮನೋರಂಜನೆ

ಆರೆಸೆಸ್ ಹಾಗು ಸಂಘ ಪರಿವಾರ ನನ್ನನ್ನು ಟಾರ್ಗೆಟ್ ಮಾಡಿದೆ – ಆ ದಿನಗಳು ಚೇತನ್

ಆ ದಿನಗಳು ಚೇತನ್ ‘ಅತಿರಥ’ ಚಿತ್ರದ ವಿರುದ್ಧ ಸಿಡಿದೆದ್ದ ಹಿಂದೂ ಪರ ಸಂಘಟನೆಗಳು

 

 

ಆ ದಿನಗಳು ಖ್ಯಾತಿಯ ಚೇತನ್ ಒಂದಷ್ಟು ಗ್ಯಾಪ್‌ನ ನಂತರ ನಟಿಸಿರೋ ಅತಿರಥ ಚಿತ್ರ ತೆರೆ ಕಂಡಿದೆ. ಮಹೇಶ್ ಬಾಬು ಭಾರೀ ಪ್ರಚಾರದ ಒಡ್ಡೋಲಗದಲ್ಲಿ ಈ ಚಿತ್ರವನ್ನು ನಿರ್ದೇಶನ ಮಾಡಿ, ಸಮಾಜವನ್ನು ಕಾಡುತ್ತಿರೋ ಜ್ವಲಂತ ಸಮಸ್ಯೆಯೊಂದರ ಕಥಾ ಎಳೆ ಎತ್ತಿಕೊಂಡಿರೋದಾಗಿ ಕುತೂಹಲ ಹುಟ್ಟಿಸಿದ್ದ ಈ ಚಿತ್ರ.

 

 

ಒಂದು ರೀಮೇಕ್ ಚಿತ್ರ ಎಂಬುದನ್ನು ಮರೆಸುವಂತೆ ಬೇರೆ ಬೇರೆ ವಿಚಾರಗಳತ್ತ ಫೋಕಸ್ ಮಾಡಲಾಗಿತ್ತು.

ಇದೀಗ ನವೆಂಬರ್ ೨೪ ನೇ ತಾರೀಖು ರಾಜ್ಯಾದ್ಯಂತ ರಿಲೀಸ್ ಆಗಿದೆ , ಹಲವಾರು ಹಿಂದೂ ಪರ ಸಂಘಟನೆಯ ಫೇಸ್ ಬುಕ್ ಪುಟಗಳು ಚೇತನ್ ಎಡ ಪಂತೀಯ ಹಿಂದೂ ವಿರೋಧಿ ಅವನ ಚಿತ್ರಗಳನ್ನು ನೋಡಬೇಡಿ ಎಂದು ಕರೆ ಕೊಟ್ಟಿವೆ ಈ ಹಿನ್ನಲೆಯಲ್ಲಿ ಈ ಚಿತ್ರಕ್ಕೆ ವ್ಯಾಪಕ ವ್ಯಕ್ತವಾಗಿದೆ .

 

 

ಚಾಮರಾಜನಗರದ ‘ಪ್ಯಾರಡೈಸ್’ ಸಿನಿಮಾಮಂದಿರದಲ್ಲಿ ಚಿತ್ರವನ್ನ ಪ್ರಸಾರವಾಗಲು ಬಿಟ್ಟಿಲ್ಲ , ಇದಕ್ಕೆ ಸ್ಪಂದಿಸಿದ ನಿರ್ದೇಶಕ ಮಹೇಶ್ ‘ಇದು ಕೇವಲ ಚೇತನ್ ಚಿತ್ರವಲ್ಲ ಸಾವಿರಾರು ಕಲಾವಿದರು ತೆರೆಯ ಹಿಂದೆ ಹಾಗು ಮುಂದೆ ಕೆಲಸ ಮಾಡಿದ್ದಾರೆ , ಚೇತನ್ ಯಾವುದಾದರೂ ಧರ್ಮ ವಿರೋಧಿಯಾಗಿದ್ದರೆ ಇಲ್ಲಿಗೆ ಬಂದು ಸಾಮಾಜಿಕ ಕಳಕಳಿ ಇರುವ ಕೆಲಸಗಳನ್ನು ಮಾಡುತ್ತಿರಲಿಲ್ಲ’ ಎಂದಿದ್ದಾರೆ .

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top