ಸಮಾಚಾರ

ಜೆಡಿಎಸ್ ಮಾಜಿ ಶಾಸಕ ಶಿವರಾಮೇಗೌಡರ ಮಗಳ ಮದುವೆಗೆ ಮಂಡ್ಯದಿಂದ ಬರ್ತಿವೆ ಬರೋಬ್ಬರಿ 308 ಕೆ.ಎಸ್.ಆರ್.ಟಿ.ಸಿ. ಬಸ್’ಗಳು.

👇 ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ 👍 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಜೆಡಿಎಸ್ ಮಾಜಿ ಶಾಸಕ ಶಿವರಾಮೇಗೌಡರ ಮಗಳ ಮದುವೆಗೆ ಮಂಡ್ಯದಿಂದ ಬರ್ತಿವೆ ಬರೋಬ್ಬರಿ 308 ಕೆ.ಎಸ್.ಆರ್.ಟಿ.ಸಿ. ಬಸ್’ಗಳು.

 

 

ನಾಗಮಂಗಲ ಜೆಡಿಎಸ್ ಮಾಜಿ ಶಾಸಕ ಎಲ್.ಆರ್.ಶಿವರಾಮೇಗೌಡ ಅವರು ತಮ್ಮ ಮಗಳ ಮದುವೆಯನ್ನು ಅದ್ಧೂರಿಯಾಗಿ ಮಾಡುತ್ತಿದ್ದು ಆಹ್ವಾನ ಪತ್ರಿಕೆಯಲ್ಲೂ ವಿಶೇಷತೆಯಿರಲಿ ಎಂಬ ಕಾರಣಕ್ಕೆ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಮಾಡಿಸಿದ್ದ ಮಾದರಿಯಲ್ಲೇ ವಿಶೇಷ ವಿಡಿಯೋ ಆಮಂತ್ರಣ ಪತ್ರಿಕೆಯನ್ನು ರೆಡಿಮಾಡಿಸಿ ಸುದ್ದಿಮಾಡಿದ್ದರು.ಅವರ ಮಗಳ ಮದುವೆ ಇಂದು ನಡೆಯಲಿದೆ.

 

 

ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಮದುವೆಗೆ ಮಂಡ್ಯ ಜಿಲ್ಲೆ ನಾಗಮಂಗಲ ಕ್ಷೇತ್ರದ ಪ್ರತಿ ಬೂತ್​ಗೂ ಬಸ್​ ವ್ಯವಸ್ಥೆ ಕಲ್ಪಿಸಲಾಗಿದ್ದು ಹಳ್ಳಿಗಳಿಂದ ಮದುವೆಗೆ ಬರುವ ಆಗಮಿಸುವ ಜನರಿಗಾಗಿ ಬರೋಬ್ಬರಿ 308 ಕೆ.ಎಸ್.ಆರ್.ಟಿ.ಸಿ. ಬಸ್​ಗಳ ವ್ಯವಸ್ಥೆ ಮಾಡಿಸಲಾಗಿದೆ. ಮಂಡ್ಯ, ನಾಗಮಂಗಲ, ಮಳವಳ್ಳಿ, ಪಾಂಡವಪುರ, ಕೆ ಆರ್ ಪೇಟೆ, ಮದ್ದೂರು, ಚನ್ನರಾಯಪಟ್ಟಣ ಹಾಗೂ ತುರುವೆಕೆರೆ ಡಿಪೋಗಳ ಬಸ್ ಗಳು ಇಂದು ಬೆಳಗ್ಗೆಯಿಂದಲೇ ಬೆಂಗಳೂರಿನ ಕಡೆಗೆ ಹೊರಟಿವೆ.

 

 

ಏಕಕಾಲಕ್ಕೆ ಬೃಹತ್ ಪ್ರಮಾಣದಲ್ಲಿ ಬಸ್ ಗಳನ್ನ ಬುಕ್ ಮಾಡಿಕೊಂಡಿರುವುದರಿಂದ ಮಂಡ್ಯ ಗ್ರಾಮೀಣ ಭಾಗದಲ್ಲಿ ಸಂಚರಿಸುವ ಸ್ಥಳೀಯ ಪ್ರಯಾಣಿಕರಿಗೆ ತೊಂದರೆಯಾಗಲಿದೆ. ಸಾರಿಗೆ ಇಲಾಖೆ ಅಧಿಕಾರಿಗಳು ಲಾಭದ ಉದ್ದೇಶದಿಂದ ಸಾರ್ವಜನಿಕರ ಹಿತವನ್ನು ಮರೆತರಾ ಎಂಬ ಮಾತುಗಳು ಸಾರ್ವಜನಿಕರಲ್ಲಿ ಕೇಳಿ ಬರುತ್ತಿವೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ 👍 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top