ಮನೋರಂಜನೆ

ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ ಖ್ಯಾತ ನಿರ್ದೇಶಕ ಗೂಗ್ಲಿ ಪವನ್ ಒಡೆಯರ್ ಬಂಪರ್ ಆಗಿ ನಿಶ್ಚಿತಾರ್ಥ ಮಾಡ್ಕೊಂಬಿಟ್ರು

ಇತ್ತೀಚಿಗೆ ಬಹಳ ಮದುವೆ ಕಾರ್ಯಕ್ರಮಗಳು ಕನ್ನಡ ಚಿತ್ರರಂಗದಲ್ಲಿ ನಡೆಯುತ್ತಿವೆ. ರಕ್ಷಿತ್- ರಶ್ಮಿಕಾ, ಚಿರು -ಮೇಘನಾ ಸೇರಿದಂತೆ ಕೆಲವು ಸ್ಟಾರ್ ಜೋಡಿಗಳು ಮದುವೆಯ ನಿಶ್ಚಿತಾರ್ಥವನ್ನು ಮಾಡಿಕೊಳ್ಳಲಿರುವ ವಿಷಯ ನಿಮಗೆಲ್ಲರಿಗೂ ಗೊತ್ತೇ ಇದೆ ಈಗ ಆ ಸಾಲಿಗೆ ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಿರ್ದೇಶಕರೊಬ್ಬರು ಸೇರಿಕೊಳ್ಳುತ್ತಿದ್ದಾರೆ.. ಮುಂದೆ ಓದಿ

 

ಮೊನ್ನೆ ರಾಜಕುಮಾರ ಚಿತ್ರದ ನಿರ್ದೇಶಕ ಸಂತೋಷ್ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈಗ ಕನ್ನಡ ಚಿತ್ರರಂಗದ ಮತ್ತೊಬ್ಬ ಪ್ರತಿಭಾನ್ವಿತ ನಿರ್ದೇಶಕ ಸಾಂಸಾರಿಕ ಜೀವನಕ್ಕೆ ಕಾಲುಡುತ್ತಿದ್ದಾರೆ.

 

 

ಹೌದು ಗೋವಿಂದಾಯ ನಮಃ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಪ್ರವೇಶಿಸಿದ ಪವನ್ ಒಡೆಯರ್ ಅವರಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ. ಗುರು ಹಿರಿಯರು ಸೇರಿ ನಿರ್ಧಾರ ಮಾಡಿರುವಂತೆ ಇದೇ ಡಿಸೆಂಬರ್ 07ರಂದು ಅಪೇಕ್ಷ ಎಂಬುವವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

 

 

ಈ ಬಗ್ಗೆ ಸ್ವತಃ ಪವನ್ ಅವರೇ ತಮ್ಮ ಟ್ವಿಟರ್ ನಲ್ಲಿ  “ಹೌದು.. ಕೊನೆಗೂ ಆ ದಿನ ಬಂದೇ ಬಿಟ್ಟಿತು. ನನ್ನ ಮುಂದಿನ ಜೀವನದ ಹೆಜ್ಜೆಯ ಜೊತೆ ಹೆಜ್ಜೆ ಇಡಲು ಗುರು ಹಿರಿಯರು ನಿಶ್ಚಯಿಸಿರುವ,ಅಪೇಕ್ಷೆ ಪಟ್ಟಿರುವ ಅಪೇಕ್ಷಾಳ ಜೊತೆ ನನ್ನ ನಿಶ್ಚಿತಾರ್ಥ, ಇದೇ ಡಿಸೆಂಬರ್ ಏಳನೇ ತಾರೀಖು ನಿಮ್ಮೆಲ್ಲರ ಶುಭಾಶೀರ್ವಾದ ನಮ್ಮ ಮೇಲೆ ಇರಲಿ. ಧನ್ಯವಾದಗಳು” ಎಂದು ತಮ್ಮದೇ ವಿಭಿನ್ನ ಶೈಲಿಯಲ್ಲಿ ಪೋಸ್ಟ್ ಮಾಡಿದ್ದರು.

 

ನಿಶ್ಚಿತಾರ್ಥ ದ ಫೋಟೋಗಳು ನಿಮಗಾಗಿ

 

 

 

 

ಪವನ್ ಒಡೆಯರ್ ರನ್ನು ಕೈಹಿಡಿಯುತ್ತಿರುವ ಅಪೇಕ್ಷ ರವರು ನಟಿಯಾಗಿದ್ದು ಇತ್ತೀಚಿಗಿನ ಕಾಫಿತೋಟ ಚಿತ್ರದಲ್ಲಿ ನಟಿಸಿದ್ದರು. ಈ ಹಿಂದಿ ಉದಯ ಟಿವಿ ಮತ್ತು ಸುವರ್ಣ ವಾಹಿನಿಗಳಲ್ಲಿ ನಟಿಸಿದ್ದರು.

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top