ದೇವರು

ಮ೦ಗಳಕರವಾದ ಮಾಂಗಲ್ಯದಲ್ಲಿ ಯಾವ ರಾಶಿಯವರು ಎಷ್ಟು ಕರಿಮಣಿಗಳನ್ನು ಶಾಸ್ತ್ರದ ಪ್ರಕಾರ ಧರಿಸಬೇಕು ? ಕರಿ ಮಣಿಯ ಮಹತ್ವವೇನು ತಿಳಿಯೋಣ ಬನ್ನಿ

👇 ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ 👍 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

ಮ೦ಗಳಕರವಾದ ಮಾಂಗಲ್ಯದಲ್ಲಿ ಯಾವ ರಾಶಿಯವರು ಎಷ್ಟು ಕರಿಮಣಿಗಳನ್ನು ಧರಿಸಬೇಕು ಕರಿ ಮಣಿಯನ್ನು ದರಿಸುವುದರ ಹಿಂದಿರುವ ಮಹತ್ವ.

 ಮಾಂಗಲ್ಯಮ್ ತಂತು  ನಾನೇನ ಮಮ್ ಜೀವನ  ಹೇತುನಾ l    ಕಂಠೆ ಬದ್ನಾಮಿ ಸುಭಗೆ ತ್ವಂ  ಜೀವ ಶರದಾo ಶತಮ್ ll

 

 

ಈ ಶ್ಲೋಕ ಎಲ್ಲ ಹಿಂದೂ ಮದುವೆಗಳಲ್ಲಿ ತಾಳಿ ಕಟ್ಟುವಾಗ ಕೇಳಿ ಬರುವುದು ಸರ್ವೇ ಸಾಮಾನ್ಯ. ಹಿಂದೂ ಧರ್ಮದಲ್ಲಿ ಮದುವೆ ಮುಂಜಿ ಹೀಗೆ ಹಲವು ಸಂಪ್ರದಾಯಗಳಿಗೆ ಎಷ್ಟು ಮಹತ್ವವಿದೆಯೋ ಅದೇ ರೀತಿ  ವರ ವಧುವಿಗೆ ಕಟ್ಟುವ ಕರಿಮಣಿ ಸರಕ್ಕೂ  ಅಷ್ಟೇ ಪ್ರಾಮುಖ್ಯತೆ ಇದೆ.

ಮದುವೆಯ ಸಾಂಕೇತಿಕವಾಗಿ ಸ್ತ್ರೀಯರಿಗೆ ಕರಿಮಣಿ, ತಾಳಿ, ಕುಂಕುಮ, ಗಾಜಿನ ಬಳೆ, ಕಾಲುಂಗುರ, ಹೂವನ್ನು ನೀಡಲಾಗುವುದು. ಅದು ಗೃಹಿಣಿಗೆ ಸೌಭಾಗ್ಯಕರವಾದವು.

 

 ಮಾಂಗಲ್ಯ ಧಾರಣದ ಸಂಪ್ರದಾಯ ಹೇಗೆ ಆಚರಣೆಗೆ ಬಂತು  ?  ಅಂತ ಮೊದಲಿಗೆ ತಿಳಿಯೋಣ….

 

ಆದಿ ಆದಿಶಂಕರಾಚಾರ್ಯರು ರಚಿಸಿದ ಸೌಂದರ್ಯ ಲಹರಿಯಲ್ಲಿ ಶಿವನು ಪಾರ್ವತಿಗೆ ಮಂಗಳ ಸೂತ್ರವನ್ನು ಕಟ್ಟಿದ್ದನೆಂದು ಉಲ್ಲೇಖವಿದೆ.

ಲಲಿತಾ ಸಹಸ್ರನಾಮದಲ್ಲಿ ಸೌಂದರ್ಯ ಲಹರಿಗಳು ಚಾಲ್ತಿಯಿರುವ ಸ್ತೋತ್ರಗಳಾಗಿದ್ದು, ಮಾಂಗಲ್ಯ ಧಾರಣೆಯನ್ನು ಪ್ರಸ್ತಾಪಿಸಿವೆ.ವಿವಾಹಿತ ಹೆಂಗಸಿನ ಮೇಲೆ ಕೆಟ್ಟ ದೃಷ್ಟಿ ಬೀಳದಿರಲೆಂದು ಮಂಗಳ ಸೂತ್ರದಲ್ಲಿ ಕಪ್ಪು ಬಣ್ಣದ ಕರಿ ಮಣಿಗಳಿರುವುದು ಎಂಬ ನಂಬಿಕೆ ಇದೆ.

 

 

ಈಗ ಬಂಗಾರದ ಒಡವೆಯಲ್ಲಿ ಅಥವಾ ಮಾಂಗಲ್ಯದಲ್ಲಿ ಕರಿಮಣಿಗಳು ಏಕೆ ಕೂಡಿಸಲಾಗುವುದು ಎಂದು ತಿಳಿದುಕೊಳ್ಳೋಣ….

ಕಪ್ಪು ಕರಿ ಮಣಿಗಳಿಗೆ ಋಣಾತ್ಮಕ ಶಕ್ತಿಯನ್ನೆಲ್ಲ ಹೀರಿಕೊಂಡು ಅದು ವಧುವನ್ನು ಮತ್ತು ಅವಳ ಕುಟುಂಬವನ್ನು ತಗಲದಂತೆ ಮಾಡುವ ಗುಣವಿರುತ್ತದೆ.

ಕರಿಮಣಿ ಸರದ ಮತ್ತೊಂದು ವೈಶಿಷ್ಟ್ಯತೆ ಏನೆಂದರೆ ಎದೆಯ ಭಾಗದಲ್ಲಿ ಉಂಟಾಗುವ ಉಷ್ಣತೆಯನ್ನು ಹೀರಿಕೊಳ್ಳುತ್ತದೆ. ಇದರ ಅತಿ ಮುಖ್ಯವಾದ ಉಪಯುಕ್ತತೆ ಹಾಲುಣಿಸುವ ತಾಯಿಯಲ್ಲಿ ಎದೆಹಾಲಿನ ಉಷ್ಣತೆಯನ್ನು ಹೀರಿಕೊಂಡು ಎದೆಹಾಲು ಕೆಡದಂತೆ ಶಿಶುವಿಗೆ ಗ್ರಹಿಸಲು ಅನುಕೂಲವಾದ ಸಮ ಉಷ್ಣತೆಯಿರಲು ಸಹಾಯ ಮಾಡುತ್ತದೆ.

 

 

ಆಯಾ ಮತ ಪಂಥಗಳಿಗೆ ಕರಿಮಣಿಯ  ಬಗ್ಗೆ ತಿಳಿಯೋಣ….

 

ಬ್ರಾಹ್ಮಣ ವರ್ಗದಲ್ಲಿ ಎರಡು ಪದಕಗಳು ತಾಳಿ  ,ಮರಾಠ ಸ್ತ್ರೀಯರಿಗೆ ಒಂದು ಪದಕದ ದಾಳಿ, ವೈಶ್ಯ ಮತ್ತು ಜನಿವಾರ ಪಂಗಡಗಳಲ್ಲಿ ಚಿನ್ನ, ವಜ್ರ ,ವೈಡೂರ್ಯಗಳಿರುವ ತಾಳಿ ಹೀಗೆ ವೈವಿಧ್ಯಗಳು ವೀರಶೈವ ಸ್ತ್ರೀಯರು ತಾಳಿಯೊಂದಿಗೆ ಲಿಂಗದ ಕರಂಡಕವನ್ನು ಕಟ್ಟಿಕೊಳ್ಳುವುದು ಇದೆ.

 

 

ದಕ್ಷಿಣ ಭಾರತದಲ್ಲಿ ಹಿಂದೂಗಳಷ್ಟೇ ಅಲ್ಲದೆ ಕ್ರಿಶ್ಚಿಯನ್ ಮತ್ತು ಮುಸ್ಲಿಂ ಮತಸ್ಥ ಸ್ತ್ರೀಯರು ವಿವಾಹದ ನಂತರ ತಾಳಿ ಕರಿಮಣಿ ಸರ ಧರಿಸುತ್ತಾರೆ.ಹಾಗಾದರೆ ಯಾವ ರಾಶಿಗೆ ಎಷ್ಟು ಸಂಖ್ಯೆಯ ಕರಿಮಣಿಗಳನ್ನು ಧರಿಸಬೇಕು ಎಂದು ತಿಳಿಯೋಣ…..

 

ಮೇಷ  ರಾಶಿಗೆ -21 ಮಣಿಗಳು.

 ವೃಷಭ ರಾಶಿಗೆ -40 ಮಣಿಗಳು.

ಮಿಥುನ ರಾಶಿಗೆ – 34 ಮಣಿಗಳು.

 ಕಟಕ ರಾಶಿಗೆ -20  ಮಣಿಗಳು.

ಸಿಂಹ ರಾಶಿಗೆ -18 ಮಣಿಗಳು.

 

 

ಕನ್ಯಾ ರಾಶಿಗೆ- 34 ಮಣಿಗಳು.

 ತುಲಾ ರಾಶಿ -40  ಮಣಿಗಳು.

 ವೃಶ್ಚಿಕ ರಾಶಿ- 21 ಮಣಿಗಳು.

 ಧನಸ್ಸು ರಾಶಿ -32 ಮಣಿಗಳು.

 ಮಕರ ರಾಶಿ – 38 ಮಣಿಗಳು.

  ಕು೦ಭ ರಾಶಿ -38 ಮಣಿಗಳು.

 ಮೀನ ರಾಶಿ – 32 ಮಣಿಗಳು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

👇 ಹಂಚಿಕೊಳ್ಳೋದು ಒಳ್ಳೆಯದು, ಹಂಚಿಕೊಳ್ಳಿ 👍 👇👇

👆ನಮ್ಮ ಪೇಜ್ ಲೈಕ್ 👍 ಮಾಡಲು ಮರಿಬೇಡಿ ಫ್ರೆಂಡ್ಸ್ 👆

Comments

comments

Click to comment

Leave a Reply

Your email address will not be published. Required fields are marked *

To Top