ಮನೋರಂಜನೆ

ಪಾರ್ವತಮ್ಮ ರಾಜಕುಮಾರ್ ಹುಟ್ಟುಹಬ್ಬದ ಹಿನ್ನಲೆ ಮೈಸೂರಿನ ಅನಾಥಾಶ್ರಮದಲ್ಲಿ ಮಕ್ಕಳಿಗೆ ಸಿಹಿ, ಬಟ್ಟೆ ಹಂಚಿದ ಅಪ್ಪು ದಂಪತಿ.

ಪಾರ್ವತಮ್ಮ ರಾಜಕುಮಾರ್ ಹುಟ್ಟುಹಬ್ಬದ ಹಿನ್ನಲೆ ಮೈಸೂರಿನ ಅನಾಥಾಶ್ರಮದಲ್ಲಿ ಮಕ್ಕಳಿಗೆ ಸಿಹಿ, ಬಟ್ಟೆ ಹಂಚಿದ ಅಪ್ಪು ದಂಪತಿ.

 

 

ದಿವಂಗತ ಪಾರ್ವತಮ್ಮ ರಾಜಕುಮಾರ್ ಅವರ ಹುಟ್ಟುಹಬ್ಬವನ್ನು ನಟ ಪುನೀತ್ ರಾಜಕುಮಾರ್ ತಮ್ಮ ಪತ್ನಿಯ ಜೊತೆ ಮೈಸೂರಿನ ಅನಾಥಾಶ್ರಮವೊಂದರಲ್ಲಿ ಆಚರಿಸಿದ್ದಾರೆ. ಅವರ 78 ನೇ ಹುಟ್ಟುಹಬ್ಬವಿದ್ದ ಕಾರಣ ಚಾಮುಂಡಿ ಬೆಟ್ಟಕ್ಕೆ ಹೋಗಿ ಪೂಜೆ ಮಾಡಿಸಿ ಪಾರ್ವತಮ್ಮನವರ ನಡೆಸುತ್ತಿದ್ದ ಶಕ್ತಿಧಾಮ ಅನಾಥಾಶ್ರಮಕ್ಕೆ ಭೇಟಿ ನೀಡಿದ್ದಾರೆ.

 

 

ನೆನ್ನೆ(ಡಿಸೆಂಬರ್ 06) ಪಾರ್ವತಮ್ಮ ರಾಜಕುಮಾರ್ ಅವರ ಜನುಮ ದಿನ ಹಾಗಾಗಿ ಇಂದು ಶಕ್ತಿಧಾಮಕ್ಕೆ ಅನಾಥಾಶ್ರಮಕ್ಕೆ ಭೇಟಿ ನೀಡಿರುವ ಪುನೀತ್ ಮತ್ತು ಪತ್ನಿ ಅಷ್ವಿನಿ ಅಲ್ಲಿನ ಪಾರ್ವತಮ್ಮನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಹಿಳೆಯರಿಗೆ ಮತ್ತು ಅನಾಥ ಮಕ್ಕಳಿಗೆ ಸಿಹಿ ನೀಡಿ ಬಟ್ಟೆಗಳನ್ನು ವಿತರಿಸಿದ್ದಾರೆ. ಮಕ್ಕಳೊಂದಿಗೆ ಕೆಲಹೊತ್ತು ಕಾಲಕಳೆದು ಬಂದಿದ್ದಾರೆ.

 

 

2001ರಲ್ಲಿ ನಿರ್ಗತಿಕ ಮಹಿಳೆಯರು ಮತ್ತು ಮಕ್ಕಳಿಗಾಗಿ ಮೈಸೂರಿನಲ್ಲಿ ಶಕ್ತಿಧಾಮ ಅನಾಥಾಶ್ರಮವನ್ನು ಪಾರ್ವತಮ್ಮ ರಾಜಕುಮಾರ್ ನಿರ್ಮಿಸಿದ್ದರು.ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆಯರು, ವೇಶ್ಯಾವಾಟಿಕೆ ಜಾಲದಿಂದ ರಕ್ಷಣೆಯಾದವರು, ಕೌಟುಂಬಿಕ ದೌರ್ಜನ್ಯದಿಂದ ಬಳಲಿದ ಮಹಿಳೆಯರು,ನಿರ್ಗತಿಕರು ಹೀಗೆ ಸಮಾಜದಲ್ಲಿ ಶೋಷಣೆಗೆ ಒಳಗಾದ ಮಹಿಳೆಯರಿಗೆ ಮತ್ತು ಅನಾಥ ಮಕ್ಕಳಿಗೆ ಇಲ್ಲಿ ಪುನರ್ವಸತಿ ಕಲ್ಪಿಸಲಾಗಿದೆ. ಆರು ತಿಂಗಳ ಹಿಂದೆ ಪಾರ್ವತಮ್ಮ ರಾಜಕುಮಾರ್ ಇಹಲೋಕ ತೈಜಿಸಿದ್ದರು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top