fbpx
ಮನೋರಂಜನೆ

ಸಕತ್ ವೈರಲ್ ಆಗಿದೆ ಬಿಗ್’ಬಾಸ್’ನಲ್ಲಿ ಚಂದನ್ ಮಾಡಿದ ‘ಡಿಂಗ್ ಡ್ಯಾಂಗ್’ ಸಾಂಗ್.

ಸಕತ್ ವೈರಲ್ ಆಗಿದೆ ಬಿಗ್’ಬಾಸ್’ನಲ್ಲಿ ಚಂದನ್ ಮಾಡಿದ ‘ಡಿಂಗ್ ಡ್ಯಾಂಗ್’ ಸಾಂಗ್.

 

 

ಈ ಭಾರಿಯ ಬಿಗ್ ಬಾಸ್ ಕಾರ್ಯಕ್ರಮದ ಬಲಿಷ್ಠ ಸ್ಪರ್ದಿಗಳಲ್ಲಿ ಒಬ್ಬರಾದ ಚಂದನ್ ಶೆಟ್ಟಿ ಬಿಗ್ ಬಾಸ್ ಒಳಗೆ ಮತ್ತು ಹೊರಗೆ ಎಲ್ಲರಿಗೂ ಇಷ್ಟವಾಗಿದ್ದಾರೆ. ಕೈಗೆ ಸಿಕ್ಕ ವಸ್ತುಗಳನ್ನೇ ಸಂಗೀತ ಸಂಯೋಜನೆಗೆ ಉಪಕರಣಗಳನ್ನಾಗಿ ಉಪಯೋಗಿಸಿಕೊಂಡು, ಸ್ಥಳದಲ್ಲೇ ರ‍್ಯಾಪ್‌ ಸಾಂಗ್‌ ಮಾಡುವ ಚಂದನ್‌ ಟ್ಯಾಲೆಂಟ್‌ಗೆ ಎಲ್ಲರೂ ಫಿದಾ ಆಗಿದ್ದಾರೆ..

 

 

ಬಿಗ್ ಬಾಸ್ ಮನೆಯಲ್ಲಿ ಎಂಟು ವಾರಗಳಿಂದ ಇದ್ದರೂ ಯಾರ ಬಗ್ಗೆಯೂ ಗಾಸಿಪ್ ಮಾಡದೆ ಚಂದನ್ ವೀಕ್ಷಕರ ಮೆಚ್ಚುಗೆ ಗಿಟ್ಟಿಸಿಕೊಂಡಿದ್ದಾರೆ. ಅವರ ಕಂಠದಿಂದ ಹೊರಬರುತ್ತಿರುವ ಪ್ರತಿಯೊಂದು ಹಾಡುಗಳೂ ಕೂಡ ಕೇವಲ ಬಿಗ್ ಬಾಸ್ ಮನೆಯಲ್ಲಿ ಮಾತ್ರವಲ್ಲದೆ ವೀಕ್ಷಕರಿಗೂ ಸಕತ್ ಹಿಡಿಸಿದೆ. ಸೋಷಿಯಲ್ ಮೀಡಿಯಾಗಳಲ್ಲಂತೂ ಚಂದನ್ ಮಾಡಿರುವ ಒಂದೊಂದೂ ಹಾಡು ಕೂಡ ದೊಡ್ಡ ಮಟ್ಟಿಗೆ ವೈರಲ್ ಆಗಿವೆ.

 

 

ಮೊನ್ನೆ ಮನೆ ಗಂಧದಗುಡಿ ಟಾಸ್ಕ್ ನೀಡಿದ್ದಾಗ ಮೆನೆಯವರೆಲ್ಲಾ ಸೇರಿಕೊಂಡು ಸರ್ಕಸ್ ಮಾಡಬೇಕು ಎಂದು ಟಾಸ್ಕ್ ನೀಡಿದ ವೇಳೆ ಸರ್ಕಸ್ ಕುರಿತು ಶ್ರುತಿಯವರೊಂದಿಗೆ ಸೇರಿ ಮಾಡಿದ್ದ ‘ಡಿಂಗ್ ಡ್ಯಾಂಗ್’ ಹಾಡು ಈಗ ಎಲ್ಲೆಡೆ ವೈರಲ್ ಆಗಿದೆ.

ಡಿಂಗ್ ಡ್ಯಾಂಗ್ ಹಾಡನ್ನು ಇಲ್ಲಿ ನೋಡಿ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top