fbpx
ಮನೋರಂಜನೆ

ದಂಗಲ್ ನಟಿ ಮೇಲೆ ಲೈಂಗಿಕ ಕಿರುಕುಳ: ನಟಿ ಕಣ್ಣೀರು

ದಂಗಲ್ ನಟಿ ಮೇಲೆ ಲೈಂಗಿಕ ಕಿರುಕುಳ: ನಟಿ ಕಣ್ಣೀರು

 

 

ಬಾಲಿವುಡ್‌ ಯುವ ನಟಿ ಝೈರಾ ವಸಿಮ್‌ ವಿಮಾನದಲ್ಲಿ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದಾರೆ. ದಂಗಲ್​ ಚಿತ್ರದ ನಟಿ ಜೈರಾ ವಾಸೀಮ್ ಅವರಿಗೆ ಯುವಕನೊಬ್ಬ ವಿಮಾನದಲ್ಲಿ ಲೈಂಗಿಕ ಕಿರುಕುಳ ನೀಡಿರುವುದಾಗಿ ವರದಿಯಾಗಿದೆ. ಈ ಬಗ್ಗೆ ಸ್ವತಃ ನಟಿಯೇ ಹೇಳಿಕೊಂಡಿದ್ದಾರೆ.

 

 

ದೆಹಲಿಯಿಂದ ಮುಂಬೈಗೆ ವಿಮಾನದಲ್ಲಿ ಪ್ರಯಾಣಿಸುವಾಗ ಕಿರಾತಕನೊಬ್ಬ ಲೈಂಗಿಕ ಕಿರುಕುಳ ನೀಡಿದ್ದಾನೆ. ಈ ಬಗ್ಗೆ ನಟಿ ಝೈರಾ ವಾಸಿಂ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ ಲೈವ್‌ ವಿಡಿಯೊ ಅಪ್ಲೋಡ್‌ ಮಾಡಿದ್ದಾರೆ.

 

 

ಹೆಣ್ಣಿನ ಜತೆ ಅಸಭ್ಯವಾಗಿ ನಡೆದುಕೊಳ್ಳುವುದು ಸರಿಯಲ್ಲ ಎಂದು ಅಳುತ್ತ ತಮ್ಮ ನೋವವನ್ನು ತೋಡಿಕೊಂಡಿರುವ ನಟಿ “ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆಹಿಂದೆ ಕುಳಿತಿದ್ದ ಯುವಕನೊಬ್ಬ ಅಸಭ್ಯವಾಗಿ ವರ್ತಿಸಿದ್ದಾನೆ ನಾನು ಮಲಗಿದ್ದ ವೇಳೆ ಆ ವ್ಯಕ್ತಿ ನನ್ನ ಕತ್ತಿನ ಭಾಗವನ್ನು ಸ್ಪರ್ಶಿಸುತ್ತಿದ್ದ. ಇದನ್ನು ಫೋಟೋ ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ ವಿಮಾನ ಸಂಸ್ಥೆಯ ಅಧಿಕಾರಿಗೆ ಹೇಳಿದರೂ ಯಾರು ಬಾರದೇ ಇದ್ದಿದ್ದು, ಅವರಿಗೆ ತುಂಬಾ ಬೇಸರ ಮೂಡಿಸಿದೆ ” ಎಂದು ಕಣ್ಣೀರಿಡುತ್ತಾ ಹೇಳಿದ್ದಾರೆ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top