fbpx
ಮನೋರಂಜನೆ

ಚಂದನವನದಲ್ಲಿ ಕಿಕ್ ಏರಿಸುತ್ತಿದೆ ಕನಕ ಚಿತ್ರದ ಎಣ್ಣೆ ಸಾಂಗ್.

ಚಂದನವನದಲ್ಲಿ ಕಿಕ್ ಏರಿಸುತ್ತಿದೆ ಕನಕ ಚಿತ್ರದ ಎಣ್ಣೆ ಸಾಂಗ್.

 

 

ದುನಿಯಾ ವಿಜಯ್ ಅಭಿನಯದ ಬಹುನಿರೀಕ್ಷಿತ ಕನಕ ಚಿತ್ರ ಮುಂದಿನ ತಿಂಗಳು ತೆರೆಗೆ ಬರುತ್ತಿದ್ದು ಸದ್ಯ ಚಿತ್ರದ ಹಾಡೊಂದು ಬಿಡುಗಡೆಯಾಗಿದ್ದು ಸೋಷಿಯಲ್ ಮೀಡಿಯಾಗಳಲ್ಲಿ ಸಕ್ಕತ್ತಾಗಿ ಸೌಂಡ್ ಮಾಡ್ತಿದೆ. ‘ಎಣ್ಣೆ ನಿಮ್ಮದು ಊಟ ನಂದು’ ಎಂದು ಪ್ರಾರಂಭವಾಗುವ ಈ ಹಾಡು ಸದ್ಯ ಸ್ಯಾಂಡಲ್ ವುಡ್ ನಲ್ಲಿ ಕಿಕ್ ಕೊಡುತ್ತಿದೆ.

 

 

ನವೀನ ಸಜ್ಜು ಸಂಗೀತ ಸಂಯೋಜಿಸಿರುವ ಈ ಹಾಡನ್ನು ಸ್ವತಃ ಅವರೇ ಹಾಡಿದು ಹಾಡಿನಲ್ಲೇ ಅವರೇ ಹೆಜ್ಜೆ ಹಾಕಿದ್ದಾರೆ. ಸದ್ಯ ಚಂದನವನದಲ್ಲಿ ಸಡ್ಡು ಮಾಡುತ್ತಿರುವ ಎಣ್ಣೆ ಸಾಂಗ್ ಗಳ ಪಟ್ಟಿಗೆ ಕನಕ ಚಿತ್ರದ ಈ ಹಾಡು ಕೂಡ ಸೇರಿಕೊಂಡಿದೆ. ಯೂಟ್ಯೂಬ್ ಸೇರಿದಂತೆ ಸೋಷಿಯಲ್ ಮೀಡಿಯಾಗಳಲ್ಲಿ ಈ ಹಾಡು ತುಂಬಾ ವೈರಲ್ ಆಗಿದೆ.

ಚಿತ್ರದಲ್ಲಿ ಡಾ ರಾಜ್ ಅಭಿಮಾನಿಯಾಗಿ ಕಾಣಿಸಿಕೊಂಡಿರುವ ವಿಜಯ್ ಅವರಿಗೆ ಮಾನ್ವಿತಾ ಹರೀಶ್ ಮತ್ತು ಹರಿಪ್ರಿಯಾ ನಾಯಕಿಯರಾಗಿದ್ದಾರೆ. ರೂಪಿಕಾ ಈ ಚಿತ್ರದಲ್ಲಿ ಖಳನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಆರ್. ಚಂದ್ರು ನಿರ್ದೇಶನವಿರುವ ಈ ಚಿತ್ರಕ್ಕೆ ನವೀನ್‍ ಸಜ್ಜು ಸಂಗೀತ ಮತ್ತು ಸತ್ಯ ಹೆಗಡೆಯವರ ಛಾಯಾಗ್ರಹಣವಿದೆ. ಚಿತ್ರದಲ್ಲಿ ಸಾಧುಕೋಕಿಲ, ರಂಗಾಯಣ ರಘು, ರವಿಶಂಕರ್, ಶ್ರೀನಿವಾಸಮೂರ್ತಿ, ಅಚ್ಯುತರಾವ್, ಮುಂತಾದವರು ನಟಿಸಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top