fbpx
ಕಿರುತೆರೆ

ಅನುಪಮಾ ಗೌಡ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದು ಯಾಕೆ? ಬಯಲಾಯ್ತು ರಹಸ್ಯ!

ಅನುಪಮಾ ಗೌಡ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದು ಯಾಕೆ? ಬಯಲಾಯ್ತು ರಹಸ್ಯ!

 

 

 

ಬಿಗ್‌‌‌ಬಾಸ್‌ ಕಾರ್ಯಕ್ರಮದ ನಿನ್ನೆಯ ಸಂಚಿಕೆಯಲ್ಲಿ ಹೊಸ ವರ್ಷದ ಅಂಗವಾಗಿ ಮನೆಯ ಸದಸ್ಯರುಗಳಿಗೆ ತಮ್ಮ ಜೀವನದಲ್ಲಿ ನಡೆದಿರುವ ಘಟನೆ ಮತ್ತು ಅದು ಇಲ್ಲಿಯವರೆಗೂ ಯಾರಿಗೂ ತಿಳಿಯದೆ ಇರುವ ರಹಸ್ಯವನ್ನು ಹಂಚಿಕೊಳ್ಳುವ ವಿಶೇಷ ಚಟುವಟಿಕೆಯನ್ನು ನೀಡಲಾಗಿತ್ತು. ಅದರಂತೆ ಸ್ಪರ್ಧಿಗಳು ತಮ್ಮ ಜೀವನದಲ್ಲಿ ನಡೆದಿದ್ದ ಸೀಕ್ರೇಟ್‌ ಸ್ಟೋರಿಗಳನ್ನ ಬಿಗ್ ಬಾಸ್ ಕ್ಯಾಮರಾ ಮುಂದೆ ಬಿಚ್ಚಿಟ್ಟರು.

 

 

ಅದರಂತೆ ಬಿಗ್ ಬಾಸ್ ಕ್ಯಾಮರಾ ಮುಂದೆ ನಿಂತ ಅನುಪಮಾ ತಾವು ಆತ್ಮಹತ್ಯೆಗೆ ಯತ್ನಿಸಿದ್ದ ರಹಸ್ಯವನ್ನು ಬಯಲು ಮಾಡಿದ್ದರು. ಅಕ್ಕ ಧಾರವಾಹಿ ಮೂಲಕ ಮನೆ ಮಾತಾಗಿ ಸದ್ಯಕ್ಕೆ ಬಿಗ್ ಬಾಸ್ ಸ್ಪರ್ಧಿಯಾಗಿರುವ ಅನುಪಮಾ ಗೌಡ ಒಂದೂವರೆ ವರ್ಷದ ಹಿಂದೆ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದರಂತೆ.

“ಒಂದುವರೆ ವರ್ಷದ ಹಿಂದೆ ಕೆಲವು ಕಾರಣಗಳಿಂದಾಗಿ ನನ್ನ ಮನಸಿಗೆ ಬಹಳ ತುಂಬಾ ನೋವಾಗಿತ್ತು, ನಾನು ತುಂಬಾ ಹತಾಶೆಗೊಂಡಿದ್ದೆ ನನ್ನ ಬಳಿ ಯಾರೂ ಇಲ್ಲ, ಏನೂ ಇಲ್ಲ ಎಂದು ಅನಿಸುತಿತ್ತು. ಆಗ ನಾನು ಬದುಕಬಾರದು ಎಂದು ನಿರ್ಧಾರ ಮಾಡಿ ನಿದ್ದೆ ಮಾತ್ರಗಳನ್ನು ತೆಗೆದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದೇ .. ನಾನು ಆತ್ಮಹತ್ಯೆಗೆ ಪ್ರಯತ್ನ ಪಟ್ಟಿದ್ದಾಗ ನೇಹಾ ನನ್ನ ಜೊತೆಗೆ ಇಡೀ ದಿನ ಇದ್ದು ನನ್ನ ಉಳಿಸಿದಳು, ಆಕೆ ನನ್ನನ್ನ ಆರೈಕೆ ಮಾಡಿದಳು. ಆಕೆಯಿಂದ ನನಗೆ ಪುನರ್ಜನ್ಮ ಲಭಿಸಿತು.ಹೀಗಾಗಿ ನನಗೆ ನೇಹಾ ಅಂದ್ರೆ ಬಹಳ ಗೌರವವಿದೆ.”

 

 

“ಆಗ ನಾನು ಇದ್ದ ರೀತಿ ಈಗ ಇಲ್ಲ. ತುಂಬಾ ಸ್ಟ್ರಾಂಗ್ ಆಗಿದ್ದೀನಿ, ಸಣ್ಣ ಸಣ್ಣ ವಿಷಯಕ್ಕೆಲ್ಲ ಈಗ ನಾನು ಹತಾಶೆಗೊಳ್ಳೋದಿಲ್ಲ. ನನ್ನನ್ನ ನಾನೇ ಪ್ರೀತಿಸಲು ಶುರು ಮಾಡಿದ್ದೇನೆ.. ಇದೇ ನನ್ನ ನನ್ನ ಜೀವನದ ರಹಸ್ಯ” ಎಂದು ಅನುಪಮಾ ಗೌಡ ಹೇಳಿದರು.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top