fbpx
ರಾಜಕೀಯ

ಪರಿಕ್ಕರ್ ವಿರುದ್ಧ ಯಡಿಯೂರಪ್ಪ ಗರಂ: ಅಮಿತ್ ಶಾಗೆ ದೂರು

ಪರಿಕ್ಕರ್ ವಿರುದ್ಧ ಯಡಿಯೂರಪ್ಪ ಗರಂ: ಅಮಿತ್ ಶಾಗೆ ದೂರು

 

ದಿನ ದಿನಕ್ಕೆ ಮಹಾದಾಯಿ ವಿವಾದ ಹೊಸ ತಿರುವು ಪಡೆಯುತ್ತಿದೆ. ಗೋವಾ ಬಿಜೆಪಿ ಸರ್ಕಾರದ ದ್ವಂದ್ವ ನೀತಿಯ ವಿರುದ್ಧ ರಾಜ್ಯ ಬಿಜೆಪಿ ನಾಯಕರ ಸಿಟ್ಟು ಹೊರಬಿದ್ದಿದೆ.

 

 

ಬಿಜೆಪಿ ರಾಜ್ಯಾಧ್ಯಕ ಯಡಿಯೂರವ್ವ ಅವರು ಮಹದಾಯಿ ಕುರಿತು ಮಾತುಕತೆಗೆ ಒಪ್ಪಿ ಬರೆದಿರುವ ಪತ್ರದ ಬಗ್ಗೆ ಗೋವಾ ಬಿಜೆಪಿ ಸ್ಪಷ್ಟ ನಿರ್ಧಾರ ತೆಗೆದುಕೊಂಡಿಲ್ಲ, ಇದರಿಂದ ಮಹಾದಾಯಿ ಹೋರಟಗಾರರು ತೀವ್ರವಾಗಿ ಹೋರಾಟ ಮಾಡುತ್ತಿದ್ದಾರೆ. ರಾಜ್ಯ ಬಿಜೆಪಿ ಕಚೇರಿಯ ಮುಂದೆ ಹೋರಾಟ ಮಾಡುತ್ತಿದ್ದಾರೆ. ಇದರಿಂದ ತಮ ವರ್ಚಸ್ಸಿಗೆ ಧಕ್ಕೆಯಾಗಿದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ವರಿಗೆ ಯಡಿಯೂರಪ್ಪ ದೂರಿದ್ದಾರೆ.

 

 

ಕುಡಿಯಲು ಮಹದಾಯಿ ನೀರು ನೀಡುವುದಾಗಿ ಗೋವಾ ಪತ್ರ ಬರೆದಿದೆ ಎಂದು ಈ ಹಿಂದೆ ಯಡಿಯೂರಪ್ಪ ಹೇಳಿದ್ದರು ಆದರೆ ಈಗ  ದ್ವಿಮುಖ ನೀತಿ ಅನುಸರಿಸುತ್ತಿದೆ. ಗೋವಾ ಮುಖ್ಯಮಂತ್ರಿ ಪರಿಕ್ಕರ್ ಗೆ ಮಹಾದಾಯಿ ವಿಚಾರವಾಗಿ ಮಾತುಕತೆ ಸಂಬಂಧ ಸ್ಪಷ್ಟ ನಿರ್ದೇಶನ ನೀಡಿ ಎಂದು ಅಮಿತ್ ಶಾಗೆ ಯಡಿಯೂರಪ್ಪ ಒತ್ತಾಯಿಸಿದ್ದಾರೆ ಎಂದು ಹೇಳಲಾಗಿದೆ. ಆದರೆ ಅಮಿತ್ ಷಾ ಈ ವಿಚಾರವಾಗಿ ಯಾವುದೇ ಭರವಸೆ ನೀಡಿಲ್ಲ ಎಂದು ವರದಿಯಾಗಿದೆ.

 

 

ಕಾಂಗ್ರೆಸ್ ಪಕ್ಷ ಮಹದಾಯಿ ವಿಚಾರದಲ್ಲಿ ರಾಜಕಾರಣ ಮಾಡುತ್ತಿದೆ. ರೈತರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆಯ ಮುಂದೆ ಧರಣಿ ನಡೆಸಲಿ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top