fbpx
ರಾಜಕೀಯ

ವಿಧಾನಸೌಧ ಆವರಣದಲ್ಲಿ ಶ್ರೀ ಕನಕದಾಸರ ಕಂಚಿನ ಪ್ರತಿಮೆ ಸ್ಥಾಪನೆಗೆ ಸ್ಥಳಾವಾಕಾಶ ನೀಡಿ ಆದೇಶ ಹೊರಡಿಸಿದ ಸರ್ಕಾರ

ವಿಧಾನಸೌಧ ಆವರಣದಲ್ಲಿ ಶ್ರೀ ಕನಕದಾಸರ ಕಂಚಿನ ಪ್ರತಿಮೆ ಸ್ಥಾಪನೆಗೆ ಸ್ಥಳಾವಾಕಾಶ ನೀಡಿ ಆದೇಶ ಹೊರಡಿಸಿದ ಸರ್ಕಾರ

 

ಬೆಂಗಳೂರಿನ ವಿಧಾನಸೌಧದ ಆವರಣದಲ್ಲಿ ಕನಕದಾಸರ ಪುತ್ಥಳಿ ಪ್ರತಿಷ್ಠಾಪಿಸುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಲಾಗಿದೆ. ಶೀಘ್ರವೇ ಕಾರ್ಯ ರೂಪಕ್ಕೆ ಬರಲಿದೆ ಎಂದು ಜಿಲ್ಲಾ ಉಸ್ತುವಾರಿ, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಖಾತೆಯ ಸಚಿವ ಎಚ್.ಆಂಜನೇಯ ಅವರು ನವೆಂಬರ್ ತಿಂಗಳಲ್ಲಿ ಭರವಸೆ ನೀಡಿದ್ದರು.

 

 

ವಿಧಾನಸೌಧದ ಆವರಣದಲ್ಲಿ ಕನಕದಾಸರ ಪ್ರತಿಮೆ ಪ್ರತಿಷ್ಠಾಪಿಸುವ ಕುರಿತು ಕಾರ್ಯದರ್ಶಿ ಸಿಬ್ಬಂದಿ ಹಾಗು ಆಡಳಿತ ಸುಧಾರಣೆ ಇಲಾಖೆ ಯವರು ಸಹಾಯಕ ಕಾರ್ಯಪಾಲ ಅಭಿಯಂತರಿಗೆ ಪತ್ರ ಬರೆದಿದ್ದಾರೆ, ಕನಕದಾಸ ಪ್ರತಿಮೆಯನ್ನು ವಾಲ್ಮೀಖಿ ಪ್ರತಿಮೆ ಎದುರಿನಲ್ಲಿರುವ ಹಾಗು ವಿಧಾನಸೌಧದ ಉತ್ತರ ಭಾಗದಲ್ಲಿ ಶಾಸಕರ ಭವನಕ್ಕೆ ಹೊಂದಿಕೊಂಡಿರುವ ಸ್ಥಳದಲ್ಲಿ ಸ್ಥಾಪಿಸಲು ಅನುಮತಿ ನೀಡಿ ನಿರ್ದೇಶಿಸಿದ್ದಾರೆ. ಇನ್ನು ಕೆಲವೇ ದಿನದಲ್ಲಿ ಪ್ರತಿಮೆ ಪ್ರತಿಷ್ಠಾಪನೆಯಾಗಲಿದೆ

 

 

ಕನಕದಾಸರ ಪ್ರತಿಮೆ ಸ್ಥಾಪಿಸಬೇಕೆನ್ನುವುದು ಬಹಳ ದಿನಗಳ ಬೇಡಿಕೆಯಾಗಿತ್ತು ಈಗ ಕಾರ್ಯರೂಪಕ್ಕೆ ಬರುತ್ತಿರುವದು ಹಲವರಲ್ಲಿ ಸಂತಸ ಮೂಡಿಸಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top