fbpx
ರಾಜಕೀಯ

ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿರುದ್ಧ ತೊಡೆತಟ್ಟಿ ಘರ್ಜಿಸಿದ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್

ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿರುದ್ಧ ತೊಡೆತಟ್ಟಿ ಘರ್ಜಿಸಿದ ಸಿದ್ದರಾಮಯ್ಯ, ಡಿ ಕೆ ಶಿವಕುಮಾರ್

ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ನಡೆದ ರಾಜ್ಯ ಸರ್ಕಾರದ ಸಾಧನಾ ಸಮಾವೇಶದಲ್ಲಿ ಸಿ ಪಿ ಯೋಗೇಶ್ವರ್ ವಿರುದ್ಧ ಡಿ ಕೆ ಶಿವಕುಮಾರ್ ಹಾಗು ಸಿಎಂ ಸಿದ್ದರಾಮಯ್ಯ ಜಂಟಿ ಸಮರ ಸಾರಿದ್ದಾರೆ..

 

 

ಯೋಗೇಶ್ವರ್ ಮೂಲತಃ ಕಾಂಗ್ರೆಸ್ ಶಾಸಕಲ್ಲ ಜಮಾಜವಾದಿ ಪಕ್ಷದವರು, ಯೋಗೇಶ್ವರ್ ಸಾಮಾಜಿಕ ಮೌಲ್ಯ ಇಲ್ಲದ ರಾಜಕಾರಣಿ ಎಂದು ಗುಡುಗಿದರು. ಇವತ್ತಿನ ಸರ್ಕಾರೀ ಕಾರ್ಯಕ್ರಮ ಯೋಗೇಶ್ವರ್ ಅಧ್ಯಕ್ಷೆತೆಯಲ್ಲಿ ನಡೆಯಬೇಕಿತ್ತು ಆದರೆ ಭಯದಿಂದ ಅವರು ಹಾಜರಾಗಿಲ್ಲ ಕ್ಷೇತ್ರದ ಜನತೆಗೆ ಸುಳ್ಳು ಹೇಳಿರುವ ಬಗ್ಗೆ ಸಿಕ್ಕಿಹಾಕಿಹೊಳ್ಳುವ ಭಯ ಅವರಿಗೆ ಎಂದು ಹೇಳಿದರು. ಅಸೆಂಬ್ಲಿ ಗೆ ಬಾರದ ಶಾಸಕರೆಂದರೆ ಯೋಗೇಶ್ವರ್ ಎಂದರು. ಡಿ ಕೆ ಶಿವಕುಮಾರ್ ಮಾತನಾಡಿ ಹೈಕಮಾಂಡ್ ಹೇಳಿದವರು ಇಲ್ಲಿ ಅಭ್ಯರ್ಥಿ ಆಗ್ತಾರೆ. ಆದರೆ ಅಭ್ಯರ್ಥಿ ಇಲ್ಲಿ ನೆಪ ಮಾತ್ರ. ನಾನು ಹಾಗೂ ಡಿ.ಕೆ.ಸುರೇಶ್ ಇಲ್ಲಿನ ನಿಜವಾದ ಅಭ್ಯರ್ಥಿಗಳು ನೆನಪಿರಲಿ. 30 ವರ್ಷದಿಂದ ನನ್ನನ್ನು ನೋಡಿದಿರಾ ಅಂತ ಡಿಕೆಶಿ ಹೇಳಿದ್ರು.

 

ಇನ್ನು ಸಿಎಂ ಸಿದ್ದರಾಮಯ್ಯನವರು ಮಾತನಾಡಿ 571 ಕೋಟಿ ರೂಪಾಯಿ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟಿಸಿ ಸಿದ್ದರಾಮಯ್ಯನವರು ಮಾತನಾಡಿದರು ಸಿಎಂ ಸಿದ್ದರಾಮಯ್ಯ ಮಾತನಾಡಿ, ಚನ್ನಪಟ್ಟಣ ಕ್ಷೇತ್ರಾಭಿವೃದ್ಧಿಗೆ ಅನುದಾನ ಕೊಟ್ಟಿದ್ದು ನಮ್ಮ ಸರ್ಕಾರ. ಇಲ್ಲಿನ ಶಾಸಕರು ತಾವೇ ಅಭಿವೃದ್ಧಿ ಮಾಡಿರುವರೆಂದು ಹೇಳ್ಕೊಳ್ತಿದ್ದಾರೆ. ನಮ್ಮ ಸರ್ಕಾರ ಹಣ ಕೊಡ್ಲಿಲ್ಲ ಅಂದ್ರೆ ಅಭಿವೃದ್ಧಿ ಮಾಡ್ತಿದ್ರಾ ಅವರು? ಇವತ್ತಿನ ಕಾರ್ಯಕ್ರಮಕ್ಕೆ ಇಲ್ಲಿನ ಶಾಸಕರನ್ನೂ ಕರೆದಿದ್ದೆವು. ಆದರೆ ಅವರು ಬರಲಿಲ್ಲ. ಜನರಿಗೆ ಸುಳ್ಳು ಹೇಳಿದ್ದಾರೆ ಇಲ್ಲಿನ ಶಾಸಕರು. ತಮ್ಮ ಸುಳ್ಳು ಬಯಲಾಗಿಬಿಡುತ್ತೆ ಅನ್ನೋ ಕಾರಣಕ್ಕೆ ಇಲ್ಲಿನ ಶಾಸಕರು ಕಾರ್ಯಕ್ರಮಕ್ಕೆ ಬರಲಿಲ್ಲ ಅಂದ್ರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top