fbpx
ರಾಜಕೀಯ

ಗೋವಾ ಬಿಜೆಪಿ ಸರ್ಕಾರದಿಂದ ಕನ್ನಡಿಗರಿಗೆ ಶಾಕಿಂಗ್ ನ್ಯೂಸ್..

ಗೋವಾ ಬಿಜೆಪಿ ಸರ್ಕಾರದಿಂದ ಕನ್ನಡಿಗರಿಗೆ ಶಾಕಿಂಗ್ ನ್ಯೂಸ್..

 

ಮಹದಾಯಿ ವಿಚಾರವಾಗಿ ಕರ್ನಾಟಕ ಹಾಗು ಗೋವಾ ಮಧ್ಯೆ ಸಂಘರ್ಷ ನಡೆಯುತ್ತಲೇ ಇದೆ..

 

 

ರಾಜ್ಯದ ಕಾರವಾರ ಹಾಗು ಇನ್ನುಳಿದ ಜಿಲ್ಲೆಯ ಜನರು ಗೋವಾದ ಸರ್ಕಾರೀ ಆಸ್ಪತ್ರೆಗಳಿಗೆ ತೆರಳುತ್ತಿದ್ದರು, ಆದರೆ ಈಗ ಗೋವಾ ಶಾಕಿಂಗ್ ಸುದ್ದಿ ನೀಡಿದ್ದು ಹೊರ ರಾಜ್ಯದಿಂದ ಚಿಕಿತ್ಸೆಗಾಗಿ ಬರುವ ರೋಗಿಗಳಿಗೆ ಶುಲ್ಕ ವಿಧಿಸುತ್ತಿದೆ.. ಉಚಿತ ಸೇವೆಯನ್ನು ಹೊಸ ವರ್ಷದಿಂದ ಜಾರಿಗೆ ಬರುವಂತೆ ಸ್ಥಗಿತಗೊಳಿಸಲಾಗಿದೆ. ಇದರಿಂದ ಕಾರವಾರ ಭಾಗದ ಜನಸಾಮಾನ್ಯರಿಗೆ ತೊಂದರೆಯಾಗಿದೆ.

 

 

ಕರ್ನಾಟಕದಿಂದ ಗೋವಾದ ಬಾಂಬೋಲಿಂ ವೈದ್ಯಕೀಯ ಆಸ್ಪತ್ರೆಯಲ್ಲಿ ದಾಖಲಾಗುವ ಹೊರರೋಗಿಗಳಿಗೆ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತಿದೆ. ಶಸ್ತ್ರ ಚಿಕಿತ್ಸೆಗಾಗಿ ಹೊರ ರಾಜ್ಯದಿಂದ ಬರುವವರಿಗೆ ಶುಲ್ಕ ವಸೂಲಿ ಮಾಡಲಾಗಿದ್ದು ಉತ್ತರ ಕನ್ನಡ ಜಿಲ್ಲೆಯ ಕಾರವಾರ, ಹಳಿಯಾಳ, ಕುಮಟಾ, ಅಂಕೋಲ, ಜೋಯಿಡಾ ಹಾಗು ಗೋವಾಗೆ ಹೊಂದಿಕೊಂಡ ಇನ್ನಿತರೇ ತಾಲೂಕಿನ ಜನರಿಗೆ ಇದು ಬಿಸಿ ತುಪ್ಪವಾಗಿ ಪರಿಣಮಿಸಿದೆ.

 

 

ಕಾರವಾರದಲ್ಲಿ ಸರ್ಕಾರಿ ಆಸ್ಪತ್ರೆಯ ಸೇವೆ ಸರಿಯಿಲ್ಲ ಹಾಗು ಖಾಸಗಿ ಆಸ್ಪತ್ರೆಗಳು ಸಹ ಇಲ್ಲಿ ಸರಿಯಿಲ್ಲ ಈ ಕಾರಣದಿಂದ ಇಲ್ಲಿನ ಜನ ಗೋವಾ ಆಸ್ಪತ್ರೆಗೆ ತೆರಳುತ್ತಾರೆ. ಕರ್ನಾಟಕ ಹಾಗು ಮಹಾರಾಷ್ಟ್ರದ ಜನರು ಗೋವಾ ಆಸ್ಪತ್ರೆಗೆ ತೆರಳುತ್ತಿರುವುದು ಗೋವಾ ಬಿಜೆಪಿ ಸರ್ಕಾರದ ಬೊಕ್ಕಸಕ್ಕೆ ಹೊಟಟ ಉಂಟಾಗುತ್ತಿದೆ ಆದ್ದರಿಂದ ಈ ತೀರ್ಮಾನಕ್ಕೆ ಬರಲಾಗಿಗೆ.

ಇನ್ನು ಗೋವಾ ಹಾಗು ಮಹಾರಾಷ್ಟ್ರದಿಂದ ಚಿಕಿತ್ಸೆಗೆ ಬರುವ ರೋಗಿಗಳ ವತಿಯಿಂದ ವಕೀಲ ಆರ್.ವಿ.ನಾಯ್ಕರವರು ಗೋವಾ ಸರ್ಕಾರಕ್ಕೆ ಆದೇಶವನ್ನು ಹಿಂಪಡೆಯಬೇಕೆಂದು ಮನವಿ ಮಾಡಿಕೊಂಡಿದ್ದಾರೆ. ಗೋವಾ ಸರ್ಕಾರವು ಈ ಮನವಿಯನ್ನು ಸ್ವೀಕರಿಸಿದೆ. ಅರೋಗ್ಯ ಸಚಿವರಾದ ಆರೋಗ್ಯ ಸಚಿವ ವಿಶ್ವಜಿತ್ ರಾಣೆ ಹಾಗು ಮುಖ್ಯಮಂತ್ರಿ ಮನೋಹರ ಪರಿಕ್ಕರ್ ಅವ್ರು ಯಾವ ನಿರ್ಧಾರಕ್ಕೆ ಬರುತ್ತಾರೆ ಎಂದು ಕಾಡು ನೋಡಬೇಕಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top