fbpx
ರಾಜಕೀಯ

ಕರ್ನಾಟಕದಲ್ಲಿ ಬಿಜೆಪಿ ಪಕ್ಷ ಮುಳುಗಿಸೋಕೆ ಬಿಜೆಪಿ ಪಕ್ಷದ ಈ ಐದು ನಾಯಕರೇ ಸಾಕು: ಯುಟಿ ಖಾದರ್

ಕರ್ನಾಟಕದಲ್ಲಿ ಬಿಜೆಪಿ ಪಕ್ಷ ಮುಳುಗಿಸೋಕೆ ಬಿಜೆಪಿ ಪಕ್ಷದ ಈ ಐದು ನಾಯಕರೇ ಸಾಕು: ಯುಟಿ ಖಾದರ್

 

ರಾಜ್ಯ ವಿಧಾನಸಭಾ ಚುನಾವಣೆಯು 2018-ಮೇ ತಿಂಗಳಲ್ಲಿ ನಡೆಯಲಿದೆ ಎಲ್ಲ ರಾಜಕೀಯ ಪಕ್ಷಗಳು ಬಿರುಸಿನ ಪ್ರಚಾರ ನಡೆಸುತ್ತಿವೆ. ಎಲ್ಲ ಪಕ್ಷದ ನಾಯಕರು ಹೇಳಿಕೆ ಪ್ರತಿಹೇಳಿಕೆ ನೀಡುತ್ತಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಯುಟಿ ಖಾದರ್ ಮಾತನಾಡಿ ಕರ್ನಾಟಕದಲ್ಲಿ ಬಿಜೆಪಿ ಪಕ್ಷ ಮುಳುಗಿಸೋಕೆ ಬಿಜೆಪಿ ಪಕ್ಷದ ಈ ಐದು ನಾಯಕರೇ ಸಾಕು ಎಂದು ವಾಗ್ದಾಳಿ ನಡೆಸಿದ್ದಾರೆ.

 

ಬಿಜೆಪಿಯವರಾದ ಅನಂತ್ ಕುಮಾರ್ ಹೆಗ್ಡೆ, ನಳಿನ್ ಕುಮಾರ್ ಕಟೀಲು, ಪ್ರತಾಪ್ ಸಿಂಹ, ಗೋ ಮಧುಸೂದನ್ ಮತ್ತು ಶೋಭಾ ಕರಂದ್ಲಾಜೆ ಈ ಐವರು ಬಿಜೆಪಿ ಪಕ್ಷವನ್ನು ಮುಳುಗಿಸಲು ಸಾಕು ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉ ಟಿ ಖಾದರ್ ಹೇಳಿದರು..

 

 

ಅನಂತ್ ಕುಮಾರ್ ಹೆಗ್ಡೆ, ನಳಿನ್ ಕುಮಾರ್ ಕಟೀಲು, ಪ್ರತಾಪ್ ಸಿಂಹ, ಗೋ ಮಧುಸೂದನ್ ಮತ್ತು ಶೋಭಾ ಕರಂದ್ಲಾಜೆ ಸದಾ ಓದಿಲ್ಲ ಒಂದು ವಿವ್ಯಾಧಾತ್ಮಕ ಹೇಳಿಕೆ ನೀಡುತ್ತಾ ಮಾಧ್ಯಮದಲ್ಲಿ ಸುದ್ದಿಯಲ್ಲಿರುತ್ತಾರೆ. ಕಳೆದ ತಿಂಗಳು ಸಚಿವ, ಸಂಸದ ಅನಂತ್ ಕುಮಾರ್ ಹೆಗ್ಡೆ ಸಂವಿಧಾನ ಬದಲಿಸುವ ಹೇಳಿಕೆ ನೀಡಿದ್ರು ಆಮೇಲೆ ಲೋಕಸಭೆಯಲ್ಲಿ ತೀವ್ರ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಕ್ಷಮೆ ಕೇಳಿದ್ದರು.

ಇನ್ನು ಗುಜರಾತದಲ್ಲಿ ಕಳೆದ ತಿಂಗಳು ನಡೆದ ವಿಧಾನಸಭಾ ಚುನಾವಣೆಯ ಕುರಿತು ಬಗ್ಗೆ ಮಾತನಾಡಿದ ಅವರು ಗುಜರಾತನಲ್ಲೇ ಮೋದಿ ಹವಾ ಇಲ್ಲ ಇನ್ನು ಕರ್ನಾಟಕದಲ್ಲಿ ಅವರ ಹವಾ ಹೇಗೆ ನಡೆಯುತ್ತೆ ಎಂದರು. ಇಲ್ಲಿ ಸಿದ್ದರಾಮಯ್ಯ ಹಾಗು ಪರಮೇಶ್ವರ್ ಅವಾಂತ ಬಲಿಷ್ಠ ನಾಯಕರಿದ್ದಾರೆ ಎಂದು ಹೇಳಿದರು.

ಪಡಿತರ ಚೀಟಿಗಾಗಿ ಅರ್ಜಿ ಹಾಕಿದವರಿಗೆ ಸ್ಪೀಡ್ ಪೋಸ್ಟ್ ಮೂಲಖ ಪಡಿತರ ಚೀಟಿಗಳನ್ನು ಹಂಚಲಾಗುತ್ತಿದೆ ಎಂದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top