fbpx
ಮನೋರಂಜನೆ

ಮಗಳ ಮದುವೆಯ ಸಂಭ್ರಮದಲ್ಲಿದ್ದಾರೆ ಹಿರಿಯ ನಟ ಸತ್ಯಜಿತ್.

ಮಗಳ ಮದುವೆಯ ಸಂಭ್ರಮದಲ್ಲಿದ್ದಾರೆ ಹಿರಿಯ ನಟ ಸತ್ಯಜಿತ್.

 

 

ಐನೂರಕ್ಕೂ ಅಧಿಕ ಚಲನಚಿತ್ರದಲ್ಲಿ ನಟನೆ ಮಾಡಿರುವ ಕನ್ನಡ ಚಿತ್ರರಂಗದ ಹಿರಿಯ ಕಲಾವಿದ ಸತ್ಯಜಿತ್ ಅವರು ಈಗ ತಮ್ಮ ಮಗಳ ಮದುವೆಯ ಸಂಭ್ರಮದಲ್ಲಿದ್ದಾರೆ. ಇತ್ತೀಚಿಗೆ ಗಾಂಗ್ರಿನ್’ನಿಂದಾಗಿ ತಮ್ಮ ಕಾಲು ಕಳೆದುಕೊಂಡಿರುವ ಅವರು ಚಿತ್ರರಂಗದಿಂದ ದೂರದಲ್ಲಿದ್ದಾರೆ. ನೆನ್ನೆ(ಜನವರಿ 04) ನಗರದ ಪ್ರೆಸ್ ಕ್ಲಬ್’ಗೆ ಆಗಮಿಸಿದ ಸತ್ಯಜಿತ್ ತಮ್ಮ ಮಗಳ ಮದುವೆಯ ವಿಚಾರವನ್ನು ಮಾಧ್ಯಮಗಳ ಮುಂದೆ ಬಿಚ್ಚಿಟ್ಟಿದ್ದಾರೆ ಎಲ್ಲರಿಗೂ ಲಗ್ನಪತ್ರಿಕೆಗಳನ್ನು ಕೊಟ್ಟು ಮದುವೆಗೆ ಬನ್ನಿ ಎಂದು ಆಮಂತ್ರಿಸಿದ್ದಾರೆ.

 

 

ಸತ್ಯಜಿತ್ ಅವರ ಮಗಳು ಮಾಹಿ ಸ್ವಾಲೆಹಾ, ಜೆಟ್ ಏರ್ವೇಸ್’ನಲ್ಲಿ ಪೈಲೆಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು ಕಾರವಾರ ಮೂಲದ ತೌಸಿಪ್ ಖಾನ್ ಎಂಬುವವರನ್ನು ವರಿಸಲಿದ್ದಾರೆ. ಇವರಿಬ್ಬರ ವಿವಾಹ ಮಹೋತ್ಸವ ಯಲಹಂಕದಲ್ಲಿರುವ ‘ಮಧುರ ಮಿಲನ ಕನ್ವೆಷನ್ ಸೆಂಟರ್’ ನಲ್ಲಿ ಜನವರಿ 07ನೇ ತಾರೀಕಿನಂದು ನಡೆಯಲಿದೆ.

 

 

40 ವರ್ಷಗಳಿಂದ ಚಿತ್ರರಂಗದಲ್ಲಿರುವ ಸತ್ಯಜಿತ್, 650ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಕಲಾವಿದ. ಇತ್ತೀಚಿಗೆ ಬಾಗಲಕೋಟೆಯಲ್ಲಿ ಕೃತಕ ಕಾಲು ಜೋಡಣೆ ಮಾಡಿಸಿಕೊಂಡಿರುವ ಇವರಿಗೆ ಮುಂದೆಯೂ ಚಿತ್ರಗಳಲ್ಲಿ ನಟಿಸುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ

 

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top