fbpx
ಕಿರುತೆರೆ

ಇಡೀ ಕನ್ನಡಿಗರೇ ಮೆಚ್ಚುವಂಥ ಕೆಲಸ ಮಾಡಿದ ಪುಟ್ಟಗೌರಿ ರಂಜನಿ.

ಇಡೀ ಕನ್ನಡಿಗರೇ ಮೆಚ್ಚುವಂಥ ಕೆಲಸ ಮಾಡಿದ ಪುಟ್ಟಗೌರಿ ರಂಜನಿ.

 

 

ಕಿರುತೆರೆಯಲ್ಲಿ ಅತಿ ಹೆಚ್ಚು ಜನಪ್ರಿಯತೆ ಹೊಂದಿರುವ ಧಾರಾವಾಹಿಗಳ ಪೈಕಿ ಮೊದಲ ಸ್ಥಾನದಲ್ಲಿರುವ ‘ಪುಟ್ಟಗೌರಿ ಮದುವೆ’ ಧಾರಾವಾಹಿಯ ನಾಯಕಿ ರಂಜನಿ ಸದ್ಯ ಕಿರುತೆರೆಯ ಮಟ್ಟಿಗೆ ಸೂಪರ್ ಸ್ಟಾರ್.. ಪುಟ್ಟಗೌರಿ ಎಂಬ ಹೆಸರು ಕೇಳಿದ ಕ್ಷಣ ಎಲ್ಲರಿಗೂ ನೆನಪಾಗೋದು ಆಕೆಯ ಅಳುಮುಂಜಿ ಮುಖ, ಗೌರಮ್ಮನ ರೀತಿಯ ವೇಷಭೂಷಣ. ಧಾರಾವಾಹಿಯಲ್ಲಿ ತನ್ನ ನಟನೆಯಿಂದ ಮಹಿಳಾಮಣಿಗಳ ಮನಸ್ಸನ್ನು ಕದ್ದಿರುವ ಪುಟ್ಟಗೌರಿ ಅಲಿಯಾಸ್ ರಂಜಿನಿ ಧಾರಾವಾಹಿಯಲ್ಲಿ ನಡೆಯುವ ವಿಚಿತ್ರ ವಿಸ್ಮಯಗಳಿಂದ ಟ್ರೋಲ್ ಪೇಜ್ ಗಳಿಗೆ ಆಹಾರವಾಗಿದ್ದುದು ಸುಳ್ಳಲ್ಲ..

 

 

ರಾಜಹಂಸ ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟಿದ್ದ ಪುಟ್ಟಗೌರಿ ಅಲಿಯಾಸ್ ರಂಜನಿ ನಟನೆಯ ಹೊರತಾಗಿಯೂ ಸಾಕಷ್ಟು ಪ್ರತಿಭೆಯನ್ನು ಹೊಂದಿದ್ದಾರೆ, ಸ್ವತಃ ಹಿನ್ನಲೆ ಗಾಯಕರೂ ಆಗಿರುವ ರಂಜನಿ ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಕಲಿತಿದ್ದು ಅವರ ಮೊದಲ ಚಿತ್ರದಲ್ಲೇ ಹಾಡೊಂದನ್ನ ಹಾಡಿ ಮೆಚ್ಚುಗೆ ಗಳಿಸಿಕೊಂಡಿದ್ದಾರೆ. ಈಗ ರಂಜನಿ ರಾಘವನ್ ಕರುಣಾದಿ ನಾಡಿಗೆ ಕೀರ್ತಿ ತರುವಂತಹ ಕೆಲಸವೊಂದನ್ನ ಮಾಡಿದ್ದಾಳೆ. ಅದು ಏನು ಅಂತೀರಾ? ಮುಂದೆ ಓದಿ.

 

“ಮಿಸ್ ಇಂಡಿಯಾ ಸೂಪರ್ ಮಾಡೆಲ್ ಅವಾರ್ಡ್” ಅನ್ನು ತಮ್ಮ ಮುಡಿಗೇರಿಕೊಂಡ ಪುಟ್ಟಗೌರಿ:

ಹೌದು. ರಂಜನಿರಾಘವನ್ “ಮಿಸ್ ಇಂಡಿಯಾ ಸೂಪರ್ ಮಾಡೆಲ್” ಸ್ಪರ್ಧೆಯಲ್ಲಿ ಗೆದ್ದು ನಾಡಿ ಕೀರ್ತಿ ತಂದುಕೊಟ್ಟಿದ್ದಾರೆ. ಸಿಲ್ವರ್ ಸ್ಟಾರ್ ಫಿಲ್ಮ್ ಮೇಕರ್ಸ್ ಸ್ಕೂಲ್ ಆಫ್ ಫ್ಯಾಷನ್ ವತಿಯಿಂದ ಆಯೋಜಿತವಾಗಿದ್ದ ‘ಮಿಸ್ಟರ್ ಅಂಡ್ ಮಿಸ್ ಸೂಪರ್ ಮಾಡೆಲ್ 2017’ರಲ್ಲಿ ಭಾಗವಹಿಸಿದ್ದ ರಂಜನಿ ರಾಘವನ್ ಮಹಿಳಾ ವಿಭಾಗದ ಮೊದಲ ಸ್ಥಾನದಲ್ಲಿ ಗೆದ್ದು ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು. ಉಳಿದಂತೆ ಐಶ್ವರ್ಯ ಮೊದಲನೇ ರನ್ನರ್ ಆಫ್ ಹಾಗೂ ‌ಅನಿತಾ ಎರಡನೇ ರನ್ನರ್ ಆಫ್ ಸ್ಥಾನಗಳನ್ನ ಪಡೆದಿಕೊಂಡರು.

 

 

ಇತ್ತೀಚಿಗೆ ಬೆಂಗಳೂರಿನ ಹೋಟೆಲ್;’ವೊಂದರಲ್ಲಿ ಆಯೋಜಿಸಲಾಗಿದ್ದ ಈ ಸ್ಫರ್ಧೆಯಲ್ಲಿ ದೇಶದ ವಿವಿಧ ಭಾಗಗಳಿಂದ ಬಂದಿದ್ದ ಮಾಡೆಲ್’ಗಳು ಭಾಗವಹಿಸಿದ್ದರು. ಈ ಪೈಕಿ ರಂಜನಿ ರಾಘವನ್ ಮಿಸ್ ಇಂಡಿಯಾ ಸೂಪರ್ ಮಾಡೆಲ್ 2017 ಅವಾರ್ಡ್ ಅನ್ನು ಗೆಳ್ಳುವ ಮೂಲಕ ಕನ್ನಡಿಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top