fbpx
ರಾಜಕೀಯ

tv9 ಪತ್ರಕರ್ತ ರಂಗನಾಥ್ ಭಾರದ್ವಜ್’ರಿಂದ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಲೀಗಲ್ ನೋಟಿಸ್!

tv9 ಪತ್ರಕರ್ತ ರಂಗನಾಥ್ ಭಾರದ್ವಜ್’ರಿಂದ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಲೀಗಲ್ ನೋಟಿಸ್!

 

 

ಮಾಧ್ಯಮ ಲೋಕದ ಕ್ಷಿಪ್ರ ಬೆಳವಣಿಗೆಯೊಂದರಲ್ಲಿ ಟಿವಿ9ನ ಹಿರಿಯ ಪತ್ರಕರ್ತ ರಂಗನಾಥ್ ಭಾರದ್ವಾಜ್ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿಗೆ ಲೀಗಲ್ ನೋಟೀಸ್ ಜಾರಿಗೊಳಿಸಿದ್ದಾರೆ. ಕೆಲ ದಿನಗಳ ಹಿಂದೆ ಕುಮಾರಸ್ವಾಮಿಯವರು ಮಾಧ್ಯಮಗೋಷ್ಠಿ ನಡೆಸಿ, ರಂಗನಾಥ್ ಭಾರದ್ವಾಜ್ ಹಣದ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಿದ್ದರು.

ಬೆಂಗಳೂರಿನ ದಿವಾಕರ ಅಸೋಸಿಯೇಟ್ಸ್ ವಕೀಲರ ಮೂಲಕ ರಂಗನಾಥ್ ಭಾರದ್ವಾಜ್, ಕುಮಾರಸ್ವಾಮಿ ಮತ್ತು ಈ ಸುಳ್ಳು ಆರೋಪವನ್ನು ಪ್ರಚಾರಮಾಡಿದ ರಾಜ್ಯದ ಕೆಲ ಹಿರಿಯ ಪತ್ರಕರ್ತರಿಗೆ ಲೀಗಲ್ ನೋಟೀಸ್ ಜಾರಿಗೊಳಿಸಿದ್ದಾರೆ..ಕುಮಾರಸ್ವಾಮಿ ಅವರನ್ನು ಮೊದಲನೇ ಪಾರ್ಟಿಯನ್ನಾಗಿ ಮಾಡಲಾಗಿದ್ದು, ವಿಜಯವಾಣಿ ಸಂಪಾದಕ ಕೆ.ಎಚ್. ಚನ್ನೇಗೌಡ ಎರಡನೇ ಪಾರ್ಟಿಯಾಗಿದ್ದಾರೆ. ಪ್ರಜಾವಾಣಿ ಸಂಪಾದಕ ಕೆ.ಎನ್. ಶಾಂತಕುಮಾರ್ ಮೂರನೇ ಪಾರ್ಟಿಯಾಗಿದ್ದು, ದಿಗ್ವಿಜಯ ಕನ್ನಡ ವಾಹಿನಿಯ ರಾಜಕೀಯ ವಿಭಾಗದ ಮುಖ್ಯಸ್ಥ ವಿಜಯ್ ಜೊನ್ನಹಳ್ಳಿ ನಾಲ್ಕನೇ ಪಾರ್ಟಿಯಾಗಿದ್ದಾರೆ.

 

 

ರಂಗನಾಥ್ ಭಾರದ್ವಾಜ್ ಅವರು ಜೆಡಿಎಸ್ ಪಕ್ಷದ ನಾಯಕರೊಬ್ಬರಿಗೆ ಬೆದರಿಕೆ ಹಾಕಿದ್ದಾರೆ. ಹಣಕ್ಕಾಗಿ ಬೇಡಿಕೆ ಇಟ್ಟ ಧ್ವನಿಮುದ್ರಿಕೆ ತಮ್ಮ ಬಳಿ ಇದೆ ಎಂದು ಹೇಳಿರುತ್ತೀರಿ. ಬ್ಲ್ಯಾಕ್ ಮೇಲ್ ಮಾಡಿದ್ದಾರೆ ಎಂದು ಆರೋಪಿಸಿರುತ್ತೀರಿ. ಈ ಮೂಲಕ ರಂಗನಾಥ್ ಭಾರದ್ವಾಜ್ ಅವರ ಅಸಂಖ್ಯಾತ ಸ್ನೇಹಿತರ ಮತ್ತು ಹಿತೈಷಿಗಳ ಮಧ್ಯೆ ಅವರ ಗೌರವಕ್ಕೆ ಚ್ಯುತಿ ಉಂಟಾಗುವಂತೆ ಮಾಡಿದ್ದೀರಿ ಎಂದು ನೋಟೀಸ್ ನಲ್ಲಿ ಹೇಳಲಾಗಿದೆ. ಈ ಬಗ್ಗೆ ಕಾರಣ ಕೇಳಿ ನೋಟೀಸ್ ಜಾರಿಗೊಳಿಸಲಾಗಿದೆ..ಇದರ ಜೊತೆಗೆ ಹಿರಿಯ ಪತ್ರಕರ್ತರನ್ನೂ ಪಕ್ಷಗಾರರನ್ನಾಗಿ ಮಾಡಲಾಗಿದೆ.

 

 

ಕಳೆದ ಡಿಸೆಂಬರ್ 14ರಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಾಧ್ಯಮ ಗೋಷ್ಠಿಯಲ್ಲಿ ಬಹಿರಂಗವಾಗಿ “ಹಣ ನೀಡದಿದ್ದರೆ ಚುನಾವಣೆಯಲ್ಲಿ ಗೆಲ್ಲದಂತೆ ನೋಡಿಕೊಳ್ಳುವುದಾಗಿ ಟಿ.ವಿ 9 ನಿರೂಪಕ ರಂಗನಾಥ್ ಭಾರದ್ವಾಜ್ ನಮ್ಮ ಪಕ್ಷದ ನಾಯಕರೊಬ್ಬರಿಗೆ ಬೆದರಿಕೆ ಹಾಕಿದ್ದಾರೆ. ಆ ಆಡಿಯೋ ನನ್ನ ಬಳಿ ಇದೆ’” ಎಂದು ಆರೋಪ ಮಾಡಿದ್ದರು. ಇದೀಗ ರಂಗನಾಥ್ ಭಾರದ್ವಾಜ್ ಕುಮಾರಸ್ವಾಮಿಗೆ ಲೀಗಲ್ ನೋಟೀಸ್ ಜಾರಿಗೊಳಿಸಿದ್ದು, ಇದಕ್ಕೆ ಅವರು ಹೇಗೆ ಪ್ರತಿಕ್ರಿಯೆ ನೀಡಲಿದ್ದಾರೆ ಎಂಬುದು ರಾಜಕೀಯ ವಲಯದ ಜೊತೆ ಮಾಧ್ಯಮ ರಂಗದಲ್ಲೂ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ. ಕುಮಾರಸ್ವಾಮಿ ಆಡಿಯೋ ಬಿಡುಗಡೆ ಮಾಡ್ತೀನಿ ಅಂತ ಹೇಳಿ ಬಿಡುಗಡೆ ಮಾಡಿಲ್ಲ…ಅದರ ಅರ್ಥ ಆಡಿಯೋ ಇಲ್ಲ ಅಂತ ಅಲ್ವಾ ಎಂಬ ಮಾತು ಕೇಳಿಬರುತ್ತಿದೆ.

 

 

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top