fbpx
ರಾಜಕೀಯ

ಡಿಕೆಶಿ ಗೆ ತಿರುಗೇಟು ನೀಡಿದ ಯೋಗೇಶ್ವರ್: ಮಹಿಳೆಯಿಂದ ಕೊರಳಪಟ್ಟಿ ಹಿಡಿಸಿ ಪೊರಕೆಯಲ್ಲಿ ಹೊಡೆಸ್ತೀನಿ ಅಂದ್ರು

ಡಿಕೆಶಿ ಗೆ ತಿರುಗೇಟು ನೀಡಿದ ಯೋಗೇಶ್ವರ್: ಮಹಿಳೆಯಿಂದ ಕೊರಳಪಟ್ಟಿ ಹಿಡಿಸಿ ಪೊರಕೆಯಲ್ಲಿ ಹೊಡೆಸ್ತೀನಿ ಅಂದ್ರು

 

 

ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ನಡೆದ ರಾಜ್ಯ ಸರ್ಕಾರದ ಸಾಧನಾ ಸಮಾವೇಶದಲ್ಲಿ ಸಿ ಪಿ ಯೋಗೇಶ್ವರ್ ವಿರುದ್ಧ ಡಿ ಕೆ ಶಿವಕುಮಾರ್ ಹಾಗು ಸಿಎಂ ಸಿದ್ದರಾಮಯ್ಯ ಜಂಟಿ ಸಮರ ಸಾರಿದ್ದರು, ಯೋಗೇಶ್ವರ್ ಮೂಲತಃ ಕಾಂಗ್ರೆಸ್ ಶಾಸಕಲ್ಲ ಜಮಾಜವಾದಿ ಪಕ್ಷದವರು, ಯೋಗೇಶ್ವರ್ ಸಾಮಾಜಿಕ ಮೌಲ್ಯ ಇಲ್ಲದ ರಾಜಕಾರಣಿ ಎಂದು ಗುಡುಗಿದರು. ಇವತ್ತಿನ ಸರ್ಕಾರೀ ಕಾರ್ಯಕ್ರಮ ಯೋಗೇಶ್ವರ್ ಅಧ್ಯಕ್ಷೆತೆಯಲ್ಲಿ ನಡೆಯಬೇಕಿತ್ತು ಆದರೆ ಭಯದಿಂದ ಅವರು ಹಾಜರಾಗಿಲ್ಲ ಕ್ಷೇತ್ರದ ಜನತೆಗೆ ಸುಳ್ಳು ಹೇಳಿರುವ ಬಗ್ಗೆ ಸಿಕ್ಕಿಹಾಕಿಹೊಳ್ಳುವ ಭಯ ಅವರಿಗೆ ಎಂದು ಹೇಳಿದರು. ಅಸೆಂಬ್ಲಿ ಗೆ ಬಾರದ ಶಾಸಕರೆಂದರೆ ಯೋಗೇಶ್ವರ್ ಎಂದರು. ಡಿ ಕೆ ಶಿವಕುಮಾರ್ ಮಾತನಾಡಿ ಹೈಕಮಾಂಡ್ ಹೇಳಿದವರು ಇಲ್ಲಿ ಅಭ್ಯರ್ಥಿ ಆಗ್ತಾರೆ. ಆದರೆ ಅಭ್ಯರ್ಥಿ ಇಲ್ಲಿ ನೆಪ ಮಾತ್ರ. ನಾನು ಹಾಗೂ ಡಿ.ಕೆ.ಸುರೇಶ್ ಇಲ್ಲಿನ ನಿಜವಾದ ಅಭ್ಯರ್ಥಿಗಳು ನೆನಪಿರಲಿ. 30 ವರ್ಷದಿಂದ ನನ್ನನ್ನು ನೋಡಿದಿರಾ ಅಂತ ಡಿಕೆಶಿ ಹೇಳಿದ್ರು.

 

 

 

ಸಚಿವ ಡಿಕೆ ಶಿವಕುಮಾರ್ ಮೇಲೆ ತಮಗಿದ್ದ ಸಿಟ್ಟನ್ನು ಬಹಿರಂಗವಾಗಿ ಹೊರ ಹಾಕಿ ಪ್ರತ್ಯುತ್ತರ ನೀಡಿದ ಶಾಸಕ ಸಿ.ಪಿ.ಯೋಗೀಶ್ವರ್ ಚನ್ನಪಟ್ಟಣದಲ್ಲಿ ಸಾಮಾನ್ಯ ಅಭ್ಯರ್ಥಿಯನ್ನ ಕಣಕ್ಕಿಳಿಸಿ ಇಂಧನ ಸಚಿವ ಡಿಕೆ ಶಿವಕುಮಾರ್ ವಿರುದ್ಧ ಗೆಲ್ಲಿಸ್ತೀನಿ ಅಂತ ಚನ್ನಪಟ್ಟಣ ಸವಾಲ್ ಹಾಕಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯೋಗೇಶ್ವರ್ ಚನ್ನಪಟ್ಟಣ ಕ್ಷೇತ್ರವನ್ನ ಮದುವೆ ಮಾಡಿಕೊಂಡಿದ್ದೇನೆ ಎನ್ನುವ ಸಚಿವ ಡಿ.ಕೆ ಶಿವಕುಮಾರ್ ಇಲ್ಲಿ ಯಾರನ್ನಾದ್ರೂ ಮದ್ವೆ ಮಾಡಿಕೊಂಡಿದ್ದು ಮುಂದಿನ ಚುನಾವಣೆಗೆ ನಿಲ್ಲಿಸ್ತಿದ್ದಾರಾ ಅನ್ನೋದನ್ನ ನಮಗೆ ತಿಳಿಸಬೇಕು. ಇಲ್ಲವೇ ಚನ್ನಪಟ್ಟಣದಲ್ಲಿ ಮಹಿಳೆಯೊಬ್ಬಳ ಕೈಯಲ್ಲಿ ಡಿಕೆಶಿ ಕೊರಳಪಟ್ಟಿ ಹಿಡಿಸಿ ಪೊರಕೆಯಲ್ಲಿ ಹೊಡೆಸ್ತೀನಿ ಅಂತ ಸವಾಲು ಹಾಕಿದ್ರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top