fbpx
ರಾಜಕೀಯ

ಪಧಾನಿ ಮೋದಿಯವರಿಗೆ ಯಾರ್ಯಾರೋ ಏನೇನೊ ಗಿಫ್ಟ್ ಕೊಡ್ತಾರೆ , ಆದ್ರೆ ಈ ಗಿಫ್ಟ್ ತಗೊಂಡಿರೋದು ಇದೆ ಮೊದಲು

ಪಧಾನಿ ಮೋದಿಯವರಿಗೆ ಯಾರ್ಯಾರೋ ಏನೇನೊ ಗಿಫ್ಟ್ ಕೊಡ್ತಾರೆ , ಆದ್ರೆ ಈ ಗಿಫ್ಟ್ ತಗೊಂಡಿರೋದು ಇದೆ ಮೊದಲು

 

ಮೋದಿಗೆ ಹೀಗೊಂದು ಡಿಫರೆಂಟ್ ಗಿಫ್ಟ್

ಪ್ರಧಾನಿ ಮೋದಿ ಅವರಿಗೆ ಇಸ್ರೇಲ್‍ನ ಪ್ರಧಾನಿ ಬೆಂಜಮಿನ್ ನೇತನ್ಯಾಹು ಅವರು ಅದ್ಭುತ ಉಡುಗೊರೆಯೊಂದನ್ನು ನೀಡಲಿದ್ದಾರೆ. ಹೌದು! ನೀರಿನಲ್ಲಿರುವ ಉಪ್ಪಿನಾಂಶವನ್ನು ಶುದ್ಧೀಕರಿಸುವ ವಾಹನವೊಂದನ್ನು ನೀಡಲಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಏನಿದು ಉಪ್ಪಿನಾಂಶ ಶೂದ್ಧೀಕರಣ ವಾಹನ?

ನೀರಿನಲ್ಲಿರುವ ಲವಣಾಂಶವನ್ನು ಬೇರ್ಪಡಿಸಿ, ಗುಣಮಟ್ಟದ ನೀರನ್ನು ಉತ್ಪಾದಿಸುವ ಸಲುವಾಗಿ ಈ ವಾಹನವಿದ್ದು, ಇದು 20 ಸಾವಿರ ಲೀಟರ್ ಉಪ್ಪುನೀರು ಹಾಗೂ 80 ಸಾವಿರ ಲೀಟರ್ ಕಲುಷಿತ ನೀರನ್ನು ಶುದ್ಧಗೊಳಿಸುವ ಸಾಮಥ್ರ್ಯವನ್ನು ಈ ವಾಹನ ಹೊಂದಿದೆ.

ಇಂತಹ ವಾಹನವನ್ನು ಇಸ್ರೇಲ್ ಪ್ರಧಾನಿ ಮೋದಿಗೆ ಏಕೆ ಕೊಡಲಿದ್ದಾರೆ ಎಂಬುದಕ್ಕೂ ಒಂದು ಕಾರಣವಿದೆ. ಕಳೆದ ಜುಲೈನಲ್ಲಿ ಪ್ರಧಾನಿ ಮೋದಿ ಅವರು ಇಸ್ರೇಲ್‍ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅಲ್ಲಿನ ಓಲ್ಲಾ ಸಮುದ್ರ ತೀರದಲ್ಲಿ ಇದೇ ವಾಹನದಲ್ಲಿ ಕುಳಿತು ಸಂಚರಿಸಿದ್ದರು. ಆಗ ವಾಹನದ ಕಾರ್ಯನಿರ್ವಹಣೆ ಬಗ್ಗೆ ¸ಂಪೂರ್ಣ ತಿಳಿದುಕೊಂಡು ಅದರ ಬಗ್ಗೆ ಸ್ವತಃ ಮೋದಿ ಕೌತುಕರಾಗಿದ್ದರು. ಹಾಗಾಗಿ ಇದೇ ಜನವರಿ 14ರಂದು ಇಸ್ರೇಲ್ ಪ್ರಧಾನಿ ಭಾರತಕ್ಕೆ ಪ್ರವಾಸ ಬರುತ್ತಿರುವ ಹಿನ್ನೆಲೆಯಲ್ಲಿ ಮೋದಿ ಅವರಿಗೆ ಉಪ್ಪಿನಾಂಶ ಶುದ್ಧೀಕರಣ ವಾಹನವನ್ನು ನೀಡಲಿದ್ದಾರೆ ಎಂದು ತಿಳಿದುಬಂದಿದೆ.

ಈ ವಾಹನದಿಂದ ಬಹಳ ಉಪಯೋಗಗಳಿದ್ದು, ಇದು ಕೇವಲ ಉಪ್ಪಿನ ನೀರನ್ನು ಶುದ್ಧಿಕರಿಸುವುದು ಮಾತ್ರವಲ್ಲ; ಭೂಕಂಪ, ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ನಿರಾಶ್ರಿತರಿಗೆ, ಸಂತ್ರಸ್ತರಿಗೆ ಕುಡಿಯುವ ನೀರಿನ ಪೂರೈಕೆಯನ್ನು ಸಹ ಮಾಡಬಲ್ಲದು.

ಬಹಳ ವರ್ಷಗಳಿಂದ ಇಸ್ರೇಲ್ ಭಾರತದೊಂದಿಗಿನ ಸ್ನೇಹ ಸಂಬಂಧಕ್ಕಾಗಿ ಹವಣಿಸುತ್ತಿತ್ತು. ಮೋದಿ ಪ್ರಧಾನಿ ಆದ ಬಳಿಕ ಇಸ್ರೇಲ್ ಗೆ ಭೇಟಿ ಕೊಟ್ಟು ಸ್ನೇಹ ಬಾಂಧವ್ಯಕ್ಕೆ ಪುಷ್ಟಿ ನೀಡಿದರು. ಈಗ ಜನವರಿ 14ರಂದು ಇಸ್ರೇಲ್ ಪ್ರಧಾನಿ ಭಾರತಕ್ಕೆ ಬರುತ್ತಿರೋದು ಈ ನಂಟನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top