ಉದ್ಯೋಗ

ಬಾಗಲಕೋಟೆಯ ಶ್ರೀ ಬಸವೇಶ್ವರ ಸಹಕಾರಿ ಬ್ಯಾಂಕ್ ನಲ್ಲಿ ಹಿರಿಯ ಸಹಾಯಕ, ಜವಾನ ಹುದ್ದೆಗಳಿಗೆ ಅರ್ಜಿ ಅಹ್ವಾನ

ಬಾಗಲಕೋಟೆಯ ಶ್ರೀ ಬಸವೇಶ್ವರ ಸಹಕಾರಿ ಬ್ಯಾಂಕ್ ನಲ್ಲಿ ಹಿರಿಯ ಸಹಾಯಕ, ಜವಾನ ಹುದ್ದೆಗಳಿಗೆ ಅರ್ಜಿ ಅಹ್ವಾನ

ಬಾಗಲಕೋಟೆಯ ಶ್ರೀ ಬಸವೇಶ್ವರ ಸಹಕಾರಿ ಬ್ಯಾಂಕ್ ನಿ. ದಲ್ಲಿ ಹಿರಿಯ ಸಹಾಯಕರು, ಜವಾನ / ಸಿಪಾಯಿ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿ ಅಹ್ವಾನಿಸಲಾಗಿದೆ.

ಸಂಸ್ಥೆಯ ಹೆಸರು: ಬಾಗಲಕೋಟೆಯ ಶ್ರೀ ಬಸವೇಶ್ವರ ಸಹಕಾರಿ ಬ್ಯಾಂಕ್ ನಿ.

ಹುದ್ದೆಗಳ ಸಂಖ್ಯೆ : 64

ಹುದ್ದೆಗಳ ವಿವರ

1.ಹಿರಿಯ ಸಹಾಯಕರು – 40

2.ಜವಾನ / ಸಿಪಾಯಿ – 24

ವಿದ್ಯಾರ್ಹತೆ : ಕ್ರ.ಸಂ 1ರ ಹುದ್ದೆಗಳಿಗೆ ಮಾನ್ಯತೆ ಹೊಂದಿರುವÀ ವಿಶ್ವವಿದ್ಯಾಲಯ ಅಥವಾ ಶಿಕ್ಷಣ ಸಂಸ್ಥೆಯಿಂದ ಪದವಿ ಪಡೆದಿರಬೇಕು. ಕ್ರ.ಸಂ 2ರ ಹುದ್ದೆಗೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಎರಡು ಹುದ್ದೆಗಳಿಗೂ ಕನ್ನಡ ಭಾಷೆ ಓದಲು ಮತ್ತು ಬರೆಯಲು ತಿಳಿದಿರಬೇಕು.

ವಯೋಮಿತಿ : ಸಾಮಾನ್ಯ ವರ್ಗದವರಿಗೆ ಕನಿಷ್ಠ 18 ರಿಂದ 35 ವರ್ಷ ವಯಸನ್ನು ನಿಗದಿಗೊಳಿಸಲಾಗಿದ್ದು, ಪ್ರವರ್ಗ – 2ಎ, 2ಬಿ, 3ಎ, 3ಬಿ ವರ್ಗದವರಿಗೆ ಗರಿಷ್ಠ 38 ವರ್ಷ, ಪ.ಜಾ, ಪ.ಪಂದವರಿಗೆ 40 ವರ್ಷದವರೆಗೆ ಸಡಿಲತೆ ನೀಡಲಾಗಿದೆ.

 

ಶುಲ್ಕ : ಕ್ರ.ಸಂ 1ರ ಹುದ್ದೆಗೆ ಅರ್ಜಿ ಸಲ್ಲಿಸುವ ಸಾಮಾನ್ಯ ಮತ್ತು ಇತರ ವರ್ಗದವರಿಗೆ 600 ರೂ, ಕ್ರ.ಸಂ 2ರ ಹುದ್ದೆಗೆ 500 ರೂ ಹಾಗೂ ಎರಡು ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಪ.ಜಾ, ಪ.ಪಂ ದವರಿಗೆ 300 ರೂ ಶುಲ್ಕ ನಿಗದಿ ಮಾಡಿದೆ. ಈ ಶುಲ್ಕದ ಜೊತೆಗೆ ಅಂಚೆ ಕಛೇರಿ ಶುಲ್ಕ ಪಾವತಿಸುವಂತೆ ತಿಳಿಸಿದೆ. ಅಂಚೆ ಕಛೇರಿಯ ವಿದ್ಯುನ್ಮಾನ ಪಾವತಿ ಮಾಡಬೇಕು.

ಆಯ್ಕೆ ವಿಧಾನ:

(ಅ) ಹಿರಿಯ ಸಹಾಯಕರು:

1.ಹಿರಿಯ ಸಹಾಯಕರ ಖಾಲಿ ಹುದ್ದೆಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಮೂಲಕ ಈ ಕೆಳಗಿನ ವಿಧಾನದನ್ವಯ ಆಯ್ಕೆ ಮಾಡಲಾಗುವುದು.

2.ಹಿರಿಯ ಸಹಾಯಕರ ಹುದ್ದೆಗಳಿಗೆ ನಿಗದಿಪಡಿಸಿದ ಅರ್ಹಾತಾ ಪರೀಕ್ಷೆಯಲ್ಲಿ (Qualifying Exam) ಗಳಿಸಿದ ಗರಿಷ್ಠ ಅಂಕಗಳ ಆಧಾರದ ಮೇಲೆ ಆಭ್ಯರ್ಥಿಗಳನ್ನು ಹುದ್ದೆಯ 1:20ರ ಅನುಪಾತದಲ್ಲಿ ಲಿಖಿತ ಪರೀಕ್ಷೆಗೆ ಕರೆಯಲಾಗುವುದು.

3.ಹಿರಿಯ ಸಹಾಯಕರ ನೇರ ನೇಮಕಾತಿಗೆ ಸಂಬಂಧಿಸಿದಂತೆ ಬಾಹ್ಯ ಮೂಲಗಳು ನಡೆಸುವ ಲಿಖಿತ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಆಧಾರದ ಮೇಲೆ ಅರ್ಹತಾ ಪಟ್ಟಿಯನ್ನು ತಯಾರಿಸಿ ಅದನ್ನು ಆಧರಿಸಿ ಆಭ್ಯರ್ಥಿಗಳನ್ನು 1:5 ರ ಅನುಪಾತದಲ್ಲಿ ಲಿಖಿತ ಪರೀಕ್ಷೆಗೆ ಕರೆಯಲಾಗುವುದು. ಸಂದರ್ಶನಕ್ಕೆ ನಿಗದಿಪಡಿಸಿದ ಅಂಕಗಳು 15.

4.ಹಿರಿಯ ಸಹಾಯಕರ ನೇರ ನೇಮಕಾತಿಗೆ ಸಂಬಂಧಿಸಿದಂತೆ ಲಿಖಿತ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಶೇಕಡ 85 ಕ್ಕೆ ಲೆಕ್ಕಮಾಡಿ ಪ್ರಾಪ್ತವಾಗುವ ಅಂಕಗಳ ಶೇಕಡವಾರು ಪ್ರಮಾಣದ ಜೊತೆಗೆ ಸಂದರ್ಶನದಲ್ಲಿ ಗಳಿಸುವ ಅಂಕಗಳನ್ನು ಕೂಡಿಸಿ ಅಂತಿಮ ಅರ್ಹತಾ ಪಟ್ಟಿಯನ್ನು ಆಧಾರದ ಮೇಲೆ ತಯಾರಿಸಿ, ನಿಯಮಗಳನ್ನು ಅನುಸರಿಸಿ ಆಯ್ಕೆ ಪಟ್ಟಿಯನ್ನು ಸಿದ್ದಪಡಿಸಿ ನೇಮಕಾತಿ ಮಾಡಿಕೊಳ್ಳಲಾಗುವುದು.

(ಬ) ಸಿಪಾಯಿ/ ಜವಾನ ಆಯ್ಕೆ ವಿಧಾನ:

ಬ್ಯಾಂಕಿಗೆ ಬರುವ ಒಟ್ಟು ಅರ್ಜಿಗಳನ್ನು ಪರಿಶೀಲಿಸಿ, ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಪಡೆದ ಗರಿಷ್ಠ ಅಂಕಗಳ ಆಧಾರದ ಮೇಲೆ ಆರ್ಹತಾ ಪಟ್ಟಿಯನ್ನು ತಯಾರಿಸಿ. 1:5 ರ ಅನುಪಾತದಲ್ಲಿ ಆಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುವುದು. ಸಂದರ್ಶನಕ್ಕೆ ನಿಗದಿಪಡಿಸಲಾದ ಅಂಕಗಳು 15. ಎಸ್.ಎಸ್.ಎಲ್.ಸಿ.ಯಲ್ಲಿ ಪಡೆದ ಅಂಕಗಳ ಶೇಕಡವಾರು ಪ್ರಮಾಣವನ್ನು ಶೇಕಡ 85% ಕ್ಕೆ ಲೆಕ್ಕಮಾಡಿ ಗಳಿಸುವ ಅಂಕಗಳ ಶೇಕಡವಾರು ಪ್ರಮಾಣದ ಜೊತೆಗೆ ಸಂದರ್ಶನದಲ್ಲಿ ಗಳಿಸಿದ ಅಂಕಗಳನ್ನು ಕೂಡಿಸಿ. ಅರ್ಹತಾ ಪಟ್ಟಿಯನ್ನು ತಯಾರಿಸಿ ಆಯ್ಕೆ ಪಟ್ಟಿಯನ್ನು ಸಿದ್ಧಪಡಿಸಿ ನೇಮಕಾತಿ ಮಾಡಿಕೊಳ್ಳಲಾಗುವುದು.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 11-01-2018

ಹೆಚ್ಚಿನ ಮಾಹಿತಿಗಾಗಿ ಮತ್ತು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ವೆಬ್ ಸೈಟ್ ವಿಳಾಸ www.basavabank.com  ಗೆ ಭೇಟಿ ನೀಡಿ

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment

Leave a Reply

Your email address will not be published. Required fields are marked *

To Top