fbpx
ರಾಜಕೀಯ

ಪ್ರಧಾನಿ ಮೋದಿ ಯಾರ ಹಣದಲ್ಲಿ ವಿದೇಶ ಪ್ರವಾಸ ಮಾಡುತ್ತಾರೆ: ಸಿಎಂ ಸಿದ್ದರಾಮಯ್ಯ

ಪ್ರಧಾನಿ ಮೋದಿ ಯಾರ ಹಣದಲ್ಲಿ ವಿದೇಶ ಪ್ರವಾಸ ಮಾಡುತ್ತಾರೆ: ಸಿಎಂ ಸಿದ್ದರಾಮಯ್ಯ

 

ಸಾಧನ ಸಮಾವೇಶದಲ್ಲಿ ಭಾಗವಹಿಸಿ ಮಾದ್ಯಮಕ್ಕೆ ಹೇಳಿಕೆ ನೀಡಿರುವ ಮುಖ್ಯಮತ್ರಿ ಸಿದ್ದರಾಮಯ್ಯನವರು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಯಾರ ಹಣದಲ್ಲಿ ವಿದೇಶ ಪ್ರವಾಸ ಮಾಡುತ್ತಾರೆ? ಎಂದು ಪ್ರಶ್ನಿಸಿದರು ಇದರ ಜೊತೆಗೆ ಮೋದಿ ಅವರು ಸ್ವಂತ ದುಡ್ಡಲ್ಲಿ ವಿಮಾನದಲ್ಲಿ ಓಡಾಡುತ್ತಾರಾ ಎಂದು ಕೇಳಿದರು.

 

 

ಕಾಂಗ್ರೆಸ್ ಪಕ್ಷ ಸಾಧನಾ ಸಮಾವೇಶಕ್ಕೆ ದುಡ್ಡು ಹೊಂದಿಸಲು ಸರ್ಕಾರಿ ಅಧಿಕಾರಿಗಳನ್ನು ಬಳಸಿಕೊಳ್ಳುತ್ತಿದೆ ಎಂದು ಬಿಜೆಪಿ ಮುಖಂಡ ಶ್ರೀರಾಮುಲು ಆರೋಪಿಸಿದ್ದಾರೆ. ಕಲಬುರಗಿ ಜಿಲ್ಲೆ ಜೇವರ್ಗಿ ಪಟ್ಟಣದಲ್ಲಿ ನಡೆದ ನವಕರ್ನಾಟಕ ಬಿಜೆಪಿ ಪರಿವರ್ತನಾ ಯಾತ್ರೆಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ನ ಸಾಧನಾ ಸಮಾವೇಶವನ್ನು ಟೀಕಿಸಿದರು.

 

 

ಬಿಜೆಪಿ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ ಸರ್ಕಾರವು ಅಧಿಕಾರದಲ್ಲಿದ್ದಾಗ ಜನರ ತೆರಿಗೆ ಹಣದಲ್ಲಿಯೇ ಕಾರ್ಯಕ್ರಮಗಳು ನಡೆಯುತ್ತದೆ. ಅದು ಕೇಂದ್ರ ಸರ್ಕಾರ ಕೂಡಾ ಮಾಡುತ್ತದೆ ಎಂದರು.

ಇದೆ ವೇಳೆ ಮಾಜಿ ಪ್ರಧಾನಿ ದೇವೇಗೌಡರ ಕುರಿತು ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್.ಡಿ.ದೇವೇಗೌಡರ ಆಟ ಏನೂ ನಡೆಯಲ್ಲ ಎಂದರು. ದೇವೇಗೌಡರನ್ನು ನಾನು ಬಹಳ ವರ್ಷದಿಂದ ನೋಡಿದ್ದೇನೆ. ಗೌಡರ ಜತೆಗಿದ್ದು ನೋಡಿದ್ದೇನೆ, ವಿಪಕ್ಷದಲ್ಲಿದ್ದೂ ನೋಡಿದ್ದೇನೆ. ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಏರಲ್ಲ, ಆ ಕಾರಣವಾಗಿಯೇ ಕುಮಾರಸ್ವಾಮಿ ಕೂಡ ಏನೇನೋ ಹೇಳಿಕೆ ನೀಡಲು ಶುರು ಮಾಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

copying or reproducing the above content in any format without approval is criminal offence and will be prosecuted in Bengaluru court © ಸುವರ್ಣಾನುಡಿ

Click to comment
To Top